Friday, 24th September 2021

ಶಶಿಧರ್ ಪೂಜಾರ್ ಹುಟ್ಟು ಹಬ್ಬ : ಸಸಿ ನೆಟ್ಟ ಕಡತಿ ಅಭಿಮಾನಿಗಳು

ಹರಪನಹಳ್ಳಿ: ತಾಲೂಕಿ ಕಡತಿ ಗ್ರಾಮದಲ್ಲಿ ಶಶಿಧರ್ ಪೂಜಾರ್ ಅಭಿಮಾನಿಗಳು ಹಾಗೂ ಗ್ರಾಮ ಅರಣ್ಯ ಸೇವಾ ಟ್ರಸ್ಟ್‌ನ ಯುವಕರು ಕಡತಿ ಕ್ಯಾಂಪ್‌ ನ ಬಸವನ ಮರಡಿಯಲ್ಲಿ 100ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿ ನೆಟ್ಟು ನೀರುಣಿಸುವ ಮೂಲಕ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ ಶಶಿಧರ್ ಪೂಜಾರ್ ಅವರ 46ನೇ ಹುಟ್ಟು ಹಬ್ಬವನ್ನು ತುಂಬಾ ಅರ್ಥ ಪೂರ್ಣವಾಗಿ ಆಚರಿಸಿ ದರು.

ಈ ಕಾರ್ಯಕ್ರಮದಲ್ಲಿ ಕಡತಿ ಗ್ರಾಮ ಅರಣ್ಯ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಗುಡ್ಡಪ್ಪ ಸಾರಥಿ, ಗ್ರಾಮ ಅರಣ್ಯ ಟ್ರಸ್ಟ್ ನ ಸಂಸ್ಥಾಪಕ ಮಹೇಶ್ವರ ಕೆ.ಟಿ, ಉಪ ಕಾರ್ಯದರ್ಶಿಗಳಾದ ದುಗ್ಗತ್ತಿ ಬೀರಪ್ಪ, ಮಹೇಶ್ ಎಂ.ಎಂ, ಗಿರೀಶ್ ಕುಮಾರ. ಜಿ, ಸುನೀಲ್.ಎಂ.ಎಸ್ ಹಾಗೂ ಯುವರಾಜ.ಕೆ ಸೇರಿದಂತೆ ಪುಟಾಣಿ ಮಕ್ಕಳು ಭಾಗಿಯಾಗಿದ್ದರು.

ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ ಶಶಿಧರ್ ಪೂಜಾರ್ ಅವರ 46ನೇ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕಿನ ಶಶಿಧರ್ ಪೂಜಾರ್ ಅಭಿಮಾನಿ ಬಳಗದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು.

ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಹಾಗೂ ಕಾಂಗ್ರೆಸ್ ಯುವ ಮುಖಂಡರಾಗಿರುವ ಶಶಿಧರ್ ಪೂಜಾರ್ ಅವರು ಸರಳ ಸಜ್ಜನ ರಾಜಕಾರಣಿ ಯಾಗಿದ್ದು, ಜನಾನುರಾಗಿಯಾಗಿದ್ದು, ಸಾಮಾನ್ಯರಲ್ಲಿ ಸಾಮಾನ್ಯ ರಾಗಿ ಕ್ಷೇತ್ರಗಳಲ್ಲಿ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಿ ಬಗೆಹರಿಸುವ ನಿಟ್ಟಿನಲ್ಲಿ ಹೋರಾಡುವ, ಸಂಘಟನಾ ಚತುರರು, ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆಗೆ ಶ್ರಮಿಸುತ್ತಿರುವವರು ಇವರಿಗೆ ಭಗವಂತ ದೀರ್ಘಕಾಲದ ಆಯಸ್ಸು ಮತ್ತು ಆರೋಗ್ಯ ನೀಡಿ ಹರಸಲಿ ಅವರ ಸೇವೆ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಹೆಚ್ಚು ಹೆಚ್ಚು ದೊರೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಯುವ ಕಾಂಗ್ರೆಸ್‌ನ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಟಿಎಪಿಎಂಎಸ್ ನಿರ್ದೇಶಕ ಗಿಡ್ಡಳ್ಳಿ ನಾಗರಾಜ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಆರ್.ಮಾಂತೇಶ್ ನಾಯ್ಕ, ಎನ್ ಎಸ್ ಯು ಐ ಅಧ್ಯಕ್ಷ ಅಧ್ಯಕ್ಷ ಶ್ರೀಕಾಂತ್ ಯಾದವ್, ಮುಖಂಡರಾದ ಎಂ.ಕೆ.ರಾಯರ್ ಸಿದ್ದೀಕ್, ರಿಯಾಜ್ ಅಹ್ಮದ್, ಬಸವರಾಜ್ ಭಂಡಾರಿ, ಯರಿಸ್ವಾಮಿ, ಅಬ್ದುಲ್ ರೆಹಮಾನ್, ಸೋಗಿ ಇಬ್ರಾಹಿಂ, ನೂರುದ್ದೀನ್, ಸಮಿಉಲ್ಲಾ, ಶಾಕಿರ್ ಅಲಿ, ಬಿ.ಎಲ್.ಬೀರೇಶ್, ಶಮ್ಸುದ್ದಿನ್ ಕೋಲ್ಕರ್, ರಂಜಿತ್ ಪೂಜಾರ್, ಮನ್ಸೂರ್, ಮೋಹನ್ ಕುಮಾರ್, ವಿಜಯಕುಮಾರ್ ಶೃಂಗರ ತೋಟ, ಡಿ.ಮಂಜು, ನಯಾಜ್, ಬಸವರಾಜ, ಸಲೀಂ ಲಾಟಿ, ಹಸೇನ್ ಸೇರಿದಂತೆ ಮತ್ತಿತರರು ಕಾಂಗ್ರೆಸ್ ಯುವ ಮುಖಂಡರು ಇದ್ದರು.

ತಾಲೂಕು ಶಶಿಧರ್ ಪೂಜಾರ್ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿರುವ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ಟು ವಿತರಣೆ ಮಾಡಲಾಯಿತು.

ಈ ವೇಳೆ ಕಾಂಗ್ರೆಸ್‌ ಯುವ ಮುಖಂಡರಾದ ನಯಾಜ್, ತಾಜು, ಮಂಜುನಾಥ, ಬಸವರಾಜ್, ಸಲ್ಮಾನ್, ಗಬ್ಬರ್, ಬೀರಪ್ಪ, ಮೋಹನ್ ಸೇರಿದಂತೆ ಶಶಿಧರ್ ಪೂಜಾರ್ ಅಭಿಮಾನಿಗಳು ಭಾಗಿಯಾಗಿದ್ದರು.

ತೊಗರಿಕಟ್ಟಿ ಗ್ರಾಮ ಪಂಚಾಯ್ತಿಯ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಅಣ್ಣಿ ಪಿ ಲಕ್ಷ್ಮಣ ನಾಯ್ಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ನೇಮ್ಯನಾಯ್ಕ, ಟಿಎಪಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್, ನಿರ್ದೇಶಕ ತಿಮ್ಮನಾಯ್ಕ, ಮಾಜಿ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ನಿರ್ದೇಶಕ ಪಿ.ವೇದುನಾಯ್ಕ, ತೊಗರಿಕಟ್ಟಿ ಈ.ಗುರುಶಾಂತಪ್ಪ, ಎಲ್.ಪ್ರವೀಣಕುಮಾರ್, ಈ.ಗಂಗಪ್ಪ, ಎಂ.ರೊಕ್ಕಪ್ಪ, ಗ್ರಾಮ ಪಂಚಾಯತಿ ಸದಸ್ಯ ಗೌಡ್ರು ಮುತ್ತಪ್ಪ, ಹೊಳಗುಂದಿ ಬಸವರಾಜ, ಅಡವಿಹಳ್ಳಿ ಹಾಲಪ್ಪ, ಕರಡಿ ಸಿದ್ದಪ್ಪ, ಗೌಡ್ರ ಅಂಜಿನಪ್ಪ, ರಿಯಾಜ್ ಅಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *