Wednesday, 29th June 2022

ಪುಣೆಯ ಹೆಮ್ಮೆ ಶನಿವಾರವಾಡ

ಡಾ.ಉಮಾಮಹೇಶ್ವರಿ ಎನ್.

ಮೊದಲನೇ ಬಾಜಿರಾವ್ ಕಟ್ಟಿಸಿದ ಶನಿವಾರವಾಡ ಕೋಟೆಯು ಮಹಾರಾಷ್ಟ್ರದ ಬಹು ಸುಂದರ ಐತಿಹಾಸಿಕ ಕಟ್ಟಡ ಗಳಲ್ಲಿ ಒಂದು.

ಮಹಾರಾಷ್ಟ್ರದ ಪುಣೆ ನಗರ ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದ ನಗರ ಗಳಲ್ಲಿ ಒಂದು. ಈ ನಗರದ ಕೇಂದ್ರ ಭಾಗದಲ್ಲಿರುವ ಶನಿವಾರವಾಡ ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಪ್ರಮುಖವಾದದ್ದು. 18ನೆಯ ಶತಮಾನದಲ್ಲಿ ನಿರ್ಮಾಣಗೊಂಡು ಹಲವಾರು ದಶಕಗಳ ಕಾಲ ಪೇಶ್ವೆಯರ ವಾಸಸ್ಥಳ ವಾಗಿತ್ತು.

ಮೊದಲನೇ ಬಾಜಿರಾವ್ ಇದರ ಶಂಕುಸ್ಥಾಪನೆ ನೆರವೇರಿಸಿದ್ದು ಶನಿವಾರ, ಜನವರಿ 10, 1730ರಂದು. ಉದ್ಘಾಟನೆ ಆದದ್ದು ಶನಿವಾರ, ಜನವರಿ 22, 1732ರಂದು. ಇವೆರಡು ಸಂದರ್ಭಗಳೂ ಹಿಂದೂ ಸಂಪ್ರದಾಯದ ಪ್ರಕಾರ ಶುಭಮುಹೂರ್ತದಂದು ನೆರವೇರಿದ್ದವು. ಇಡೀ ನಿರ್ಮಾಣದ ಖರ್ಚು ಆಗಿನ ಕಾಲದಲ್ಲಿ 16110 ರೂಪಾಯಿಗಳಾಗಿದ್ದವು.

ಏಳು ಅಂತಸ್ತಿನ ಅರಮನೆ
ಒಳಗಿದ್ದ ಅರಮನೆಯ ಒಂದು ಭಾಗ ಏಳು ಅಂತಸ್ತುಗಳನ್ನು ಹೊಂದಿದ್ದು ಸುಂದರವಾಗಿತ್ತೆಂದು ಅಲ್ಲಿರುವ ಫಲಕ ತಿಳಿಸಿತು.
ಇಂದು ಉಳಿದುಕೊಂಡಿರುವುದು ಹಳೆಯ ಕಟ್ಟಡದ ಕೆಲವು ಗುರುತುಗಳು ಮಾತ್ರ. ಮೊದಲನೇ ಅಂತಸ್ತು ಕಲ್ಲಿನಲ್ಲಿ ನಿರ್ಮಾ ಣವಾದ ನಂತರ ಪೇಶ್ವೆಯರ ವಾಸಸ್ಥಾನ ಕಲ್ಲಿನಲ್ಲಿ ನಿರ್ಮಿಸಕೂಡದು, ರಾಜರ ವಾಸಸ್ಥಾನ ಮಾತ್ರ ಕಲ್ಲಿನಲ್ಲಿರಬೇಕೆಂಬ ಮಾತು ಬಂತಂತೆ. ಹಾಗಾಗಿ ಉಳಿದ ನಿರ್ಮಾಣ ಇಟ್ಟಿಗೆಗಳನ್ನು ಉಪಯೋಗಿಸಿ ಪೂರ್ಣಗೊಳಿಸ ಲಾಯಿತು. 1758ರ ಸಮಯದಲ್ಲಿ ಸುಮಾರು ಒಂದು ಸಾವಿರ ಜನರು ಇದರೊಳಗೆ ವಾಸಿಸು ತ್ತಿದ್ದರು.

ಆತ್ಮದ ಸಂಚಾರ
1773ರಲ್ಲಿ ಐದನೇ ಪೇಶ್ವೆ ನಾರಾಯಣ ರಾವ್ ತನ್ನ ಸೇವಕರಿಂದಲೇ ಕೊಲೆಯಾದರು. ಅವರ ಚಿಕ್ಕಪ್ಪ ರಘುನಾಥ ರಾವ್ ಮತ್ತು ಚಿಕ್ಕಮ್ಮ ಆನಂದಿಬಾಯಿ ಈ ಕೃತ್ಯವನ್ನು ಮಾಡಿಸಿದ್ದರು. ಹುಣ್ಣಿಮೆಯ ದಿನಗಳಲ್ಲಿ ನಾರಾಯಣ ರಾವ್ ನ ಆತ್ಮ ಕೋಟೆಯೊಳಗೆ ಸಂಚರಿಸುತ್ತದೆ ಎಂಬ ಪ್ರತೀತಿಯೂ ಇದೆ.

