ಶಿರಸಿ : ಗಣರಾಜ್ಯೋತ್ಸವದ ನಿಮಿತ್ತ ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿರಸಿ ಡಿಡಿಪಿಐ ತಂಡ ಶಿರಸಿ ಹೆಸ್ಕಾಂ ತಂಡದ ವಿರುದ್ಧ ಭರ್ಜರಿ ಜಯಗಳಿಸಿದೆ.
ಶಿರಸಿ ಕಾರ್ಯನಿರತ ಪತ್ರಕರ್ತರು, ಶಿರಸಿ ಡಿಡಿಪಿಐ ತಂಡ, ಶಿರಸಿ ಹೆಸ್ಕಾಂ ತಂಡ, ಶಿರಸಿ ಸಿಪಿಐ ತಂಡ ಹಾಗೂ ಶಿರಸಿ ಡಿಎಸ್ಪಿ ತಂಡ ಮತ್ತು ಶಿರಸಿ ಅರಣ್ಯ ಇಲಾಖೆಯ ತಂಡಗಳು ಸೌಹಾರ್ದಯುತ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೆಸ್ಕಾಂ ತಂಡ 8 ಒವರ್ ಗಳಲ್ಲಿ 37 ರನ್ ಗಳಿಸಿದ್ದರು. ಅದನ್ನು ಬಿ.ವಿ.ಗಣೇಶ ಅವರ ನೇತೃತ್ವದ ಶಿರಸಿ ಡಿಡಿಪಿಐ ತಂಡ ಕೇವಲ 4 ಒವರ್ ಗಳಲ್ಲಿ ಒಂದು ಉದ್ದರಿಯನ್ನು ಕಳೆದುಕೊಂಡು ಚೇಸ್ ಮಾಡಿ ಭರ್ಜರಿ ಗೆಲುವು ಸಾಧಿಸಿದರು.
ಪಂದ್ಯ ಪುರುಷ ಪ್ರಶಸ್ತಿಯನ್ನು ಮಾರಿಕಾಂಬಾ ಪ್ರೌಢಶಾಲೆಯ ಉದಯ್ ಪಡೆದುಕೊಂಡರು. ಇಲ್ಲಿನ ಉರ್ದು ಶಾಲೆ ಶಿಕ್ಷಕ, ತಾಲೂಕಾ ಕ್ರೀಡಾಧಿಕಾರಿ ಕಿರಣ್ ನಾಯ್ಕ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ಡಿಡಿಪಿಐ ದಿವಾಕರ ಶೆಟ್ಟಿ ತಮ್ಮ ತಂಡದ ಪ್ರಶಸ್ತಿಯನ್ನು ಎಲ್ಲಾ ಶಿಕ್ಷಕರ ಸಮ್ಮುಖದಲ್ಲಿ ಪಡೆದುಕೊಂಡರು.