Wednesday, 26th February 2020

ಸಂವಿಧಾನ ಪರಾಮರ್ಶೆಗೆ ಇದು ಸಕಾಲ

ಅಭಿಪ್ರಾಯ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಎರಡು ದಶಕಗಳ ಹಿಂದೆ ವಾಜಪೇಯಿ ನೇತ್ರತ್ವದ ಕೇಂದ್ರ ಸರಕಾರವು ಭಾರತೀಯ ಸಂವಿಧಾನವನ್ನು ಪುನರ್ವಿಮರ್ಶಿಸಲು ನಿರ್ಧರಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಾಯಾಧೀಶರಾಗಿದ್ದ ನ್ಯಾಾ.ಎಂ.ಎನ್. ವೆಂಕಟಾಚಲಯ್ಯನವರ ನೇತೃತ್ವದಲ್ಲಿ ಸಂವಿಧಾನ ಪರಾಮರ್ಶೆ ಆಯೋಗ ರಚಿಸಿದ್ದರು. ಆಯೋಗದ ಬಹುಪಾಲು ಸದಸ್ಯರು ಸಂವಿಧಾನದ ಬಗ್ಗೆೆ ಅಪಾರ ಪಾಂಡಿತ್ಯವುಳ್ಳವರಾಗಿದ್ದರು. ಸಂವಿಧಾನದ ಬಗ್ಗೆೆ ತೃಪ್ತಿಿಯಿದ್ದರೂ ಅದರ ಅನುಷ್ಠಾಾನದಲ್ಲಿ ಕಂಡು ಬರಬಹುದಾದ ತೊಡಕುಗಳ ನಿವಾಹರಣೆಗೆ ಮತ್ತು ಜ್ವಲಂತ ಸಮಸ್ಯೆೆಗಳ ಪರಿಹಾರಕ್ಕೆೆ ಅದು ಸೀಮಿತವಾಗಿತ್ತು. ಅದಕ್ಕೆೆ ಪ್ರತಿಕ್ರಿಿಯೆಯಾಗಿ ಕೆಲವರು ಪರಾಮರ್ಶೆಯಾಗಬೇಕೆಂದು ಇನ್ನು ಕೆಲವರು ಇದೊಂದು ವ್ಯರ್ಥ ಕಸರತ್ತು ಆಗಲಿದೆಯೆಂದು ಜೋರಾದ ಧ್ವನಿಯೆತ್ತಲು ಪ್ರಾಾರಂಭಿಸಿದ್ದರು.

ಸಂವಿಧಾನವನ್ನು ವಿಮರ್ಶಿಸಿ ವರದಿ ಸಲ್ಲಿಸಿದ ಮಾತ್ರಕ್ಕೆೆ ಅದೇನೂ ಕಾನೂನಾಗಿ ಬಿಡುವುದಿಲ್ಲ. ಅದು ಸದನದಲ್ಲಿ ಮಂಡನೆಯಾಗಿ ನಂತರ ಅನುಮೋದಿಸಲ್ಪಡಬೇಕು. ಕೊನೆಯ ತೀರ್ಮಾನದ ಹಕ್ಕು ಇರುವುದು ಸದನಕ್ಕೆೆ ಮಾತ್ರ. ಆ ಸಮಯ ಬಿಜೆಪಿ ಪಕ್ಷಕ್ಕೆೆ ಬಹುಮತವಿರಲಿಲ್ಲ. 13 ಮಿತ್ರ ಪಕ್ಷಗಳನ್ನು ಬೆನ್ನಿಿಗೆ ಕಟ್ಟಿಿಕೊಂಡು ಕಾರ್ಯ ನಿರ್ವಹಿಸುತ್ತಿಿತ್ತು. ಇದೀಗ ಸದನದಲ್ಲಿ ಬಹುಮತವಿರುವುದರಿಂದ ಆಯೋಗ ರಚಿಸಿ, ವರದಿ ಸಲ್ಲಿಸಿ, ಪುನರ್ವಿಮರ್ಶಿಸಬಹುದು. ವಿಪಕ್ಷಗಳು, ನಾನಾ ಪಕ್ಷಗಳ ನೇತಾರರು ವಿರೋಧಿಸಬೇಕು ಎನ್ನುವುದಕ್ಕಾಾಗಿ ವಿರೋಧಿಸಬಾರದು. 370ನೇ ವಿಧಿ ರದ್ದತಿ ವಿಷಯದಲ್ಲಿ ಆದಂತೆ ಪರಿಹಾರ ಕಾಣದ್ದಕ್ಕೆೆ ಪರಿಹಾರ ಸಿಕ್ಕಿಿದ್ದರೆ ಸಂತೋಷ ಪಟ್ಟುಕೊಳ್ಳಬೇಕು.

