Tuesday, 25th February 2020

ಪರೀಕ್ಷೆಯಲ್ಲಿ ನಪಾಸಾಗುವುದು ಆತ್ಮಹತ್ಯೆಗೆ ಕಾರಣವಾಗಬೇಕೇ?!

ನಮ್ಮ ಪುರಾತನ ಶಿಕ್ಷಣ ಮುಕ್ತ ಸಂವಾದದ ರೀತಿಯದ್ದಾಗಿತ್ತು. ಹೆಚ್ಚಿನ ಪುರಾಣ, ಇತಿಹಾಸ, ವೇದ, ವೇದಾಂಗಗಳೆಲ್ಲಾ ಪ್ರಶ್ನೋತ್ತರ ರೂಪದಲ್ಲಿವೆ. ಈ ರೀತಿಯ ವಿದ್ಯೆೆಯಿಂದ ಸಂಶೋಧನೆ, ಆವಿಷ್ಕಾರಗಳು ಸಂಭವ.

ಡಾ.ರಾಘವೇಂದ್ರ ವೈಲಾಯ, ಮಕ್ಕಳ ತಜ್ಞರು

ಅಂದಿನ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿತ್ತು: ಪಿಯುಸಿ ಯಲ್ಲಿ 15ನೇ ರ್ಯಾಾಂಕ್ ಪಡೆದು ಮೆಡಿಕಲ್ ಓದುತ್ತಿದ್ದ ವಿದ್ಯಾಾರ್ಥಿಯ ಆತ್ಮಹತ್ಯೆೆ. ಕಾರಣ 2ನೇ ವರ್ಷದ ಮೆಡಿಕಲ್ ಪರೀಕ್ಷೆಯಲ್ಲಿ ಅನುತ್ತೀರ್ಣತೆ. ಇಂದಿನ ಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವೆಂಬಂತಾಗಿರುವ ಸುದ್ದಿಯಿದು. ಯಃಕಶ್ಚಿತ್ ಒಂದು ಪರೀಕ್ಷೆಯಲ್ಲಿ ನಪಾಸಾಗುವುದು ವ್ಯಕ್ತಿ ಜೀವನದ ಸೋಲೇ? ಆತ ಪ್ರಯತ್ನ ಪಟ್ಟರೆ ಕೇವಲ 6 ತಿಂಗಳಲ್ಲಿಯೇ ಪಾಸಾಗಬಹುದು. ಕಳೆದುಕೊಳ್ಳುವುದು ಹೆಚ್ಚೇನಿಲ್ಲ. ಬದುಕೆಲ್ಲಾ ಕಷ್ಟಪಟ್ಟು ಆತನನ್ನು ಸಲಹಿ ಬೆಳೆಸಿದ ಪಾಲಕರ ಗತಿಯೇನು?

ಈ ಸಾವು ನಿಜವಾಗಿ ಆತನದ್ದಲ್ಲ. ಇಷ್ಟು ಕ್ಷುಲ್ಲಕ ವಿಚಾರಕ್ಕೆೆ ಆತ ಸಾಯುವುದನ್ನು ತಡೆಯಲು ಸಾಧ್ಯವಾಗುವ ವಿದ್ಯೆೆ ನೀಡದ ಶಿಕ್ಷಣ ವ್ಯವಸ್ಥೆೆಯದ್ದು. ಯುವತಿಯೊಬ್ಬಳು ಪ್ರೇಮನಿವೇದನೆ ಯನ್ನು ನಿರಾಕರಿಸುವುದು, ಅಪ್ಪನು ಮಗನಿಗೆ ಎರಡು ಏಟು ಹೊಡೆಯುವುದು, ಶಿಕ್ಷಕರು ಕ್ಲಾಾಸಿನಲ್ಲಿ ಬೈಯುವುದು. ಇವೆಲ್ಲಾ ವಿದ್ಯಾಾರ್ಥಿಯೊಬ್ಬನ ಆತ್ಮಹತ್ಯೆೆಗೆ ಕಾರಣವೆಂದರೆ ಏನರ್ಥ, ಛೇ!

