Saturday, 22nd February 2020

ರಾಜ್ಯಗಳ ನಡುವಿನ ಜಲ ವಿವಾದ ಕೇಂದ್ರ ಸರಕಾರ ಇತ್ಯರ್ಥಪಡಿಸಲಿ…

ಜಲವಿವಾದ ಒಂದಿಲ್ಲೊಂದು ರಾಜ್ಯಗಳ ನಡುವೆ ಇರುವ ಪೈಪೋಟಿ. ಅದನ್ನ ಬಗೆಹರಿಸುವುದಕ್ಕೆೆ ನ್ಯಾಾಯಾಲಯ, ಸಂಸತ್ತು, ನ್ಯಾಾಯಾಧಿಕರಣದಂಥ ಎಲ್ಲಾ ವೇದಿಕೆಗಳಿವೆ. ಆದರೆ ಕೇಂದ್ರ ಸರಕಾರ ರಾಜ್ಯಗಳ ನಡುವೆ ಮಾತುಕತೆ ನಡೆಸಿ ಜಲ ವಿವಾದಕ್ಕೆೆ ಶಾಶ್ವತ ತೀರ್ಪು ನೀಡುವುದು ಅನಿವಾರ್ಯವಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾಕಷ್ಟು ಹಿಂಸಾಚಾರಗಳು ಸಂಭವಿಸಿವೆ. ಆದರೆ, ಬೇರೆ ರಾಜ್ಯಗಳಲ್ಲೂ ಸಹ ಇಂತಹ ಸೂಕ್ಷ್ಮ ಜಲವಿವಾದಗಳು ಅಸ್ತಿತ್ವದಲ್ಲಿವೆ.

ಅಂತಾರಾಜ್ಯ ನದಿ ನೀರು ವಿವಾದ ಅಧಿನಿಯಮ, 1956 ಕ್ಕೆೆ ತಿದ್ದುಪಡಿ ತಂದು ಅಂತಾರಾಜ್ಯ ನದಿ ನೀರು ವಿವಾದ ಪರಿಹರಿಸಲು ಏಕೈಕ ಮತ್ತು ಶಾಶ್ವತ ನ್ಯಾಯಾಧಿಕರಣವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಾಯಾಧೀಶರ ಮುಖಂಡತ್ವದಲ್ಲಿ ಸ್ಥಾಾಪಿಸುವ ಪ್ರಸ್ತಾಾಪಕ್ಕೆೆ ಕೇಂದ್ರ ಸಂಪುಟ ಅಸ್ತು ಎಂದಿದೆ. ಇದು ಚಾಲನೆಗೊಂಡರೆ ನ್ಯಾಾಯಾಧೀಕರಣ ಎರಡೇ ವರ್ಷದಲ್ಲಿ ವಿವಾದವನ್ನ ಬಗೆಹರಿಸಬೇಕು, ಅದಕ್ಕಾಾಗಿ ಪೀಠಗಳನ್ನ ರಚಿಸಿಕೊಳ್ಳಬಹುದು. ಇಲ್ಲಿ ಕೇಂದ್ರ ಸರಕಾರದ ಪಾತ್ರವೂ ಅಷ್ಟೇ ಮುಖ್ಯವಾಗಿದ್ದು, ರಾಜ್ಯಗಳ ನಡುವೆ ಜಲ ವಿವಾದದ ಸಮಸ್ಯೆೆ ಶಾಂತಿಯುತವಾಗಿ ಬಗೆಹರಿಸಲು ಚಿಂತನೆ ನಡೆಸಬೇಕಿದೆ. ಕಾವೇರಿ ನದಿ ನೀರಿನಂತೆ ಕಳಸ ಬಂಡೂರಿ, ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆೆ ಅನ್ಯಾಾಯವಾಗುತ್ತಿದೆ.

