Sunday, 14th August 2022

ದಮನಿತರ ಧ್ವನಿ ಸಾವಿತ್ರಿಬಾಯಿ ಫುಲೆ: ಶಿಕ್ಷಣ ಸಚಿವ ನಾಗೇಶ

ವಿಜಯಪುರ: ದೇಶ ಕಂಡ ಅಪ್ರತಿಮ ಶಿಕ್ಷಕಿ,ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ ಸಾವಿತ್ರಿಬಾಯಿ ಫುಲೆ ಅವರು ಶ್ರೇಷ್ಠ ಸಾಧಕಿಯಾಗಿದ್ದರು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ ಹೇಳಿದರು.

ಅವರು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾ ಘಟಕದಿಂದ ಆನ್ ಲೈನ್ ಮೂಲಕ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಸ್ಮರಣೋತ್ಸವ ವಿಡಿಯೋ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದಮನಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಮೊದಲ ಶಿಕ್ಷಕಿಯಾದ ಇವರು ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಚಳವಳಿಗಳನ್ನು ಸಂಘಟಿಸಿದ್ದು ಆದರ್ಶಪ್ರಾಯವಾಗಿದೆ ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ವಿಜೇತೆ ಚಲನಚಿತ್ರ ಕಲಾವಿದೆ ತಾರಾ ಅನುರಾಧ ಮಾತನಾಡಿ,ಸಮಾಜದ ಅವಮಾನಗಳನ್ನು ಸಹಿಸಿ ಅಂದಿನ ಕಾಲದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದ ಸಾವಿತ್ರಿಬಾಯಿ ಫುಲೆ ನನ್ನ ಪಾಲಿಗೆ ಆದರ್ಶ ಪ್ರಾಯರು. ಅವರ ಪಾತ್ರದಲ್ಲಿ ನಟಿಸಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮೈಸೂರಿನ ಮರೀತಿಬ್ಬೇಗೌಡ ಮಾತನಾಡಿ, ಪ್ರತಿಭಾ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸುತ್ತಾ,ಸಾವಿತ್ರಿಬಾಯಿ ಫುಲೆ ಅವರ ಜೀವನದ ಸಮಗ್ರ ಚಿತ್ರಣ ನೀಡುವ ವಿಡಿಯೋಗಳನ್ನು ರಾಜ್ಯದ ಶಿಕ್ಷಕರು ಮಾಡಿದ್ದು ಅದ್ಭುತ ಹೆಜ್ಜೆಯಾಗಿದೆ ಎಂದು ಹೇಳಿದರು.

ಹಿರಿಯ ಚಲನಚಿತ್ರ ಕಲಾವಿದ ರಮೇಶ ಭಟ್,ಚಲನಚಿತ್ರ ನಿರ್ದೇಶಕ ವಿಶಾಲ ರಾಜ್,ಭಾರತ ಸಾರಥಿ ದಿನಪತ್ರಿಕೆಯ ಸಂಪಾದಕ ಗಂಡಸಿ ಸದಾನಂದ ಸ್ವಾಮಿ, ಬೆಂಗಳೂರಿನ ಬ್ರೇನ್ ಸೆಂಟರ ಮತ್ತು ಕೆಆಯ್ ಎಂಎಸ್ ನ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ, ಮೈಸೂರಿನ ಶೂನ್ಯೆಕ ಸಲೂಶನ್ಸ್ ನಿರ್ದೇಶಕರಾದ ಅಬ್ದುಲ್ ಕರೀಂ, ತುಮಕೂರಿನ ಹುಲಿಯೂರುದುರ್ಗ ಲಕ್ಷ್ಮೀ ನಾರಾಯಣ, ಬೆಂಗಳೂರಿನ ಬಿಟಿಎ ಸಂಸ್ಥಾಪಕರಾದ ಸತ್ಯನಾರಾಯಣ ವಿ ಆರ್ ಸೇರಿದಂತೆ ಅನೇಕರು ಮಾತನಾಡಿದರು.

ರಾಜ್ಯ ಘಟಕಗಳಾದ ಧಾರವಾಢದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮೈಸೂರಿನ ಪಿ ಮಹೇಶ ವಹಿಸಿ ಮಾತನಾಡಿದರು.

ಬೀದರಿನ ಸಾರಿಕಾ ಗಂಗಾ ಸ್ವಾಗತಿಸಿದರು. ವಿಜಯಪುರದ ಉಮಾ ಗುಡ್ಡದ ನಿರೂಪಿಸಿದರು.ಶಿಕ್ಷಕ ಸಂತೋಷ ಬಂಡೆ ವಂದಿಸಿದರು.