ಸರಕಾರ ಜನರನ್ನು ನಿಯಂತ್ರಣದಲ್ಲಿಡುವಂತೆ, ಸಂವಿಧಾನ ಸರಕಾರವನ್ನು ನಿಯಂತ್ರಣದಲ್ಲಿಡುತ್ತದೆ. ಸಂವಿಧಾನ ಸ್ವಯಂ ಕಾರ್ಯ ನಿರ್ವಹಿಸುವುದಿಲ್ಲ. ಸರಕಾರ ಮತ್ತು ಜನ ಸಂವಿಧಾನವನ್ನು ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಸಂವಿಧಾನದ ಕರಡು ತಯಾರಿಸುವಲ್ಲಿ ಅಂಬೇಡ್ಕರ್ ತೋರಿದ ನೈಪುಣ್ಯ ಮತ್ತು ದಾರ್ಶನಿಕ ವಿವೇಚನೆ ಅವಿಸ್ಮರಣೀಯ. ಆದರೆ ಸಂವಿಧಾನ ಬದಲಿಸಬಾರದು. ಅದು ಇದ್ದಂತೆಯೇ ಇರತಕ್ಕದ್ದು ಎನ್ನುವ ಭಾವನೆ ಸಂವಿಧಾನದ ಯಾವ ನಿರ್ಮಾತೃಗಳಿಗೂ ಇರಲಿಲ್ಲ. ಬದಲಾಗುವ ಕಾಲಘಟ್ಟಕ್ಕೆೆ ಅನುಗುಣವಾಗಿ ಬದಲಾವಣೆಯೂ ಅಗತ್ಯ ಎಂಬುದನ್ನು ಅವರೂ ಮನಗಂಡಿದ್ದರು.

ಜಗತ್ತಿಿನಲ್ಲಿಯೇ ಅತಿ ದೊಡ್ಡ ಲಿಖಿತ ರೂಪದ ಸಂವಿಧಾನವಾಗಿರುವ ನಮ್ಮ ಸಂವಿಧಾನ ವಿವರವಾಗಿದೆ ಹಾಗೂ ಆದರ್ಶ ಪ್ರಾಾಯವಾಗಿದೆ. ಆದರೆ ಬದಲಾದ ಕಾಲ, ಜೀವನದ ಅಗತ್ಯಕ್ಕೆೆ ತಕ್ಕಂತೆ ಸಂವಿಧಾನದಲ್ಲಿಯೂ ಕೂಡಾ ಆಗಾಗ ಸೂಕ್ತ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಭವಿಷ್ಯದ ಬಗ್ಗೆೆ ಭವಿಷ್ಯವನ್ನು ಬರೆಯಲು ಯಾರಿಗೂ ಸಾಧ್ಯವಿಲ್ಲ. ಆದುದರಿಂದ ಪ್ರತಿಯೊಂದು ಸಂವಿಧಾನವು ಕೂಡಾ ತಿದ್ದುಪಡಿಗೆ ಅವಕಾಶ ಮಾಡಿ ಕೊಂಡಿರುತ್ತದೆ. ಈವರೆಗೆ ಸಂವಿಧಾನಕ್ಕೆೆ ನೂರಕ್ಕೂ ಮಿಕ್ಕಿಿ ತಿದ್ದುಪಡಿಗಳಾಗಿವೆ.

