Thursday, 23rd March 2023

ಆರ್‌ಸಿಬಿಗೆ ಬ್ಯಾಟಿಂಗ್ ಸಲಹೆಗಾರರಾಗಿ ಸಂಜಯ್ ಬಂಗಾರ್ ನೇಮಕ

ಬೆಂಗಳೂರು: ಮುಂಬರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಂಗಾರ್ ನೇಮಕಗೊಂಡಿದ್ದಾರೆ.

ಬಂಗಾರ್ ಈ ಮೊದಲು ಟೀಮ್ ಇಂಡಿಯಾಗೆ ಐದು ವರ್ಷಗಳ ಕಾಲ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ರವಿ ಶಾಸ್ತ್ರಿ ತಂಡದ ನಿರ್ದೇಶಕರಾಗಿ ನೇಮಕಗೊಂಡ ಮೇಲೆ ಬಂಗಾರ್ 2019ರ ಏಕದಿನ ವಿಶ್ವಕಪ್ ಟೂರ್ನಿವರೆಗೂ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿದ್ದರು.

‘ಆರ್‌ಸಿಬಿ ಕುಟುಂಬಕ್ಕೆ ಸಂಜಯ್ ಬಂಗಾರ್ ಸ್ವಾಗತ, ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಬಂಗಾರ್ ಕಾರ್ಯನಿರ್ವಹಿಸ ಲಿದ್ದಾರೆ’ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ. ಬಂಗಾರ್, 2001 ರಿಂದ 2004 ರವರೆಗೆ ರಾಷ್ಟ್ರೀಯ ತಂಡದ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿದ್ದಾರೆ.

ತಂಡದ ನಿರ್ದೇಶಕ ಮೈಕ್ ಹೆಸ್ಸನ್, ಮುಖ್ಯಕೋಚ್ ಸಿಮೊನ್ ಕಾಟಿಚ್ ಒಳಗೊಂಡ ಸಹಾಯಕ ಸಿಬ್ಬಂದಿ ವರ್ಗ ಕೂಡಿಕೊಳ್ಳ ಲಿದ್ದಾರೆ. ಬಂಗಾರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮುಖ್ಯಕೋಚ್ ಆಗಿದ್ದರು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯೂ ಏಪ್ರಿಲ್ 2ನೇ ವಾರದಿಂದ ಆರಂಭಗೊಳ್ಳುವ ಸಾಧ್ಯತೆಗಳಿವೆ.

error: Content is protected !!