Monday, 20th January 2020

ಶಿಷ್ಟಾಚಾರ ಪಾಲಿಸಿದರೇ?

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ ಸೆಂಥಿಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ವೈಯಕ್ತಿಿಕ ಕಾರಣಕ್ಕಾಾಗಿ ಎಂದು ಅವರು ಒಂದೆಡೆ ಪ್ರಸ್ತಾಾಪಿಸಿದ್ದಾಾರೆ. ಇನ್ನೊೊಂದು ಕಡೆ, ಪತ್ರಿಿಕೆಗಳಲ್ಲಿ ಕೇಂದ್ರ ಸರಕಾರದ, ಕಾಶ್ಮೀರ, ತ್ರಿಿವಳಿ ತಲಾಖ್ ಮತ್ತು ರಾಮಮಂದಿರಗಳಿಗೆ ಸಂಬಂಧಿಸಿದ ಧೋರಣೆಗೆ ಪ್ರತಿಭಟನೆಯಾಗಿ ರಾಜೀನಾಮೆ ನೀಡುತ್ತಿಿದ್ದೇನೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಇಲ್ಲಿ ಎರಡು ಜಿಜ್ಞಾಸೆಗಳಿವೆ. ಒಂದು, ಮೇಲಿನ ಮೂರೂ ವಿಷಯಗಳನ್ನು ಮೊನ್ನೆೆ ನಡೆದ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ಸೇರಿಸಿತ್ತು. ಮತದಾರರು ಆ ಪಕ್ಷಕ್ಕೆೆ ಬಹುಮತ ನೀಡಿದ್ದಾಾರೆಂದರೆ ಅವುಗಳನ್ನು ಜನರು ಒಪ್ಪಿಿದ್ದಾರೆ ಎಂದರ್ಥವಷ್ಟೇ? ಇನ್ನೊೊಂದು, ರಾಜೀನಾಮೆ ಅಂಗೀಕಾರವಾಗುವವರೆಗೆ ಯಾವುದೇ ಅಧಿಕಾರಿ ಸೇವೆಯಲ್ಲಿ ಇರುವುದಾಗಿ ಪರಿಗಣಿಸಲ್ಪಡುತ್ತಾಾರೆ ಹಾಗೂ ಶಿಷ್ಟಾಚಾರಕ್ಕೆೆ ಬದ್ಧರಾಗಿರುತ್ತಾಾರೆ. ಹೀಗಿರುವಾಗ ಓರ್ವ ಜವಾಬ್ದಾಾರಿಯುತ ಅಧಿಕಾರಿ, ತನ್ನ ವೈಯಕ್ತಿಿಕ ಅಭಿಪ್ರಾಾಯಗಳನ್ನು ವ್ಯಕ್ತಪಡಿಸುವುದು ಎಷ್ಟು ಸರಿ? ಇವರಂತೆ ಕೆಲವು ತಿಂಗಳ ಹಿಂದೆ ರಾಜೀನಾಮೆ ನೀಡಿದ ಮತ್ತೊೊಬ್ಬ ವರಿಷ್ಠಾಾಧಿಕಾರಿ ಅಣ್ಣಾಾಮಲೈ ಅವರು ಇಂದಿಗೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲದಿರುವುದನ್ನು ಇಲ್ಲಿ ಗಮನಿಸಬೇಕು.
-ಮೋಹನದಾಸ ಕಿಣಿ, ಕಾಪು

Leave a Reply

Your email address will not be published. Required fields are marked *