ಶಿಕ್ಷಣದ ಮೂಲ ಉದ್ದೇಶ ಸಂಪೂರ್ಣ ವ್ಯಕ್ತಿಿತ್ವದ ವಿಕಸನವೇ ಹೊರತು, ಕೇವಲ ಮೌಖಿಕ ವಿಚಾರ ಸಂಗ್ರಹವಲ್ಲವಷ್ಟೇ ಅಲ್ಲ. ಆದರೆ ನೈತಿಕ, ಸಾಮಾಜಿಕ ಮೌಲ್ಯಗಳ ಜೊತೆಗೆ ವೈಚಾರಿಕ ತಾತ್ತ್ವಿಕ ಬೋಧೆಗಳನ್ನೂ ನೀಡದ ಭಾರತದ ಇಂದಿನ ಶಿಕ್ಷಣ ವ್ಯವಸ್ಥೆೆಯು ಸಂಪೂರ್ಣ ದೋಷಪೂರಿತ ಎನ್ನುವುದು ಯಾವುದೇ ಮೇಧಾವಿ ಹೇಳಬೇಕಿಲ್ಲ. ಅಲ್ಪಮತಿಗೂ ಗ್ರಾಾಹ್ಯವಾದೀತು. ಇಂದು ದುಬಾರಿ ಶುಲ್ಕ ತೆತ್ತು ಕುದುರೆ ರೇಸಿನಲ್ಲಿ ನಮ್ಮ ಮಕ್ಕಳನ್ನು ಬಿಟ್ಟು ನಾವು ಕಲಿಸುತ್ತಿಿರುವ ಸೋ ಕಾಲ್‌ಡ್‌ ಆಧುನಿಕ ಶಿಕ್ಷಣವು ದಾರಿ ತಪ್ಪಿಿದೆಯೆನ್ನಲು ಇಷ್ಟು ಪೀಠಿಕೆ ಸಾಕು.

ಸನಾತನ ಭಾರತೀಯ ಪರಂಪರೆಯಲ್ಲಿ ವಿದ್ಯೆೆಗೆ ಕೊಟ್ಟ ಮಹತ್ವ ಅತ್ಯುನ್ನತವಾಗಿದೆ. ಅದಕ್ಕೆೆ ಗುರು ಶಿಷ್ಯ ಪರಂಪರೆಯ ಶ್ರೀರಕ್ಷೆಯಿತ್ತು. ಗುರುಕುಲ ಪದ್ಧತಿಯ ರೀತಿ ನೀತಿ ನಿಯಮ ನಿಷ್ಠೆೆಗಳ ಚೌಕಟ್ಟಿಿತ್ತು. ಬ್ರಹ್ಮಚರ್ಯ, ಆಶ್ರಮದ ನಿಯಂತ್ರಣವಿತ್ತು. ‘ಅನ್ನದಾನಂ ಪರಂದಾನಂ, ವಿದ್ಯಾಾದಾನಮತಃ ಪರಮ್, ಅನ್ನೇನ ಕ್ಷಣಿಕ ತೃಪ್ತಿಿ: ಯಾವಜ್ಜೀವಂ ಚ ವಿದ್ಯಯಾ’- ಹೀಗಿತ್ತು ನಮ್ಮ ಹಿರಿಯರ ಅದ್ಭುತ ವಿಚಾರಸರಣಿ. ಗುರುವಿಗೆ ಅಪಾರ ಗೌರವವೂ, ಉನ್ನತ ಸಾಮಾಜಿಕ ಸ್ಥಾಾನಮಾನಗಳೂ ಇತ್ತು. ಇವೆಲ್ಲವೂ ಪಾಶ್ಚಾಾತ್ಯರಿಂದ ಎರವಲು ಪಡೆದ ಆಧುನಿಕ (?) ಶಿಕ್ಷಣ ಪದ್ಧತಿಯಲ್ಲಿ ಕಾಣಸಿಗದು. ನಮಗೆ ಹಿತ್ತಲ ಗಿಡ ಮದ್ದಲ್ಲವೆಂಬುದೇ ವಿಪರ್ಯಾಸ.

