ರಾಯಚೂರಿನಲ್ಲಿ ಸರಣಿ ಅಪಘಾತ: ನಾಲ್ವರ ಸಾವು Friday, February 5th, 2021 ವಿಶ್ವವಾಣಿ ರಾಯಚೂರು : ರಾಯಚೂರಿನಲ್ಲಿ ಎರಡು ಲಾರಿಗಳು ಮತ್ತು ಒಂದು ಕಾರಿನ ಮಧ್ಯೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ ರುವ ಘಟನೆ ನಡೆದಿದೆ. ರಾಯಚೂರಿನ ಗೊಲಪಲ್ಲಿ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.