ಹುಣ್ಣಿಮೆಯ ದಿನಗಳಂದು ‘ಚಿಕ್ಕಪ್ಪಾ, ನನ್ನನ್ನು ರಕ್ಷಿಸು’ ಎಂಬ ಆರ್ತನಾದವನ್ನು ಕೇಳಬಹುದು ಎಂದು ಸ್ಥಳೀಯರು ಹೇಳುತ್ತಾರಂತೆ. ಇಲ್ಲಿನ ಕೋಟೆ ತನ್ನ ವಿಶಿಷ್ಟವಾದ ಐದು ಬಾಗಿಲುಗಳೊಂದಿಗೆ ಸುಸ್ಥಿತಿಯಲ್ಲಿ ಉಳಿದುಕೊಂಡಿದೆ. ಹಲವೆಡೆ ಮೆಟ್ಟಲುಗಳನ್ನು ಹತ್ತಿ ಕೋಟೆಯ ಮೇಲ್ಭಾಗದುದ್ದಕ್ಕೂ ನಡೆಯಬಹುದು.

ಡೆಲ್ಲಿ ಗೇಟ್
ಡೆಲ್ಲಿಯ ಕಡೆಗೆ ಮುಖಮಾಡಿರುವ ಇದು ಮುಖ್ಯದ್ವಾರ. ಡೆಲ್ಲಿಯ ಮೊಘಲರನ್ನು ಎದುರಿಸುವ ಮನಸ್ಥಿತಿಯನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಬಹಳ ಎತ್ತರವಿರುವ ಈ ದ್ವಾರ ಅಂಬಾರಿ ಹೊತ್ತ ಆನೆಗಳು ಒಳ-ಹೊರ ಹೋಗಲು ಅವಕಾಶ ನೀಡುತ್ತಿತ್ತು. ಇದರ ಬಾಗಿಲುಗಳಿಗೆ ಆನೆಗಳು ಹಣೆಯಿಂದ ಢೀ ಕೊಡದಂತೆ ಕಬ್ಬಿಣ್ ಮೊಳೆಗಳನ್ನು ಅಳವಡಿಸಲಾಗಿದೆ.

ಪ್ರತಿ ಬಾಗಿಲಲ್ಲೂ 12 ಇಂಚು ಉದ್ದದ 72 ಮೊಳೆಗಳಿವೆ. ಶತ್ತು ಸೈನ್ಯ ಈ ಬಾಗಿಲನ್ನು ಮುರಿದು ಒಳ ಬಂದರೆ ಬಲಕ್ಕೆ ಮತ್ತು ಎಡಕ್ಕೆ ತಿರುಗಿದ ನಂತರವೇ ಪ್ರಾಂಗಣವನ್ನು ಪ್ರವೇಶಿಸುವಂತೆ ನಿರ್ಮಾಣವಾಗಿತ್ತು. ಒಳಗಿದ್ದ ಸೈನ್ಯಕ್ಕೆ ಶತ್ರುಗಳನ್ನು ಎದುರಿಸಲು ಸಾಕಷ್ಟು ಸಮಯಾಕಾಶ ಈ ನಿರ್ಮಾಣ ನೀಡುತ್ತಿತ್ತು. ಇದಲ್ಲದೆ ಛಾವಣಿಯಿಂದ ಶತ್ತುಸೈನಿಕರ ಮೇಲೆ ಕಾದ ಎಣ್ಣೆಯನ್ನು ಸುರಿಯಲು ಅನುಕೂಲವಾಗು ವಂತಹ ರಂಧ್ರಗಳನ್ನೂ ಈ ದ್ವಾರದ ಆಸುಪಾಸಿನಲ್ಲಿ ರಚಿಸಲಾಗಿತ್ತು.

ಮಸ್ತಾನಿ ಅಥವಾ ಆಲಿಬಹಾದುರ್ ಗೇಟ್: ಒಂದನೆಯ ಬಾಜಿರಾವ್ ನ ಹೆಂಡತಿಯಾದ ಮಸ್ತಾನಿ ಕೋಟೆಯಿಂದ ಹೊರ ಹೋಗಲು ಬಳಸುತ್ತಿದ್ದ ದ್ವಾರ.

ಕಿಟಕಿ ಗೇಟ್: ಬಾಗಿಲಿನಲ್ಲಿ ಒಬ್ಬ ಮನುಷ್ಯ ಒಳ-ಹೊರ ಹೋಗುವಷ್ಟು ಅವಕಾಶವಿರುವ ಕಿಟಕಿ ಇತ್ತು. ಸೈನಿಕರು ಬಳಸು ತ್ತಿದ್ದರು.

ಗಣೇಶ ಗೇಟ್: ಗಣೇಶ ರಂಗ ಮಹಲ್ ಎಂಬ ಅರಮನೆಯ ಭಾಗದ ಬಳಿ ಇತ್ತು. ಇದರ ಮೂಲಕ ಮಹಿಳೆಯರು ಕೋಟೆಯ
ಹೊರ ಹೋಗಿ ಕಸ್ಬಾ ಗಣಪತಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು.