ಆಸ್ಪತ್ರೆೆಯಲ್ಲಿ ಸಾವು ಅಪರಾಧ. ಶಾಲೆಯಲ್ಲಿ ಶಿಕ್ಷೆ ಅಪರಾಧ. ಇದು ಆಧುನಿಕರ ಅತಾರ್ಕಿಕ ಅಪರ ವರಸೆ. ಹಾಗಾಗಿ ಇಂದು ಶಿಕ್ಷಕರೂ ಕೂಡಾ ಪಾಲಕರ ಭಯದಿಂದ ವಿದ್ಯಾಾರ್ಥಿಗಳ ಬಗ್ಗೆೆ ಹೆಚ್ಚಿಿನ ಆಸಕ್ತಿಿ ವಹಿಸಲು ಹಿಂದೇಟು ಹಾಕುವಂತಾಗಿದೆ. ಇಂದು ದೇಶದ ಪ್ರತಿಷ್ಠಿಿತ ವಿಶ್ವವಿದ್ಯಾಾಲಯಗಳಲ್ಲಿ ಕಂಡುಬರುವ ಅಶಿಸ್ತಿಿನ ಕಾರಣ ಪ್ರಾಾಥಮಿಕ ವಿದ್ಯಾಾರ್ಥಿ ದೆಸೆಯಲ್ಲಿ ಶಿಕ್ಷೆಯ ಅಭಾವವೇ. ಮಕ್ಕಳು ತಪ್ಪುು ಮಾಡಿದಾಗ ಪಾಲಕರು/ಶಿಕ್ಷಕರು ಶಿಕ್ಷೆ ನೀಡದ ಕಾರಣ ಆ ಕೆಲಸವನ್ನು ತದನಂತರ ಪೊಲೀಸರು ಮಾಡುವಂತಾಗಿದೆ. ಟಿಆರ್‌ಪಿಯ ನಶೆಯೇರಿಸಿಕೊಂಡ ಮಾಧ್ಯಮಗಳೂ ಹಲವು ಬಾರಿ ಶಿಕ್ಷಕರನ್ನು (ವೈದ್ಯರಂತೆ) ಕ್ರೂರಿಗಳಾಗಿ ತಪ್ಪಾಾಗಿ ಬಿಂಬಿಸಿ ಬೆಂಕಿಗೆ ತುಪ್ಪ ಸುರಿಯುವ ಮನೆಹಾಳು ಕೆಲಸ ಮಾಡಿವೆ. ಶಿಕ್ಷೆಯಿಲ್ಲದೆ ಶಿಕ್ಷಣವೆಲ್ಲಿ?

ಶಿಕ್ಷೆಯ ಮೂಲ ಉದ್ದೇಶವೇ ಪರಿವರ್ತನೆ. ಕೇವಲ ಶಿಕ್ಷೆಗಾಗಿ ಶಿಕ್ಷೆಯಲ್ಲ. ದಂಡವಿಲ್ಲದೇ ಇದ್ದರೆ ಸುವ್ಯವಸ್ಥೆೆ ಅಸಾಧ್ಯ. ಶಿಕ್ಷೆಯೇ ಇಲ್ಲದಿದ್ದರೆ ತಪ್ಪುು ಮಾಡಲು ಹಿಂಜರಿಕೆಯೇ ಇರಲಾರದು. ಬುದ್ಧಿಿಯು ಪಕ್ವವಾಗಿರದ ಅನಿಯಂತ್ರಿಿತ ವಿದ್ಯಾಾರ್ಥಿ ಜೀವನ ಅಪಾಯವಲ್ಲವೇ? ಸರಿ ತಪ್ಪುುಗಳ ನಿಷ್ಕರ್ಷೆ ಬೇಕಿದೆ. ತಪ್ಪುು ಮಾಡಿದರೆ ತಿದ್ದುವ ಸಲುವಾಗಿ ಶಿಕ್ಷೆ ಅಗತ್ಯ. ಅದು ತರಬೇತಿಯ ಅವಿಭಾಜ್ಯ ಅಂಗ. ಚತುರೋಪಾಯಗಳಲ್ಲಿ ಸಾಮ, ದಾನ, ಭೇದಗಳಂತೆ ದಂಡವೂ ಮುಖ್ಯವಾಗಿದೆ. ಆಯಾ ಸಂದರ್ಭಕ್ಕೆೆ ತಕ್ಕಂತೆ ಅವುಗಳನ್ನು ಸೂಕ್ತವಾಗಿ ಬಳಸಬೇಕಿದೆ. ಪೊಲೀಸ್ ಇಲ್ಲದ ಸಾಮಾಜಿಕ ವ್ಯವಸ್ಥೆೆಯನ್ನಿಿಂದು ಊಹಿಸಲಾದೀತೇ? ಶಿಕ್ಷೆ, ಕ್ಷಮೆ ಕರುಣೆಗಳ ಸಮನ್ವಯವೇ ಶಿಕ್ಷಣವಲ್ಲವೇ?

