Thursday, 28th January 2021

ಮೂರು ದಿನಗಳ ಸೈಡ್ ವಿಂಗ್ ನಾಟಕೋತ್ಸವ

ತುಮಕೂರು: ಡಮರುಗ ರಂಗ ಸಂಪನ್ಮೂಲ ಕೇಂದ್ರ ಮೆಳೇಹಳ್ಳಿ, ಇವರ ಆಯೋಜನೆಯಲ್ಲಿ ಸಾರ್ಕ್ ಟ್ರಸ್ಟ್ ರವರ ಸೈಡ್ ವಿಂಗ್ ನಾಟಕೋತ್ಸವವನ್ನು ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಮೂರು ದಿನಗಳ ಹಮ್ಮಿಕೊಳ್ಳಲಾಗಿತ್ತು.

ಮೊದಲ ದಿನ, ಅವಿನಾಶ್ ಸ ಶಠಮರ್ಷಣ ರವರು ಶಿಬಿರಾರ್ಥಿಗಳಿಗೆ ರಂಗಭೂಮಿ ನಟನೆಗೆ ಮೂಲವಾದ ಶಬ್ದ, ಸ್ಪರ್ಶ, ರೂಪ, ರಸ, & ಗಂಧ ಎಂಬ ಐದು ವಿಷಯಗಳ ಮುಖಾಂತರ ಅಭಿನಯ ತರಬೇತಿ ನೀಡಿದರು. ಸಂಜೆ ರಂಗಗೀತೆ, ಜಾನಪದಗೀತೆ, ಭಾವ ಗೀತೆಗಳನ್ನು ಶಿಬಿರಾರ್ಥಿಗಳೊಡನೆ ಅವಿನಾಶ್ ಮತ್ತು ತಂಡ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು, ಸಂಗೀತ ಕಾರ್ಯ ಕ್ರಮದ ನಂತರ ಮೆಳೇಹಳ್ಳಿ ದೇವರಾಜು ನಿರ್ದೇಶನದಲ್ಲಿ “ವೈಶಂಪಾಯನ ಸರೋವರದಲ್ಲಿ” ನಾಟಕ ಪ್ರಯೋಗಗೊಂಡಿತು.

ಎರಡನೇ ದಿನ, ಬೆಳಗಿನ ರಂಗ ವ್ಯಾಯಾಮದಿಂದ ಶುರುವಾದ ಕಾರ್ಯಾಗಾರದಲ್ಲಿ ಅವಿನಾಶ್ ರವರು ಶಿಬಿರಾರ್ಥಿಗಳಿಗೆ ರಂಗ ಭೂಮಿಯ ಬೆಳಕು ಮತ್ತು ವಿನ್ಯಾಸದ ಪರಿಚಯ ಮಾಡಿಕೊಟ್ಟರು. ಸಂಜೆ, ಅವಿನಾಶ್ ರವರ ನಿರ್ದೇಶನದ “ಸೆಲ್ಫೀ” ನಾಟಕ ಸಾರ್ಕ್ ಟ್ರಸ್ಟ್ ಕಲಾವಿದರಿಂದ ಪ್ರದರ್ಶನ ಕಂಡಿತು.

ಮೂರನೇ ದಿನ, ಸಿನಿಮಾ ಕಾರ್ಯಾಗಾರದಲ್ಲಿ ಅಭಿನಯ, ನಿರ್ದೇಶನ, ಸಂಭಾಷಣೆ ಹೀಗೆ ಮೂಲ ವಿಷಯಗಳ ಪರಿಚಯಿಸಿ, ನಂತರ ಶಿಬಿರಾರ್ಥಿಗಳೇ ಅವಿನಾಶ್ ರವರ ಮಾರ್ಗದರ್ಶನದಲ್ಲಿ ಪುಟ್ಟ ಕಿರುಚಿತ್ರ ಚಿತ್ರೀಕರಿಸಿದರು. ಸಂಜೆ, ಅವಿನಾಶ್ ರವರ ನಿರ್ದೇಶನದ “ದಶಾವತಾರ” ನಾಟಕ ಸಾರ್ಕ್ ಟ್ರಸ್ಟ್ ಕಲಾವಿದರಿಂದ ಪ್ರದರ್ಶನ ಕಂಡಿತು.

ಹೀಗೆ ಮೂರು ದಿನಗಳು ರಂಗ ವ್ಯಾಯಾಮ, ಧ್ಯಾನ, ನಟನೆ, ವಿಚಾರ ಸಂಕೀರ್ಣ, ಸಂಗೀತ ಹೀಗೆ ರಂಗಭೂಮಿ ಮತ್ತು ಸಿನಿಮಾ ಕಾರ್ಯಾಗಾರ ಅವಿನಾಶ್ ಸ ಶಠಮರ್ಷಣ ಇವರ ನಿರ್ದೇಶನದಲ್ಲಿ ಯಶಸ್ವಿಗೊಂಡಿತು.

Leave a Reply

Your email address will not be published. Required fields are marked *