Friday, 3rd April 2020

ಹುಳಿಮಾವು ಕೆರೆ ಅನಾಹುತ: ಬೀದಿಗೆ ನೂರಾರು ಕುಟುಂಬ

ಮನೆಯ ಅಂಗಳದಲ್ಲಿ ನೀರು ನಿಂತಿದ್ದು, ವಸ್ತುಗಳನ್ನು ಸಾಗಿಸುತ್ತಿಿರುವ ಯುವಕ.

 

ಒಡೆದ ಕೆರೆ ಮನೆಗಳಿಗೆ ನುಗ್ಗಿಿದ ನೀರು ಅಪಾಯದಲ್ಲಿ ಸಿಲುಕಿದ್ದ 193 ಮಂದಿ ರಕ್ಷಣೆ 70 ಕೋಟಿ ರು. ನಷ್ಟ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಸಿಲಿಕಾನ್ ಸಿಟಿ ಹೊರ ವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಿಡಿಎ ಅಧಿಕಾರಿಗಳು ಮಾಡಿದ ತಪ್ಪಿಿಗೆ ಜನರು ಬೀದಿಯಲ್ಲಿ ವಾಸ ಮಾಡಬೇಕಾದ ಪರಿಸ್ಥಿಿತಿ ಉಂಟಾಗಿದೆ.
ಜೆಸಿಬಿ ಮೂಲಕ ಬಿಡಿಎ ಗುತ್ತಿಿಗೆದಾರ ಕಾರ್ತಿಕ್ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಕೆರೆ ಒಡೆದಿದ್ದು, ಸತತ ಐದಾರು ಗಂಟೆಗಳ ಕಾರ್ಯಾಚರಣೆ ಮಾಡಿ ಕೆರೆ ಒಡೆದ ಸ್ಥಳದಲ್ಲಿ ಮಣ್ಣು ಹಾಕಿ ರಾತ್ರಿಿ 8 ಗಂಟೆ ವೇಳೆಗೆ ನೀರಿಗೆ ತಡೆಯೊಡ್ಡಲಾಯಿತು. ಇದರಿಂದ ಮುಂದಾಗಬಹುದಾಗಿದ್ದ ಇನ್ನಷ್ಟು ಅನಾಹುತ ತಪ್ಪಿಿದೆ. ಆದರೆ, ಈಗ ಕೆರೆಗೆ ಕಟ್ಟಿಿದ್ದ ಒಡ್ಡಿಿನಲ್ಲಿ ಮತ್ತೆೆ ನೀರು ಸೋರಿಕೆಯಾಗಿ ಹರಿಯುತ್ತಿಿದ್ದು, ಜನರು ಆತಂಕದಲ್ಲಿದ್ದಾರೆ.

ಹುಳಿಮಾವು ಕೆರೆ ಕೋಡಿ ಒಡೆದು ಅಕ್ಕಪಕ್ಕದ ಗ್ರಾಾಮಗಳಿಗೆ ನೀರು ನುಗ್ಗಿಿದ ಪರಿಣಾಮ ಸುಮಾರು 70 ಕೋಟಿ ರು.ನಷ್ಟು ನಷ್ಟ ಸಂಭವಿಸಿದೆ. ಅಲ್ಲದೆ, 2 ಸಾವಿರಕ್ಕೂ ಹೆಚ್ಚು ಮಂದಿಯ ಜೀವನ ಬೀದಿಗೆ ಬಿದ್ದಿದೆ. ನೀರು ನುಗ್ಗಿಿದ ಅನಾಹುತದಲ್ಲಿ ಯಾವುದೇ ಪ್ರಾಾಣಹಾನಿ ಸಂಭವಿಸಿಲ್ಲ. ಆದರೆ ನೂರಾರು ಮಂದಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ.

