Tuesday, 5th July 2022

ಅಯ್ಯರ್‌’ಗೆ ಶತಕದ ಶ್ರೇಯ, ಜಡೇಜಾ ಅರ್ಧಶತಕ

Shreyas Iyer
ಕಾನ್ಪುರ: ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 258 ರನ್‌ ಗಳಿಸಿದ್ದ ಭಾರತ ಎರಡನೇ ದಿನದಾಟ ಆರಂಭಿಸಿದೆ. ಇತ್ತೀಚಿನ ವರದಿ ಪ್ರಕಾರ, ಭಾರತ ಎಂಟು ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. ಆಲ್ರೌಂಡರ್‌ ರವಿಚಂದ್ರನ್ ಅಶ್ವಿನ್‌ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಜವಾಬ್ದಾರಿಯುತ ಬ್ಯಾಟ್‌ ಮಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ ಶ್ರೇಯಸ್ ಅಯ್ಯರ್‌ ಶತಕ ಸಿಡಿಸಿ, ಔಟ್ ಆದರು.

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು. ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಅವರ ಜೊತೆಯಾಟದ ನೆರವಿನಿಂದ ಭಾರತ ಉತ್ತಮ ಮೊತ್ತ ಸಂಪಾದಿಸಿತು. ಮೊದಲ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡು 258 ರನ್‌ ಗಳಿಸಿದ್ದ ಭಾರತ ಈಗ ಎರಡನೇ ದಿನದಾಟದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡಿದೆ. ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ಸಿಡಿಸಿ ಔಟ್ ಆಗಿದ್ದಾರೆ.

ಭಾರತ ಮೊದಲ ಇನ್ನಿಂಗ್ಸ್ 326/8)

(ಶ್ರೇಯಸ್ ಅಯ್ಯರ್ ಅಜೇಯ 105, ರವೀಂದ್ರ ಜಡೇಜಾ ಅಜೇಯ 50, ಶುಬ್ಮನ್ ಗಿಲ್ 52, ಅಜಿಂಕ್ಯ ರಹಾನೆ 35, ಚೇತೇಶ್ವರ್ ಪೂಜಾರ 26 ರನ್- ಕೈಲೆ ಜೇಮಿಸನ್ 77/3)

covid