Sunday, 29th November 2020

ಇಂದಿರಾಗಾಂಧಿಯವರ ಜನ್ಮದಿನದ ಅಂಗವಾಗಿ ಸೀರೆ ವಿತರಣೆ

ಚಿಕ್ಕನಾಯಕನಹಳ್ಳಿ : ದೇಶದ ಮೂರನೇ ಪ್ರಧಾನಿಯಾಗಿ ಹಲವು ಮೈಲಿಗಲ್ಲನ್ನು ಸ್ಥಾಪಿಸಿರುವ ಇವರು ಭಾರತದ ಐರನ್ ಲೇಡಿ ಹಾಗು ಈ ದೇಶದ ಮಹಾನ್ ಪುತ್ರಿ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಬಣ್ಣಿಸಿದರು.

ತಾಲ್ಲೂಕಿನ ಕೆಂಗಲಾಪುರ ತಾಂಡ್ಯದ ಮಹಿಳೆಯರಿಗೆ ಭಾರತದ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಜನ್ಮ ದಿನದ ಅಂಗವಾಗಿ ಸೀರೆ ವಿತರಿಸಿ ಮಾತನಾಡಿದರು. ನಾವಿನ್ಯ, ಅನನ್ಯ ದೃಷ್ಟಿಕೋನ, ಶ್ರೇಷ್ಟ ನಾಯಕತ್ವದವರಾಗಿದ್ದರು ಇಂದಿರಾ ಗಾಂಧಿ. ನಮ್ಮ ಪ್ರಜೆಗಳಿಗೆ ಅವರು ಪ್ರಧಾನ ಮಂತ್ರಿಗಿಂತಲೂ ಮಿಗಿಲಾಗಿದ್ದರು. ದೇಶದಲ್ಲಿ ಜನಪರ ಹಾಗು ರಾಷ್ಟ್ರ ಕೇಂದ್ರಿಕೃತ ನೀತಿಗಳಿಂದ ಜನಪ್ರಿಯರಾಗಿದ್ದರು.

ಬ್ಯಾಂಕುಗಳ ರ್ಟ್ರೋಕರಣ, ಹಸಿರು ಕ್ರಾಂತಿಯ ಮೂಲಕ ಆರ್ಥಿಕಾಭಿವೃಧ್ಧಿಗೆ ಮುನ್ನುಡಿ ಬರೆದರು. ಇಂದಿಗೂ ಕೂಡ ಭಾರತದ ಉಕ್ಕಿನ ಮಹಿಳೆಯೆಂದು ಇಂದಿರಾ ಗಾಂಧಿ ಅವರನ್ನು ಇಡೀ ದೇಶ ಗುರುತಿಸುತ್ತಿದೆ ಎಂದರು.

Leave a Reply

Your email address will not be published. Required fields are marked *