ಹಲವಾರು ನಿವೃತ್ತ ಮುಖ್ಯ ನ್ಯಾಾಯಾಧೀಶರುಗಳು, ವಕೀಲರು, ಶ್ರೇಷ್ಠ ಪತ್ರಕರ್ತರು ಅಭಿಪ್ರಾಾಯ ಪಡುವಂತೆ, ಪರಾಮರ್ಶೆಯಾಗಬೇಕಾಗಿರುವುದು ಕಾರ್ಯಾಂಗ, ಶಾಸಕಾಂಗ, ನ್ಯಾಾಯಾಂಗಗಳ ನಿರ್ವಹಣೆಯೇ ಹೊರತು ಸಂವಿಧಾನವಲ್ಲ ಮತ್ತು ಯಾವತ್ತೂ ಸಂವಿಧಾನವನ್ನು ಆರೋಪಿ ಸ್ಥಾಾನದಲ್ಲಿ ನಿಲ್ಲಿಸಬಾರದು. 1949 ರಲ್ಲಿ ರಚಿಸಿದ ಸಂವಿಧಾನದ ಸಭೆ, ಸಂವಿಧಾನ ತಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞರು, ರಾಜಕಾರಣಿಗಳು ಹೀಗೆ ಹತ್ತು ಹನ್ನೊೊಂದು ಕ್ಷೇತ್ರದ ಪರಿಣರನ್ನು ಒಳಗೊಂಡಿತು. 195ಂ ರಲ್ಲಿ 36 ಕೋಟಿಯಿದ್ದ ಭಾರತದ ಜನಸಂಖ್ಯೆೆ ಪ್ರಸ್ತುತ ಯುಎನ್ ಸಮೀಕ್ಷೆ ಪ್ರಕಾರ 135 ಕೋಟಿಗೆ ಸಮೀಪಿಸುತ್ತಿಿದೆ. 36 ಕೋಟಿ ಜನರನ್ನು ದೃಷ್ಟಿಿಯಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಲಾಗಿದೆ. ಆದುದರಿಂದ ಸಂವಿಧಾನಕ್ಕೆೆ ಹೊಸ ರೂಪವನ್ನು ನೀಡುವುದು ಸೂಕ್ತವೆನಿಸುತ್ತದೆ. ಅಂತೆಯೇ ಯಾವುದೇ ಸಂವಿಧಾನ ಭಾಗವನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಿಗೆ ಇದೆ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್ ಸಂವಿಧಾನವನ್ನು ಬುಡಮೇಲು ಮಾಡುವ ಅಧಿಕಾರ ಸಂಸತ್ತಿಿಗಿಲ್ಲ ಎಂದು ಸಹ ಆದೇಶಿಸಿದೆ.

ಸಂವಿಧಾನವೆನ್ನುವುದು ಪವಿತ್ರ ಗ್ರಂಥವಾಗಬೇಕು. ಹಿಂದೂಗಳ ಪಾಲಿಗೆ ಭಗವದ್ಗೀತೆ ಮುಸ್ಲಿಿಂರ ಪಾಲಿಗೆ ಕುರಾನ್, ಕ್ರೈಸ್ತರ ಪಾಲಿಗೆ ಬೈಬಲ್ ಆಗಬೇಕು. ಎಲ್ಲರೂ ಎಲ್ಲಾಾ ಕಾಲದಲ್ಲೂ ಮೆಚ್ಚುವಂತಿರ ಬೇಕು. ಆದರೆ ಸಂವಿಧಾನ ಪ್ರಸ್ತುತ ತನ್ನ ಸಫಲತೆಯನ್ನು ಸಾಧಿಸುವುದರಲ್ಲಿ ವಿಫಲವಾಗಿದೆ. ಅಲ್ಲದೆ ನಾವು ಸಂವಿಧಾನವನ್ನು ಸರಿಯಾಗಿ ಅರಿತುಕೊಂಡು ರಾಷ್ಟ್ರ ಪುನರುತ್ಥಾಾನದಲ್ಲಿ ಸಕ್ರಿಿಯವಾಗಿ ನಿಸ್ವಾಾರ್ಥಿಗಳಾಗಿ ಶ್ರಮವಹಿಸಿ ದುಡಿಯುತ್ತೇವೆ ಎಂಬ ಭರವಸೆ ಸುಳ್ಳಾಾಗಿದೆ. ಹಾಗಾಗಿ, ಇಂದಿನ ಈ ಪರಿಸ್ಥಿಿತಿಯಲ್ಲಿ ಸಂವಿಧಾನದ ಮರುಪರಿಶೀಲನೆ ಅನಿವಾರ್ಯ. ‘ವ್ಯಕ್ತಿಿಗಿಂತ ಕುಟುಂಬ ದೊಡ್ಡದು, ಕುಟುಂಬಕ್ಕಿಿಂತ ಸಮಾಜ ದೊಡ್ಡದು. ಸಮಾಜಕ್ಕಿಿಂತ ಧರ್ಮ ದೊಡ್ಡದು. ಧರ್ಮಕ್ಕಿಿಂತ ದೇಶ ದೊಡ್ಡದು ಎಂಬ ಪ್ರಜ್ಞೆ’ ಎಂಬ ಮಾತು ಪರಿಪಾಲನೆಗೊಳ್ಳಲು ಸಂವಿಧಾನದ ಪರಾಮರ್ಶೆ ಅಗತ್ಯ. ಪಕ್ಷಕ್ಕಿಿಂತ ರಾಷ್ಟ್ರೀಯ ಹಿತಾಸಕ್ತಿಿಯೇ ಸರ್ವಸ್ವವೆನ್ನುವುದನ್ನು ತಿಳಿದುಕೊಳ್ಳುವ ಬುದ್ಧಿಿ ನಮ್ಮ ರಾಜಕಾರಣಿಗಳಿಗೆ ಬಂದರೆ ನಮ್ಮ ದೇಶ ಸುಧಾರಿಸೀತು.