ಇಂದಿನ ‘ಆಧುನಿಕ’ ಶಿಕ್ಷಣವು ಕೇವಲ ಪುಸ್ತಕದ ಬದನೆಕಾಯಿಗಷ್ಟೇ ಸೀಮಿತವಾಗಿದೆ. ಅದರಲ್ಲಿ ಪ್ರಾಾಯೋಗಿಕಾಂಶಗಳು ತೀರಾ ವಿರಳ. ಪ್ರಕೃತಿಯಿಂದ ನಾವಿಂದು ಬಲು ದೂರ ಸಾಗಿ ಬಂದಿದ್ದೇವೆ. ಹೆಚ್ಚಿಿನ ಪ್ರಾಾಣಿ-ಪಕ್ಷಿ-ಗಿಡ ಮರಗಳನ್ನು ನಾವಿಂದು ಪುಸ್ತಕಗಳಲ್ಲಿ ಇಲ್ಲವೇ ಅಪರೂಪಕ್ಕೊೊಮ್ಮೆೆ ಪ್ರಾಾಣಿಸಂಗ್ರಹಾಲಯದಲ್ಲಿ ಮಾತ್ರವೇ ನೋಡುವಂತಾಗಿದೆ. ಹೀಗೆ ಕೇವಲ ಊಹಿಸಿ ಉರುಹೊಡೆಯುವ ಬೌದ್ಧಿಿಕ ವ್ಯಾಾಯಾಮವು ವಿದ್ಯಾಾರ್ಥಿಗಳನ್ನು ಪುಸ್ತಕದ ಹುಳುಗಳನ್ನಾಾಗಿಸಿದೆ.

ಮಕ್ಕಳ ಜ್ಞಾನದ ಹಸಿವನ್ನು ತಣಿಸಿ, ಕುತೂಹಲ, ಜಿಜ್ಞಾಸೆ, ತಾರ್ಕಿಕ ಚಿಂತನೆಗಳನ್ನು ಪ್ರಚೋದಿಸುವುದೇ ಉತ್ತಮ ಶಿಕ್ಷಕನ ಲಕ್ಷಣ. ಉಪನ್ಯಾಾಸ ನೀಡುವುದು ಕೇವಲ ಏಕಮುಖ ಸಂವಹನ. ಸಂವಾದವು ದ್ವಿಿಮುಖ ವ್ಯಾಾಯಾಮ. ಅದುವೇ ನೈಜ ಶಿಕ್ಷಣದ ಅಪೇಕ್ಷಿತ ಆಯಾಮ. ನಮಗಿಂದು ಮುಕ್ತ ಚಿಂತನೆಗೆ ತೆರೆದುಕೊಳ್ಳುವ ಮನಸ್ಸು ಬೇಕು. ಜ್ಞಾನವು ನಿಂತ ನೀರಾದರೆ ಕೊಳಕು ರಾಡಿಯಾಗುತ್ತದೆ. ಹರಿಯುವ ನೀರಾದಲ್ಲಿ ಮಾತ್ರವೇ ಶುದ್ಧವಾದ ತೀರ್ಥವಾಗಿರಬಲ್ಲುದು.

ಬ್ರಿಿಟಿಷರ ಕಾಲದಲ್ಲಿ ಹರಗೋವಿಂದ ಖುರಾನಾ, ಸಿ.ವಿ.ರಾಮನ್, ಬೋಸ್, ರಾಮಾನುಜನ್ ಅವರಂಥ ಶ್ರೇಷ್ಠ ವಿಜ್ಞಾನಿಗಳನ್ನು ನೀಡಿದ ಭಾರತವು ಸ್ವಾಾತಂತ್ರ್ಯಾಾ ನಂತರ ಯಾವುದೇ ಮಹತ್ತರವಾದ ಮೂಲಭೂತ ವಿಜ್ಞಾನದ ಆವಿಷ್ಕಾಾರವನ್ನು ಮಾಡಿದ ವಿಜ್ಞಾನಿಗಳನ್ನೂ ಜಗತ್ತಿಿಗೆ ನೀಡಿಲ್ಲ. ಅದಕ್ಕೆೆ ಮುಖ್ಯ ಕಾರಣ ನಮ್ಮ ಆಮದು ಶಿಕ್ಷಣ ನೀತಿ. ಇದು ತುಂಬಾ ಹಳೆಯದಾಗಿ ಹಳಸಿದ್ದರೂ ನಾವು ಅದನ್ನು ಇನ್ನೂ ಪರಿಷ್ಕರಿಸದೇ ಅಪ್ಪ ನೆಟ್ಟ ಆಲದಮರದಂತೆ ಸುತ್ತು ಬರುತ್ತಿಿದ್ದೇವಷ್ಟೇ! ಈ ಕುರಿತು ನಾವಿಂದು ಗಂಭೀರವಾಗಿ ಚಿಂತಿಸಬೇಕಿದೆ.