ನಾರಾಯಣ ಗೇಟ್: ಕೊಲೆಯಾದ ನಾರಾಯಣ ರಾವ್‌ನ ದೇಹವನ್ನು ಈ ದ್ವಾರದ ಮೂಲಕ ಅಂತ್ಯಸಂಸ್ಕಾರಕ್ಕಾಗಿ ಒಯ್ಯ
ಲಾಗಿತ್ತು. ಕೋಟೆಯ ಒಳಗೆ ಅರಮನೆ, ಉದ್ಯಾನವ ನಗಳು, ಕಾರಂಜಿಗಳು ಹಾಗೂ ನೀರಿನ ತೊಟ್ಟಿಗಳು ಇದ್ದವು. ಅರಮನೆ
ಯು ಏಳು ಅಂತಸ್ತುಗಳ ಭವ್ಯ ಸೌಧವಾಗಿದ್ದು ಪೇಶ್ವೆಯ ವಾಸಸ್ಥಾನ ಏಳನೆಯ ಅಂತಸ್ತಿನಲ್ಲಿ ಇರುತ್ತಿತ್ತು. ಇಲ್ಲಿಂದ ಹದಿನೇಳು
ಕಿ.ಮೀ. ದೂರದ ಅಳಂದಿಯ eನೇಶ್ವರ ದೇವಸ್ಥಾನದ ಗೋಪುರವು ಕಾಣಿಸುತ್ತಿತ್ತಂತೆ.

ಗಣೇಶ ರಂಗ ಮಹಲ, ನೃತ್ಯ ಮಹಲ್ ಹಾಗೂ ಶೀಶ್ ಮಹಲ್ ಈ ಅರಮನೆಯ ಭಾಗಗಳಾಗಿದ್ದವು. ಒಳಗಿರುವ ನೀರಿನ ತೊಟ್ಟಿ ಹಾಗೂ ವಿವಿಧೆಡೆಗಳಿಗೆ ನೀರು ಹಾಯಿಸುವ ವ್ಯವಸ್ಥೆ ಉತ್ತಮವಾಗಿತ್ತು. ಕಮಲದ ಆಕಾರದ ಹಜಾರಿ ಕಾರಂಜಿ ಆ ಕಾಲದ ಅದ್ಭುತ ರಚನೆಯಾಗಿತ್ತು ಹಾಗೂ ಪ್ರಮುಖ ಆಕರ್ಷಣೆಯಾಗಿತ್ತು. ಪೇಶ್ವೆ ಮಾಧವರಾವ್ ಮಗುವಾಗಿದ್ದಾಗ ಅವರ ಮನರಂಜನೆ ಗೆಂದು ನಿರ್ಮಿಸಲಾಗಿತ್ತು. ಹದಿನಾರು ಎಸಳುಗಳ ಕಮಲದ ಆಕಾರದ ರಚನೆಯ ಪ್ರತಿ ಎಸಳಿನಿಂದಲೂ ಹದಿನಾರು ಕಾರಂಜಿ ಗಳು ಚಿಮ್ಮುತ್ತಿದ್ದವು.

ಪುಣೆಯ ಪ್ರಮುಖ ಐತಿಹಾಸಿಕ ಸ್ಮಾರಕವಾದ ಇದರ ಪ್ರವೇಶ ಶುಲ್ಕ 25 ರೂಪಾಯಿಗಳು. ಪೇಶ್ವೆ ಒಂದನೇ ಬಾಜಿರಾವ್‌ನ
ಸ್ಮಾರಕ ಮುಖ್ಯದ್ವಾರದ ಎದುರು ಸ್ಥಾನ ಪಡೆದುಕೊಂಡಿದೆ.

***

ಏಳು ದಿನ ಬೆಂಕಿ
1818ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ದಾಳಿ ನಡೆದಾಗ ಪೇಶ್ವೆ ಎರಡನೆಯ ಬಾಜಿರಾವ್ ಪಲಾಯನಗೈಯ ಬೇಕಾ ಯಿತು. ದಾಳಿಯ ಸಮಯದಲ್ಲಿ ಸಾಕಷ್ಟು ಹಾನಿಗೊಳಗಾಗಿದ್ದ ಅರಮನೆ ಫೆಬ್ರವರಿ 27, 1828ರಂದು ಬೆಂಕಿಗಾಹುತಿಯಾಯಿತು. ಏಳುದಿನಗಳ ಕಾಲ ಉರಿದ ಜ್ವಾಲೆ ಅರಮನೆಯನ್ನು ಪೂರ್ತಿಯಾಗಿ ನಾಶಮಾಡಿತು. ಕೊನೆಗೆ ಉಳಿದದ್ದು ನೆಲ ಅಂತಸ್ತಿನಲ್ಲಿ ಹುದುಗಿಸಿದ್ದ ಕಲ್ಲುಗಳ ರಚನೆ ಹಾಗೂ ಕೋಟೆ ಮತ್ತು ಅದರ ಗಟ್ಟಿಮುಟ್ಟಾದ ಬಾಗಿಲುಗಳು ಮಾತ್ರ.