ನಾವು ಸಂವಿಧಾನವನ್ನು ಅಪಮೌಲ್ಯಗೊಳಿಸಿದ್ದೇವೆಯೇ ಹೊರತು ಸಂವಿಧಾನ ನಮಗೆ ಕೆಟ್ಟದ್ದೇನೂ ಮಾಡಿಲ್ಲ. ಆದರೆ ಸಂವಿಧಾನವನ್ನು ಅದರಷ್ಟಕ್ಕೆೆ ಬಿಡಿ ಎನ್ನುವ ಮಾತು ಸಮಂಜಸವೆನಿಸದು. ಅವಶ್ಯಕವಾಗಿ ಆಗಬೇಕಾದ ರಾಜ್ಯ ವಿಧಾನ ಸಭೆ ಹಾಗೂ ಲೋಕಸಭೆಗಳಲ್ಲಿನ ಮಹಿಳಾ ಮೀಸಲಿನಂತಹ ವಿಚಾರಗಳನ್ನು ಶಾಶ್ವತವಾಗಿ ಸಮುದ್ರೆೆಕ್ಕೆೆಸೆಯುವುದೇ? ಪ್ರತಿಯೊಬ್ಬ ಪ್ರಜ್ಞಾಾವಂತ ಪ್ರಜೆಗೆ ಮೂಲ ವ್ಯವಸ್ಥೆೆಯಲ್ಲಿ ಅಂದರೆ ಸಂವಿಧಾನದಲ್ಲೇ ಏನೋ ತೊಡಕಿದೆ ಎಂಬ ಭಾವನೆ ಮನಸ್ಸಿಿನಲ್ಲಿ ಮೂಡುವುದಿಲ್ಲವೇ? ಎರಡು ವರ್ಷಕ್ಕೊೊಂದು ಚುನಾವಣೆ, ವರ್ಷಕ್ಕೊೊಬ್ಬ ಪ್ರಧಾನಿ, ಆರು ತಿಂಗಳಿಗೊಬ್ಬ ಮುಖ್ಯ ಮಂತ್ರಿಿ.

ಇಂತಹ ಅಸ್ಥಿಿರತೆಗಳು ಎದುರಾಗಿಲ್ಲವೇ? ದಿವಾಳಿಕೋರರು ಕ್ರಿಿಮಿನಲ್‌ಗಳು ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಿ ಪ್ರವೇಶಿಸುತ್ತಿಿರುವಾಗ ಅದನ್ನು ತಡೆಯುವ ವಿಧಾನ ಸಂವಿಧಾನದಲ್ಲಿಲ್ಲ. ಮುಂದೊಂದು ದಿನ ಇಂಥವರ ಕೈಗೆ ಆಡಳಿತಯಂತ್ರ ಬಂದರೆ ಏನು ಗತಿ? ಇನ್ನೂ ಕೂಡಾ ಹಿಂದುಳಿದ ಪ್ರದೇಶಗಳಲ್ಲಿ ಮಗುವಿನ ಕೈಗೆ ಸ್ಲೇಟು-ಕಡ್ಡಿಿ ಬರಲಿಲ್ಲ. ಎಲ್ಲಾಾ ರಾಜ್ಯಗಳಿಗೂ ಸಮಾನ ಸ್ಥಾಾನಮಾನ ನೀಡಲಾಗಿದ್ದರೂ 37ಂ ನೇ ವಿಧಿ ಕಾಶ್ಮೀರಕ್ಕೆೆ ವಿಶೇಷ ಸ್ಥಾಾನಮಾನವನ್ನು ನೀಡುತ್ತಿಿತ್ತು. ಇದೀಗ ಅದು ಕಳಚಿದುದು ಹೆಮ್ಮೆೆಯ ವಿಚಾರ.

