Friday, 3rd February 2023

ಪ್ರತಿಯೊಬ್ಬ ಮನುಷ್ಯನಲ್ಲಿ ಸಾಮಾಜಿಕ ಕಳಕಳಿ ಅಗತ್ಯ ಸಾವಿತ್ರಿ ಬಾಫುಲೆ ಟ್ರಸ್ಟ್ ಅಧ್ಯಕ್ಷ: ಜಾನೇಕಲ್

ಮಾನ್ವಿ: ತಾಲೂಕಿನ ನಮಾಜಿಗೇರ ಗುಡ್ಡದ ಜ್ಞಾನ ಜ್ಯೋತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪಕ್ಕದಲ್ಲಿರುವ ಬಾಡಿಗೆ ಮನೆ ಯಲ್ಲಿ ವಾಸಿಸುತ್ತಿರುವ ಗುರುನಾಥ್ ಆಚಾರಿ (35) ಇವರ ಆರೋಗ್ಯ ಚಿಕಿತ್ಸೆಗಾಗಿ ಸಾವಿತ್ರಿ ಬಾಫುಲೆ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಜಾನೇಕಲ್, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸಿಂಧನೂರು, ಹಾಗೂ ವನಸಿರಿ ಫೌಂಡೇಶನ್ ರಾಯಚೂರು ವತಿಯಿಂದ ದಾನಿಗಳ ಸಹಕಾರ ಪಡೆದು 14,046 ರೂಪಾಯಿಗಳನ್ನು ನೀಡಿ ನಮ್ಮ ಟ್ರಸ್ಟ್ ಸಾಮಾಜಿಕ ಕಳಕಳಿ ಮೆರೆದು ಬಡ ರೋಗಿಗೆ ಆಸರೆಯಾಗಿದೆ ಎಂದು ಸಾವಿತ್ರಿ ಬಾಫುಲೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು, ಮಾಜಿ ತಾಲೂಕ ಪಂಚಾ ಯತ ಸದಸ್ಯ ಅರ್ಜುನಪ್ಪ ಜಾನೇಕಲ್ ತಿಳಿಸಿದರು.

ಗುರುನಾಥ್ ಆಚಾರಿ ರವರು, ವಿಶ್ವಕರ್ಮ ಸಮಾಜಕ್ಕೆ ಸೇರಿದವರಾಗಿದ್ದು, ಇವರು ಮೂಲತಃ ಸಿರವಾರ ತಾಲೂಕಿನ ಕುರುಕುಂದ ಗ್ರಾಮದ ನಿವಾಸಿಯಾಗಿದ್ದು, ಕಳೆದ ಏಳೆಂಟು ವರ್ಷಗಳಿಂದ ಮಾನ್ವಿ ಪಟ್ಟಣದ ನಮಾಜಿಗೇರಿ ಗುಡ್ಡದ ಜ್ಞಾನ ಜ್ಯೋತಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರು ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿ ದಿನಕ್ಕೆ 500 ರೂಪಾಯಿ ದುಡಿದು ತಾನು ಹೆಂಡತಿ ಇಬ್ಬರೂ ಮಕ್ಕಳು ಹಾಗೂ ತಾಯಿಯನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದ. ಕುಟುಂಬದಲ್ಲಿ ಕೌಟುಂಬಿಕ ಕೆಲಸಗಳಿಂದ ಬೆಸೆತ್ತು. ಕಳೆದ 6 ತಿಂಗಳಿಂದ ಚಿಂತೆಗಿಡಾಗಿ ಊಟ, ನೀರು ಸೇವಿಸದೆ ತನ್ನ ಇಚ್ಚೆ ಬಂದಂತೆ ವರ್ತಿಸುತ್ತಿದ್ದರಿಂದ ತಾಯಿ ಹೇಗಾದರೂ ಮಾಡಿ ಮಗನಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಅವರು ಮನ ನೊಂದು ಹೋಗಿದ್ದಾರೆ.

ನಮ್ಮ ಟ್ರಸ್ಟ್ ಗೆ ವಿಷಯ ತಿಳಿದ ಕೂಡಲೇ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸಿಂಧನೂರಿನ ಪದಾಧಿಕಾರಿಗಳ, ವನಸಿರಿ ಪೌಂಡೇಶನ್ ಪದಾಧಿಕಾರಿಗಳ ಹಾಗೂ ಕೊಡುಗೈ ದಾನಿಗಳ ನೆರವಿನಿಂದ ಇಂದು ಅವರ ಚಿಕಿತ್ಸೆಗಾಗಿ 14,046 ರೂಪಾಯಿಗಳನ್ನು ನೀಡಿ ಮೂರು ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಕೊಡುಗೈ ದಾನಿಗಳಿಂದ ಹಣ ಸಂಗ್ರಹಿಸಿ ಸದಾ ಸಾಮಾಜಿಕ ಕಳಕಳಿ ಹೊಂದಿ ರುವ ಟ್ರಸ್ಟ್ ಗಳು ಮಾನವೀಯತೆ ಮೆರೆದಿದ್ದಾವೆ ಎಂದರು.

ಸಮಾಜದಲ್ಲಿ ಇಂಥ ಕಷ್ಟಗಳು ಮನುಷ್ಯನ ಜೀವನದಲ್ಲಿ ಸಹಜ ಪ್ರಕ್ರಿಯೆಯಾಗಿದೆ. ಆದರೆ ಅಂಥ ಕಷ್ಟಗಳಿಗೆ ಸ್ಪಂದಿಸುವ ಗುಣ ಪ್ರತಿಯೊಬ್ಬರಲ್ಲೂ ಬಂದಾಗ ಮಾತ್ರ ಮಾನವೀಯತೆ ಜೀವಂತವಾಗಿರುತ್ತದೆ. ಈ ಬಡ ಕುಟುಂಬದ ವ್ಯಕ್ತಿಗೆ ನಮ್ಮ ಟ್ರಸ್ಟ್ ನ ಕರೆಗೆ ಓಗೊಟ್ಟು ಸಹಾಯ ಮಾಡಿದ ಬಹುಪಾಲು ಕೀರ್ತಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸಿಂಧನೂರು, ವನಸಿರಿ ಫೌಂಡೇಶನ್ ನ ಎಲ್ಲಾ ಪದಾಧಿಕಾರಿಗಳಿಗೆ ನಮಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ದಾನಿಗಳಿಗೆ ಸಲ್ಲಿಸಬೇಕೆಂದರು.

ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಮಾಜಿ ತಾಲೂಕ ಪಂಚಾಯತ ಅಧ್ಯಕ್ಷರಾದ ರಾಜಾ ವಸಂತ ನಾಯಕ ದೊರೆ, ಸಾವಿತ್ರಿ ಬಾಫುಲೆ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸವ ನಾಯಕ ಜಾನೇಕಲ್, ಜ್ಞಾನ ಜ್ಯೋತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಅಧ್ಯಕ್ಷ ಭೀಮರಾಯ ಸೀತಿಮನಿ, ನಾಗರಾಜ್ ಆಚಾರಿ, ಶ್ರೀನಿವಾಸ ರೆಡ್ಡಿ, ಕೃಷ್ಣ ಪಟಕನದೊಡ್ಡಿ, ಸಂದೀಪ್ ಹಿರೇಬಾದರದಿನ್ನಿ, ಗುಂಡಪ್ಪ ನಾಯಕ ಮಾನ್ವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!