ಆಧುನಿಕ ಪರಿಭಾಷೆಯಲ್ಲಿ ಪದವೀಧರರಾದ ಹೆಚ್ಚಿಿನವರು (ನಮ್ಮನ್ನೂ ಸೇರಿಸಿಕೊಂಡಂತೆ) ನಿಜವಾಗಲೂ ವಿದ್ಯಾಾವಂತರೇ? ಸುಶಿಕ್ಷಿತರೇ? ‘ವಿದ್ಯಾಾ ದಧಾತಿ ವಿನಯಂ, ವಿನಯಾದ್ಯಾಾತಿ ಪಾತ್ರತಾಂ ಪಾತ್ರತ್ವಾಾ ಧನಮಾಪ್ರೋೋತಿ, ಧನದ್ಧರ್ಮಂ ತತಃ ಸುಖಂ’-ಈ ಮಾನದಂಡದ ಪ್ರಕಾರ ನಮ್ಮನ್ನು ಹೆಚ್ಚೆೆಂದರೆ ಅಕ್ಷರಸ್ಥರೆನ್ನಬಹುದು. ಆದರೆ ವಿದ್ಯಾಾವಂತರೆನ್ನಲಾಗದು. ವಿದ್ಯೆೆಯ ಪರಿಕಲ್ಪನೆಯೇ ಸಮಗ್ರವಾದ ವ್ಯಕ್ತಿಿ ವಿಕಸನ. ಅದಕ್ಕೆೆ ನೈತಿಕ, ಸಾಮಾಜಿಕ, ಬೌದ್ಧಿಿಕ, ವ್ವಾಾವಹಾರಿಕ, ಧಾರ್ಮಿಕ ಇನ್ನೂ ಹಲವು ಆಯಾಮಗಳಿವೆ.

ಗ್ರಾಾಮೀಣ ಭಾರತದಲ್ಲಿ ಹಲವು ಅನಕ್ಷರಸ್ಥರು ಇರಬಹುದು. ಓದಲು ಬರೆಯಲು ಬಾರದಿದ್ದರೂ ಅವರಲ್ಲಿ ಹೆಚ್ಚಿಿನವರು ಸುಸಂಸ್ಕೃತರು. ಹಾಗಾಗಿ ಅವರನ್ನು ವಿದ್ಯಾಾವಂತರೆನ್ನಲಡ್ಡಿಿಯಿಲ್ಲ. ವಿದ್ಯೆೆಯು ಸಂಸ್ಕಾಾರದ ಪ್ರತೀಕ. ನಮಗೆ ಬೇಕಿರುವುದು ವಿದ್ಯೆೆಯೇ ಹೊರತು ಬರಿಯ ಅಕ್ಷರದ ಜ್ಞಾನವಲ್ಲ. ಅದು ಶುಷ್ಕವಾದ ಪುಸ್ತಕದ ಬದನೇಕಾಯಿಯಾದೀತೇ ಹೊರತು ಬದುಕಲು ಕಲಿಸುವ ವಿದ್ಯೆೆಯ ಮಟ್ಟಕ್ಕೆೆ ಏರಲಾರದು. ಹಳ್ಳಿಿಗರು ಸಣ್ಣ ಪುಟ್ಟ ಕಷ್ಟಗಳಿಗೆಂದೂ ಆತ್ಮಹತ್ಯೆೆಗೆ ಎಳಸಲಾರರು. ಬಡತನವಿದ್ದರೂ ಜೀವನದ ಕಷ್ಟ ಸಹಿಸುವ ಕಲೆ ಇವರಿಗೆ ಕರಗತವಿದೆ. ಜೀವನ ಕಲಿಸುವ ಈ ಪಾಠವನ್ನು ಯಾವ ವಿಶ್ವವಿದ್ಯಾಾಲಯವೂ ಕಲಿಸಲಾರದು. ನಮಗೂ ಇಂಥ ವಿದ್ಯೆೆಯು ಬೇಕಲ್ಲವೇ?