ಹುಳಿಮಾವು ಕೆರೆ ಸುತ್ತಮುತ್ತಲ ಶಾಂತಿನಿಕೇತನ, ಕೃಷ್ಣನಗರ ಸೇರಿ ಆರಕ್ಕೂ ಹೆಚ್ಚು ಬಡಾವಣೆಗಳು ನಮ್ಮನ್ನಾಾಳುವ ಮಂದಿ ಸೃಷ್ಟಿಿಸಿದ ಕೃತಕ ಪ್ರವಾಹದಲ್ಲಿ ಸಿಲುಕಿವೆ. ಈ ಮಧ್ಯೆೆ ನೀರಿನಲ್ಲಿ ಬಂದ ಹಾವುಗಳ ಕಾಟವೂ ಹೆಚ್ಚಾಾಗಿದ್ದು, ಜನರು ಆತಂಕದಲ್ಲಿದ್ದಾರೆ. ಸರಿಸುಮಾರು ಮೂರು ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿಿ, ಸೊಂಟ ಮಟ್ಟಕ್ಕೆೆ ನೀರು ಆವರಿಸಿದೆ. ಅಪಾರ್ಟ್‌ಮೆಂಟ್‌ಗಳು, ಅಂಗಡಿಗಳು ಸಂಪೂರ್ಣ ಜಲಾವೃತವಾಗಿವೆ. ಕಾರು, ಬೈಕ್ ಹೀಗೆ ಎಲ್ಲಾ ವಾಹನಗಳು ನೀರಲ್ಲಿ ಮುಳುಗಿವೆ. ಓಡಾಡಲು ಜಾಗವೇ ಇಲ್ಲದಂತೆ ರಸ್ತೆೆಗಳಲ್ಲಿ ನದಿಯೋಪಾದಿಯಲ್ಲಿ ನೀರು ಹರಿಯುತ್ತಿಿದೆ. ಆರು ಬಡಾವಣೆಗಳ ಸಾವಿರಾರು ಜನ ರಾತ್ರಿಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದಾರೆ. ಮಲಗಲು, ಕುಳಿತುಕೊಳ್ಳಲು ಜಾಗವಿಲ್ಲದೇ ರಾತ್ರಿಿಯಿಡೀ ಒದ್ದಾಡಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯ, ಮಹತ್ತರ ದಾಖಲೆಗಳು, ಮಕ್ಕಳ ಪಠ್ಯಪುಸ್ತಕಗಳು ನೀರಿನಲ್ಲಿ ಕೊಚ್ಚಿಿಹೋಗಿವೆ. ಕೆರೆ ದಡದಲ್ಲಿರುವ ಹಲವಾರು ಗ್ರಾಾಮಗಳು ಜಲಾವೃತಗೊಂಡಿದ್ದು, ಸಂತ್ರಸ್ತರನ್ನು ಗಂಜಿ ಕೇಂದ್ರದಲ್ಲಿ ಬಿಡಲಾಗಿದೆ. ಸುತ್ತಮುತ್ತಲ ಗ್ರಾಾಮಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಕುಡಿಯಲು ನೀರಿಲ್ಲದಂತಹ ಪರಿಸ್ಥಿಿತಿ ಎದುರಾಗಿದೆ.