ಕೃಷ್ಣಾ ನದಿ ನೀರು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ವಿವಾದಕ್ಕೆೆ ಕಾರಣವಾಗಿದೆ. ಈ ನದಿಯು ಮಹಾಬಲೇಶ್ವರದಲ್ಲಿ ಹುಟ್ಟಿಿ ಮಹಾರಾಷ್ಟ್ರದ ಸತಾರ ಮತ್ತು ಸಾಂಗ್ಲಿಿ ಜಿಲ್ಲೆಗಳ ನಡುವೆ ಹಾಗೂ ಕರ್ನಾಟಕ, ದಕ್ಷಿಣ ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಕೃಷ್ಣಾಾ ನದಿಯು ಕರ್ನಾಟಕದ 60 ಪ್ರತಿಶತದಷ್ಟು 3 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ. ಈ ನದಿಯ ವಿವಾದವನ್ನು ಪರಿಹರಿಸಲು, 1969 ರಲ್ಲಿ ಟ್ರಿಿಬ್ಯೂನಲ್ ಸ್ಥಾಾಪನೆಯಾಯಿತು. ಅದು 1976 ರಲ್ಲಿ ತೀರ್ಪು ನೀಡಿತು. ಈ ತೀರ್ಪಿನಲ್ಲಿ ಕರ್ನಾಟಕ 700 ಬಿಲಿಯನ್ ಕ್ಯೂಸೆಕ್, ಆಂಧ್ರ ಪ್ರದೇಶ 800 ಬಿಲಿಯನ್ ಕ್ಯೂಸೆಕ್ ಮತ್ತು ಮಹಾರಾಷ್ಟ್ರ 560 ಬಿಲಿಯನ್ ಕ್ಯೂಸೆಕ್ ನೀರನ್ನು ಬಳಸಲು ಅನುಮತಿ ನೀಡಿತು.

ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಒಡಿಶಾ ಮತ್ತು ಆಂಧ್ರಪ್ರದೇಶದ ನಡುವೆ ಗೋದಾವರಿ ನೀರಿಗಾಗಿ ಸಾಕಷ್ಟು ವಿವಾದಗಳಾಗಿವೆ. ಇದನ್ನು ಪರಿಹರಿಸಲು, ಏಪ್ರಿಿಲ್ 1969ರಲ್ಲಿ ಸರಕಾರ ಸಮಿತಿಯು ರಚನೆಯಾಯಿತು. ಈ ಸಂದರ್ಭದಲ್ಲಿ, ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದರೂ, ಗೋದಾವರಿ ನದಿ ನೀರಿನ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ. ಅದೇ ರೀತಿ ತುಂಗಭದ್ರ ನದಿ ನೀರಿನ ವಿವಾದ ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ಇದೆ.

ಭಾರತದಲ್ಲಿ ಸಾಕಷ್ಟು ನೀರು ಲಭ್ಯತೆ ಇದೆ. ಆದರೆ, ರಾಜಕಾರಣಿಗಳ ಹಾಗೂ ಅಧಿಕಾರಿಗಳ ಇಚ್ಛಾಾಸಕ್ತಿಿ ಕೊರತೆಯಿಂದಾಗಿ ನೀರು ಸಮರ್ಪಕವಾಗಿ ಬಳಕೆಯಾಗದೆ ಸಮುದ್ರ ಸೇರುತ್ತಿಿದೆ. ಇದರ ಬಗ್ಗೆೆ ಜನಪ್ರತಿನಿಧಿಗಳು ಚಿಂತಿಸುತ್ತಿಿಲ್ಲ. ಅಧಿಕಾರ ಲಾಭಕ್ಕಾಾಗಿ ಆರೋಪ, ಪ್ರತ್ಯಾಾರೋಪಗಳಲ್ಲಿ ತೊಡಗಿದ್ದಾರೆ. ಹೀಗಾಗಿ ದೇಶದಲ್ಲಿನ ಜಲಾಶಯಗಳು ಹಾಗೂ ಕೆರೆಕಟ್ಟೆೆಗಳಲ್ಲಿ ನೀರಿಲ್ಲದೆ ಹಲವೆಡೆ ಬರಗಾಲದ ಛಾಯೆ ಮೂಡಿ ರೈತರು ಹಾಗೂ ಸ್ತ್ರೀ ಸಮಾನ್ಯರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.

Leave a Reply

Your email address will not be published. Required fields are marked *