ಪಾಶ್ಚಾಾತ್ಯರು ತಮ್ಮ ಸ್ವಾಾರ್ಥಕ್ಕೆೆ ಭಾರತದ ಕೃಷಿ ಕ್ಷೇತ್ರವನ್ನು ಹಳ್ಳಹಿಡಿಸಿದಂತೆ, ಲಾರ್ಡ್ ಮೆಕಾಲೆಯ ದುರುದ್ದೇಶಪೂರಿತ ವಿದೇಶಿ ಶಿಕ್ಷಣ ಪದ್ಧತಿಯಿಂದ ನಮ್ಮ ವೈಜ್ಞಾನಿಕವಾದ ಗುರುಕುಲಶಿಕ್ಷಣ ಪದ್ಧತಿಯ ಮೂಲೋತ್ಪಾಾಟನೆಯಾಯಿತು. ಕಲಿಸುವ ವಿಷಯಗಳೂ, ರೀತಿ, ರಿವಾಜುಗಳೂ ವಸಾಹತುಶಾಹಿಯನ್ನು ಬಲಪಡಿಸಲು ಸರಿಹೊಂದುವಂತೆ ಬದಲಾಯಿತು. ನಮಗೆ ಪರಂಪರೆಯ ಮೇಲಿನ ಅಭಿಮಾನವು ಮರೆಯಾಗಿ ಅನತಿಕಾಲದಲ್ಲಿಯೇ ನಾವು ಕರಿ ಚರ್ಮದ ಆಂಗ್ಲರಾದೆವು.*ಜಿಠಿಛಿ ್ಞ’ ಆ್ಠ್ಟಛ್ಞಿಿ ಎಂಬ ದುರ್ವಾದವು ಅವರ ವಸಾಹತಿನಲ್ಲಿದ್ದ ಭಾರತೀಯರನ್ನು ‘ನಾಗರಿಕ’ರಾಗಿಸಹೊರಟ ಬ್ರಿಿಟಿಷರಿಗೆ ಆಸರೆಯಾಯಿತು. ನಮ್ಮ ಸಂಸ್ಕಾಾರಗಳನ್ನು ಕಳೆದುಕೊಂಡ ನಾವು ಆಂಗ್ಲಶಿಕ್ಷಿತರಾದೆವೇನೋ ನಿಜ. ಆದರೆ ಸಾಂಸ್ಕೃತಿಕವಾಗಿ ಬರಡಾಗಿ ನಮ್ಮ ಅಸ್ಮಿಿತೆಯನ್ನು ಕಳೆದುಕೊಂಡು ಎಡಬಿಡಂಗಿ ಗಳಾದೆವೆಂಬುದೂ ಕಟುಸತ್ಯ.

ಸಹಸ್ರಮಾನದ ವಿದೇಶಿ ಪಾರತಂತ್ರ್ಯ ದಿಂದ ಮುಕ್ತಿಿಹೊಂದಿದ ಮೇಲಾದರೂ ನಾವು ನಮ್ಮ ಸಾಂಸ್ಕೃತಿಕ ಬೇರುಗಳನ್ನು ಮತ್ತೆೆ ಭದ್ರಪಡಿಸಿಕೊಂಡೆವೇನು? ಇಲ್ಲ. ಮತ್ತದೇ ಹಳೆಯ ಆಂಗ್ಲ ಶಿಕ್ಷಣ, ಸಾಲದೆಂಬಂತೆ ಕಮ್ಯೂನಿಸ್‌ಟ್‌ ಮತ್ತು ಸೆಕ್ಯುಲರ್ ಸಿದ್ಧಾಾಂತಗಳ ಘಾತಕ ಕಲಬೆರಕೆ. ಹಿಂದೂ ಇಲ್ಲದೇ, ಮುಂದೂ ಇಲ್ಲದೇ ವಿದ್ಯಾಾರ್ಥಿಗಳು ದಿಶಾಹೀನರಾಗಲು ಇಷ್ಟು ಸಾಲದೇ? ಇದುವೇ ನಮ್ಮ ದುರಂತ. ಜೀವನಮೌಲ್ಯ, ವೃತ್ತಿಿಕೌಶಲ, ಮುಕ್ತ ಚಿಂತನೆ ಮತ್ತು ಪ್ರಯೋಗಗಳಿಗೆ ಒತ್ತು ನೀಡಿ ರೂಪಿಸಬೇಕಾದ ಶಿಕ್ಷಣ ನೀತಿಯ ಬದಲು, ಉರುಹೊಡೆದು ಪಡೆದ ಅಂಕ ಶ್ರೇಣಿಗಳ ಮೇಲೆ ರೂಪಿತವಾದ ದೂರದೃಷ್ಟಿಿರಹಿತ ಶಿಕ್ಷಣ ವ್ಯವಸ್ಥೆೆಯೇ ಈ ಅಧಃಪತನಕ್ಕೆೆ ಕಾರಣ.