ಸಂವಿಧಾನ ಪುನರ್ವಿಮರ್ಶೆಗೆ ವಿರೋಧಿಸುವವರು ‘ನಮ್ಮ ಸಂವಿಧಾನ ಕಳೆದ 7ಂ ವರ್ಷಗಳಲ್ಲಿ ಚೆನ್ನಾಾಗಿ ನಡೆದಿದೆಯಲ್ಲಾಾ?’ಎನ್ನಬಹುದು. ಹೌದು, ಮಿಲಿಟರಿ ಆಡಳಿತ ಬಂದಿಲ್ಲ. ಆದರೆ ಎಲ್ಲವೂ ಸರಿಯಾಗಿದೆಯೆಂದರ್ಥವಲ್ಲ. ಬಹುಕೋಟಿ ಹಗರಣದಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಿಯನ್ನು ದಸ್ತಗಿರಿ ಮಾಡಿ ಜೈಲಿನಲ್ಲಿಡುವುದು ಖಾತರಿ ಎಂದಾದಾಗ ಅದೇ ವ್ಯಕ್ತಿಿ ತನ್ನ ಹೆಂಡತಿಯನ್ನು ಮುಖ್ಯಮಂತ್ರಿಿಯ ಗಾದಿಯಲ್ಲಿ ಕುಳ್ಳಿಿರಿಸಿ ಜೈಲಿನಿಂದಲೇ ರಾಜ್ಯಭಾರ ಮಾಡಿದ್ದು ಮಿಲಿಟರಿ ಆಡಳಿತಕ್ಕಿಿಂತ ಉತ್ತಮ ಹೇಗಾಗುತ್ತದೆ?ತಿಂಗಳಿಗೆ ಒಂದು ರುಪಾಯಿ ಸಂಬಳ ಪಡೆದ ಮುಖ್ಯಮಂತ್ರಿಿಯೊಬ್ಬರು ಹತ್ತು ಸಾವಿರಕ್ಕಿಿಂತ ಹೆಚ್ಚು ಸಿಲ್ಕು ಸೀರೆಗಳು, ಹಲವಾರು ಕೋಟಿ ಬೆಲೆಬಾಳುವ ಚಿನ್ನದ ಮತ್ತು ವಜ್ರದ ಒಡವೆಗಳನ್ನು ಹೊಂದಿದ್ದು, ಸಾಕು ಮಗನ ಮದುವೆಗೆ ಹಲವಾರು ಕೋಟಿ ರು.

ಖರ್ಚು ಮಾಡಿರುವುದು…ಎಲ್ಲವನ್ನೂ ನಾವು ಕಣ್ಣು ಮುಚ್ಚಿಿ ನೋಡಿದ್ದೇವೆ. ಹಾಗಾಗಿ ಸಂವಿಧಾನ ಪುನರ್ವಿಮರ್ಶಿಸುವುದು ಬೇಡಬೇ ಬೇಡ ಎನ್ನಲಾಗದು. ಹಲವಾರು ತಜ್ಞರು ಹೇಳಿರುವ ಮೇಲಿನ ಅಭಿಪ್ರಾಾಯಗಳನ್ನು ಪರಿಗಣಿಸಿ, ಕೂಲಂಕಷವಾಗಿ, ವಿವೇಚನಾಶೀಲತೆಯಿಂದ ರಾಷ್ಟ್ರದ ಹಿತದೃಷ್ಟಿಿಯಿಂದ ಮುಂದಡಿಯಿಡಬಹುದು.

Leave a Reply

Your email address will not be published. Required fields are marked *