ಭಾನುವಾರ ಮಧ್ಯಾಾಹ್ನದಿಂದ ಹರಸಾಹಸಪಟ್ಟು 200 ಟ್ರಕ್‌ಗಳ ಸಹಾಯದಿಂದ ಮಣ್ಣು ತಂದು ಸುರಿದ ನಂತರವಷ್ಟೇ ಪ್ರವಾಹದ ತೀವ್ರತೆ ಕಡಿಮೆಯಾಯಿತು. ಕೋಡಿ ಒಡೆದ ಜಾಗದಲ್ಲಿ ಕಾಂಕ್ರಿಿಟ್ ಬ್ಲಾಾಕ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಿವಿಲ್ ಕಾಮಗಾರಿಗೆ ತಜ್ಞರನ್ನು ಸ್ಥಳಕ್ಕೆೆ ರವಾನಿಸಲಾಗಿದ್ದು, ಭವಿಷ್ಯದಲ್ಲಿ ಕೋಡಿ ಒಡೆಯದಂತೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ಆರ್.ಆರ್.ಲೇಔಟ್, ಕೃಷ್ಣ ಲೇಔಟ್, ಅವನಿ ಶೃಂಗೇರಿ ಬಡಾವಣೆ, ರಾಯಲ್ ರೆಸಿಡೆನ್ಸಿಿ ಮುಂತಾದ ಪ್ರದೇಶದಲ್ಲಿ ಸುಮಾರು 2ರಿಂದ 4 ಅಡಿವರೆಗೂ ನೀರು ಹರಿದು ಎಲ್ಲಾ ಮನೆಗಳು ಜಲಾವೃತವಾಗಿ ಮನೆ ಬಳಕೆಯ ಎಲ್ಲಾ ವಸ್ತುಗಳು ಹಾಳಾಗಿವೆ. ಸುಮಾರು 800 ಮನೆಗಳು ನೀರಿನಲ್ಲಿ ಮುಳುಗಿರುವ ಅಂದಾಜಿಸಲಾಗಿದೆ. ವಾಹನ ಸೇರಿದಂತೆ ಇತರ ವಸ್ತುಗಳ ಹಾನಿಯ ಕುರಿತು ಪರಿಸ್ಥಿಿತಿ ನಿಯಂತ್ರಣಕ್ಕೆೆ ಬಂದ ನಂತರ ಕಂದಾಯ ವಿಭಾಗದ ಅಧಿಕಾರಿಗಳು ಮಹಜರ್ ನಡೆಸಿ ವರದಿ ನೀಡಲಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾಾರೆ.

ಹುಳಿಮಾವು ಕೆರೆಯ ಕೋಡಿ ಒಡೆದು ಹೋಗಿದ್ದರಿಂದ ಅಪಾಯದಲ್ಲಿ ಸಿಲುಕಿದ್ದ 193 ಮಂದಿಯನ್ನು ರಕ್ಷಣೆ ಮಾಡಲಾಯಿತು. 130 ಮಂದಿಯನ್ನು ಹಗ್ಗದ ಸಹಾಯದಿಂದ ಸುರಕ್ಷಿತ ಪ್ರದೇಶಕ್ಕೆೆ ಕರೆತರಲಾಯಿತು, 63 ಮಂದಿಯನ್ನು ದೋಣಿಯಲ್ಲಿ ಸ್ಥಳಾಂತರಿಸಲಾಯಿತು. ಇವರಲ್ಲಿ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು, ಶಿಶುಗಳು ಸೇರಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಕ್ಷಣಾ ಇಲಾಖೆ ಸಿಬ್ಬಂದಿ, ಸಿಆರ್ ಪಿಎಫ್, ಕೆಎಸ್‌ಆರ್‌ಪಿ, ಪೊಲೀಸ್ ಸಿಬ್ಬಂದಿ, ಮಾರ್ಷಲ್ ಗಳು, ಅಗ್ನಿಿಶಾಮಕ ದಳ ಮತ್ತು ಅಂಬ್ಯುಲ್ಸ್ೆಗಳನ್ನು ಬಿಟಿಎಂ ಲೇ ಔಟ್, ಆರ್.ಆರ್.ಲೇಔಟ್, ಬಿಳೆಕಹಳ್ಳಿಿ, ಕೃಷ್ಣಾಾ ಲೇಔಟ್, ರಾಯಲ್ ರೆಸಿಡೆನ್ಸಿಿ ಮತ್ತು ಅವನಿ ಶೃಂಗೇರಿ ನಗರಗಳಿಗೆ ಕಳುಹಿಸಲಾಗಿತ್ತು. ನಾಗರಿಕರ ರಕ್ಷಣೆಗೆ ಫ್ರೋೋಟಿಂಗ್ ಪಂಪ್‌ಗಳು, ಜೀವರಕ್ಷಕ ಜಾಕೆಟ್‌ಗಳು, ಫ್ರೋೋಟಿಂಗ್ ಸ್ಟ್ರೆೆಚರ್ಸ್, ಹಗ್ಗಗಳು, ಶೊವೆಲ್ಸ್, ಪ್ರಥಮ ಚಿಕಿತ್ಸಾಾ ಕಿಟ್‌ಗಳು ಮತ್ತು ಸರ್ಚ್ ಲೈಟ್‌ಗಳನ್ನು ಬಳಸಲಾಯಿತು.

ಅನಾಹುತಕ್ಕೆೆ ಯಾರು ಕಾರಣ?

ಸುಮಾರು 140 ಎಕರೆ ವಿಸ್ತೀರ್ಣರದಲ್ಲಿರುವ ಹುಳಿಮಾವು ಕೆರೆಯನ್ನು ಬಿಬಿಎಂಪಿಗೆ ಹಸ್ತಾಾಂತರಿಸುವಂತೆ ರಾಜ್ಯ ಸರಕಾರ ಬಿಡಿಎಗೆ ಸೂಚನೆ ನೀಡಿತ್ತು. ಆದರೆ ಬಿಡಿಎ ಅಧಿಕಾರಿಗಳು ಕೆರೆಯನ್ನು ಹಸ್ತಾಾಂತರಿಸಿರಲಿಲ್ಲ. ಆದರೂ ಹುಳಿಮಾವು ಕೆರೆ ಅಭಿವೃದ್ಧಿಿಗೆ ಬಿಬಿಎಂಪಿಯಿಂದ ಅನುದಾನ ಬಿಡುಗಡೆಯಾಗಿತ್ತು. ಆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಭರ್ತಿಯಾದ ಕೆರೆ ಕೋಡಿ ಸಮೀಪ ಭಾನುವಾರ ಜೆಸಿಬಿಯಿಂದ ಕಾಮಗಾರಿ ನಡೆಸಲಾಗುತ್ತಿಿತ್ತು. ಆದರೆ ನಾವು ಯಾವುದೇ ಕಾಮಗಾರಿ ನಡೆಸುತ್ತಿಿರಲಿಲ್ಲ ಎಂದು ಬಿಡಿಎ ಮತ್ತು ಬಿಬಿಎಂಪಿ ಸಬೂಬು ಹೇಳುತ್ತಿಿವೆ. ಆದರೆ ಇದೀಗ ಬಿಬಿಎಂಪಿ ಮತ್ತು ಬಿಡಿಎಯವರು ನಾವು ಯಾವುದೇ ಕಾಮಗಾರಿ ನಡೆಸುತ್ತಿಿರಲಿಲ್ಲ. ಅನಾಹುತಕ್ಕೆೆ ಯಾರು ಕಾರಣ ಎನ್ನುವುದು ನಿಗೂಢವಾಗಿದೆ.

ಉದ್ದೇಶಪೂರ್ವಕವಾಗಿ ಕೆಲ ಕಿಡಿಗೇಡಿಗಳು ಕೋಡಿ ಒಡೆದು ಹಾಕಿರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಾಮೆರಾಗಳನ್ನು ಪರಿಶೀಲಿಸಿ ತಪ್ಪಿಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಹುಳಿಮಾವು ಪೊಲೀಸರಿಗೆ ದೂರು ನೀಡಲಾಗಿದೆ.
-ಗೌತಮ್ ಕುಮಾರ್, ಮೇಯರ್

ಹುಳಿಮಾವು ಕೆರೆ ಕೋಡಿ ಯಾಕೆ ತೆಗೆದಿದ್ದಾರೆ ಎಂಬುದು ತಿಳಿಯಬೇಕಿದೆ. ಸಿಸಿ ಕ್ಯಾಾಮೆರಾದಲ್ಲಿ ಜೆಸಿಬಿಯ ವಿವರಗಳನ್ನು ಪರಿಶೀಲಿಸಲಾಗುತ್ತಿಿದೆ. ಯಾರೋ ಸ್ವಾಾರ್ಥಕ್ಕೆೆ ಈ ಕೆರೆ ಕಟ್ಟೆೆ ಒಡೆಯುವ ಕೆಲಸ ಮಾಡಿದ್ದಾಾರೆ. ಯಾರೇ ತಪ್ಪುು ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
ಆರ್. ಅಶೋಕ್, ಕಂದಾಯ ಸಚಿವ

Leave a Reply

Your email address will not be published. Required fields are marked *