ಭಾರತೀಯ ಶಿಕ್ಷಣವು ಸ್ವಾಾತಂತ್ರ್ಯಪೂರ್ಣ ಸಂವಾದದ ರೀತಿಯದ್ದು. ನಮ್ಮ ಹೆಚ್ಚಿಿನ ಪುರಾಣ, ಇತಿಹಾಸ, ವೇದ, ವೇದಾಂಗಗಳೆಲ್ಲಾ ಪ್ರಶ್ನೋೋತ್ತರದ ರೂಪದಲ್ಲಿವೆ. ಈ ರೀತಿಯ ವಿದ್ಯೆೆಯಿಂದ ಸಂಶೋಧನೆ, ಆವಿಷ್ಕಾಾರಗಳು ಸಂಭವವಾದೀತು. ಆದರೆ ಇಂದಿನ ಶಿಕ್ಷಣವು ಉಪನ್ಯಾಾಸ ರೀತಿಯದ್ದು. ಪ್ರಶ್ನಿಿಸುವ ಸ್ವಾಾತಂತ್ರ್ಯವೇ ವಿರಳ. ಕಷ್ಟ ಪಟ್ಟು ಕೇಳಿಸಿಕೊಂಡು, ಭಟ್ಟಿಿ ಇಳಿಸಿ ಅಜೀರ್ಣವಾದರೂ ಸರಿಯೇ ಪರೀಕ್ಷೆಯಲ್ಲಿ ಪುನಃ ವಾಂತಿ ಮಾಡಿದರೆ ಮುಗಿಯಿತು, ಆತ ಪಾಸ್!
ಹೆಚ್ಚಿಿನವರು ಕಾಲೇಜಿನಲ್ಲಿ ಓದಿದ ಪಾಠಕ್ಕೂ ಮುಂದೆ ವೃತ್ತಿಿಜೀವನದಲ್ಲಿ ಮಾಡುವ ಕೆಲಸಕ್ಕೂ ಯಾವ ಸಂಬಂಧವೂ ಇರುವುದಿಲ್ಲ.

ಕೊರಳಿಗೊಂದು ಉದ್ದದ ಪದವಿ ದೊರೆತು ಜೀವನದಲ್ಲಿ ಸೆಟಲ್ ಆದರೆ ಸಾಕು. ಪಾಲಕರಂತೂ ಖುಷ್. ಇಂಥ ಶಿಕ್ಷಣದಿಂದ ಜನಕ, ಯಾಜ್ಞವಲ್ಕ್ಯರಂಥ ದಾರ್ಶನಿಕರನ್ನಾಾಗಲೀ, ಕಣಾದನಂಥ ಅಣುವಿಜ್ಞಾನಿಯನ್ನಾಾಗಲೀ, ಆರ್ಯಭಟನಂಥ ಭೌತಶಾಸ್ತ್ರಜ್ಞನನ್ನಾಾಗಲೀ, ಚರಕ, ಸುಶ್ರುತರಂಥ ವೈದ್ಯಪಂಡಿತರನ್ನಾಾಗಲೀ ಹೇಗೆ ನಿರೀಕ್ಷಿಸಬಹುದು? ಧನಾರ್ಜನೆಯೊಂದೇ ಜೀವನದ ಪರಮ ಗುರಿಯಾಗಿರುವ ಈ ಕಾಲಕ್ಕೆೆ ನಮ್ಮ ದೇಶದಲ್ಲಿ ಸಂಶೋಧನೆಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಾಗಿದೆ.

