Saturday, 4th July 2020

ಸಂತ್ರಸ್ತರಿಗೆ ಶೀಘ್ರ ಪರಿಹಾರ: ಸಚಿವ ಸಿ ಸಿ ಪಾಟೀಲ ಭರವಸೆ

ಇತ್ತೀಚೆಗೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿಿತಿಯಿಂದಾಗಿ ಜನರು ಸಂಕಷ್ಟದಲ್ಲಿದ್ದು ಸಂತ್ರಸ್ತ ಗ್ರಾಾಮಗಳ ಪ್ರತಿ ಕುಟುಂಬಕ್ಕೆೆ ಕೇಂದ್ರ ಸರಕಾರದ 3,800 ರು ಜತೆ ರಾಜ್ಯ ಸರಕಾರ ಹೆಚ್ಚುವರಿಯಾಗಿ 6,200 ರು. ಸೇರಿಸಿ ಒಟ್ಟು 10 ಸಾವಿರ ರು. ತಾತ್ಕಾಾಲಿಕ ಪರಿಹಾರ ನೀಡುತ್ತಿಿದ್ದು ಇದು ಈವರೆಗಿನ ಅತಿ ಹೆಚ್ಚಿಿನ ಮೊತ್ತವಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ, ವಾಸನ, ಕೊಣ್ಣೂರಿನ ಎಪಿಎಂಸಿ ಆವರಣದಲ್ಲಿ ಸಂತ್ರಸ್ತರ ವಸತಿಗಾಗಿ ಜಿಲ್ಲಾಡಳಿತ ನಿರ್ಮಿಸಿರುವ ತಾತ್ಕಾಾಲಿಕ ಶೆಡ್, ಮೊದಲಾದ ಪರಿಹಾರ ಕಾರ್ಯ ಪರಾಮರ್ಶಿಸಿ ರೋಣ ತಾಲೂಕಿನ ಮೆಣಸಗಿ ಗ್ರಾಾಮಕ್ಕೆೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿ ಮಾತನಾಡಿದ ಅವರು,ಇತ್ತೀಚಿನ ನೆರೆ ಹಾವಳಿಯಿಂದಾಗಿ ಸಂಪುಟ ರಚನೆಯಾದ 24 ಗಂಟೆಯೊಳಗೆ ಸಚಿವರೆಲ್ಲರೂ ನೆರೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ಸಂತ್ರಸ್ತರ ಸಮಸ್ಯೆೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕೆಂಬ ಸೂಚನೆ ಇದೆ ಎಂದರು.

ಮಲಪ್ರಭಾ ಮತ್ತು ಬೆಣ್ಣೆೆ ಹಳ್ಳಗಳ ಪ್ರವಾಹದಿಂದ ಅಪಾರ ಹಾನಿಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬಹುತೇಕ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆೆ ಸ್ಥಳಾಂತರಿಸುತ್ತಿಿದೆ. ಮನೆ ಸಂಪೂರ್ಣವಾಗಿ ಹಾನಿಯಾಗಿದ್ದರೆ ಪ್ರತಿ ಮನೆಗೆ 5 ಲಕ್ಷ ರು ಅಥವಾ ಭಾಗಶಃ ಹಾನಿಯಾದಲ್ಲಿ 25 ಸಾವಿರದಿಂದ 1 ಲಕ್ಷದವರೆಗೆ ನೆರವು ನೀಡಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.
ಜಿಲ್ಲಾಡಳಿತದ ಬಳಿ ನೆರೆ ನಿರ್ವಹಣೆಗಾಗಿ 23 ಕೋಟಿ ರೂ. ಇದ್ದು, ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಬೆಳೆಹಾನಿ ಕುರಿತಂತೆ ಸಮೀಕ್ಷೆಯ ನಂತರ ಪರಿಹಾರ ಪ್ರಕಟಿಸಲಾಗುವುದು, ಪರಿಹಾರ ಮತ್ತು ಸಮೀಕ್ಷೆ ಸಂದರ್ಭದಲ್ಲಿ ಗ್ರಾಾಮಸ್ತರು ತಾಳ್ಮೆೆ ಹಾಗೂ ಸಂಯಮದಿಂದಿದ್ದು ಸಹಕಾರ ನೀಡುವಂತೆ ಗ್ರಾಾಮಸ್ಥರಿಗೆ ಸಚಿವರು ಮನವಿ ಮಾಡಿದರು.

ವಾಸನ ಗ್ರಾಾಮಕ್ಕೆೆ ಸಂಪರ್ಕ ಕಲ್ಪಿಿಸುತ್ತಿಿದ್ದ ಸೇತುವೆ ಸಂಪೂರ್ಣ ಕೊಚ್ಚಿಿ ಹೋಗಿದ್ದು, ತಾತ್ಕಾಾಲಿಕ ವ್ಯವಸ್ಥೆೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಮೇವಿನ ಕೊರತೆ ನಿವಾರಣೆಗೂ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಒಟ್ಟಾಾರೆಯಾಗಿ ನೆರೆ ಸಂತ್ರಸ್ತರ ಸಂಕಷ್ಟ ನಿವಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದ ಅವರು, ನಿಯಮಗಳ ಜೊತೆ ಮಾನವೀಯತೆಯಿಂದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಶ್ರೀನಾಥ ಜೋಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿ ಪಂ ಸದಸ್ಯ ರಾಜುಗೌಡ ಕೆಂಚನಗೌರ್ಡ , ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.

Leave a Reply

Your email address will not be published. Required fields are marked *