ಕೇವಲ ದಂಧೆಯಾಗಿ ಬದಲಾಗಿರುವ ಶಿಕ್ಷಣ ಸಂಸ್ಥೆೆಗಳು ಹಣವನ್ನೇ ಏಕಮೇವ ಧ್ಯೇಯವನ್ನಾಾಗಿ ಪರಿಗಣಿಸುತ್ತಿಿವೆ. ಅವೈಜ್ಞಾನಿಕ ಮೀಸಲು ವ್ಯವಸ್ಥೆೆಯಿಂದಾಗಿ ಪ್ರತಿಭೆಗೂ ಬೆಲೆಯಿಲ್ಲದಂತಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ವೃತ್ತಿಿಶಿಕ್ಷಣದ ಸಂಸ್ಥೆೆಗಳು ಅನಿಯಂತ್ರಿತವಾಗಿ ಅಣಬೆಗಳಂತೆ ಎಲ್ಲೆಂದರಲ್ಲಿ ತಲೆಯೆತ್ತುತ್ತಿಿವೆ. ಅನೇಕ ಪ್ರತಿಭಾವಂತ ವಿದ್ಯಾಾರ್ಥಿಗಳು ಈ ಅವ್ಯವಸ್ಥೆೆಯಿಂದ ಭ್ರಮನಿರಸನಗೊಂಡು ವಿದೇಶಗಳತ್ತ ವಲಸೆ ಹೋಗಿ ಪ್ರತಿಭಾ ಪಲಾಯನವಾಗುತ್ತಿಿದೆ. ಪದವಿ ಶಿಕ್ಷಣ ಸಂಸ್ಥೆೆಗಳಿಂದು ಕಳಪೆ ಗುಣಮಟ್ಟದ ನಿರುದ್ಯೋೋಗಿ ಪದವೀಧರರನ್ನು ಸೃಜಿಸುವ ಫ್ಯಾಾಕ್ಟರಿಗಳಾಗಿಬಿಟ್ಟಿಿವೆ. ಹೀಗೆ ಅಮೂಲ್ಯ ಮಾನವ ಸಂಪನ್ಮೂಲವು ಸದ್ಬಳಕೆಯಾಗದೇ ಮಂಗನ ಕೈಯ ಮಾಣಿಕ್ಯದಂತೆ ವ್ಯರ್ಥವಾಗುತ್ತಿಿದೆ.

ಸಮಾಜಕ್ಕೆೆ ಆವಶ್ಯಕವಾದ ವೃತ್ತಿಪರ ಕೌಶಲಿಗಳನ್ನು ತರಬೇತುಗೊಳಿಸುವ ಶಿಕ್ಷಣ ಸಂಸ್ಥೆೆಗಳಿಂದು ತುರ್ತಾಗಿ ಬೇಕಿವೆ. ನಿರುದ್ಯೋೋಗದ ಸಮಸ್ಯೆೆಯಿಂದಾಗಿ ಪಟ್ಟಣಗಳಲ್ಲಿ ಅನಗತ್ಯ ಕಾಲಹರಣ ಮಾಡುವುದರ ಬದಲಾಗಿ ಹಳ್ಳಿಿಗಳಲ್ಲಿ ಬರಡಾದ ಸಾವಿರಾರು ಎಕರೆ ಜಮೀನಿನಲ್ಲಿ ಕೃಷಿಯನ್ನು ಮಾಡಿ ಸಿರಿವಂತರಾಗಬಹುದು. ಬದಲಾಗಿ ತುತ್ತು ಕೂಳಿಗೂ ಕಷ್ಟವಿದ್ದರೂ ನಗರಜೀವನವೇ ಲೇಸೆಂದು ವಲಸೆ ಹೋಗುವವರ ಸಂಖ್ಯೆೆಯೇ ದೊಡ್ಡದು. ಇಂಥ ಸುಶಿಕ್ಷಿತ ನಿರುದ್ಯೋೋಗಿಗಳೇ ಹಲವು ಬಾರಿ ನಗರದ ದುಬಾರಿ ಬದುಕಿನಲ್ಲಿ ಹೊಟ್ಟೆೆಪಾಡಿಗಾಗಿ ಸಮಾಜಘಾತಕ ಕೃತ್ಯಗಳನ್ನೆೆಸಗುವುದನ್ನೂ ನಿತ್ಯ ಪತ್ರಿಕೆಗಳಲ್ಲಿ ಓದುತ್ತೇವೆ. ಹೀಗಾದಲ್ಲಿ ಶಿಕ್ಷಣದ ಉದ್ದೇಶ ವಿಫಲವಾಯಿತೆಂದು ಒಪ್ಪಿಿಕೊಳ್ಳಬೇಕಲ್ಲವೇ? ತಪ್ಪುು ಒಪ್ಪಿಿಕೊಂಡರೆ ಪರಿಹಾರ ಕಂಡುಕೊಳ್ಳುವುದು ಕಷ್ಟವಲ್ಲ. ಒಟ್ಟಿನಲ್ಲಿ ನಮ್ಮ ಶಿಕ್ಷಣ ಪದ್ಧತಿಗೆ ಆಮೂಲಾಗ್ರ ಕಾಯಕಲ್ಪದ ಅಗತ್ಯವಿದೆ. ಕಾಲದ ಕರೆಗೆ ಸರಕಾರಗಳು ಓಗೊಡುವವೇ?

Leave a Reply

Your email address will not be published. Required fields are marked *