Tuesday, 9th August 2022

ಚಿತ್ರದುರ್ಗದಲ್ಲಿ ಸೈನಿಕ್ ಸರ್ಕಲ್ ಮಾಡಲು ಮನವಿ

ಚಿತ್ರದುರ್ಗ: ಜಿಲ್ಲೆಯ ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘ, ಹಾಗೂ ದುರ್ಗವಾಹಿನಿ ಸಹಯೋಗ ದೊಂದಿಗೆ 23ನೇ ಕಾರ್ಗಿಲ್ ವಿಜಯೋತ್ಸವ ದ ನಿಮಿತ್ತ ಪ್ರವಾಸಿ ಮಂದಿರದಿಂದ ಡಿ.ಸಿ ಕಚೇರಿಯ ವರೆಗೂ ಕಾಲ್ನಡಿಗೆಯ ಮುಖಾಂತರ ವಿವಿಧ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ಅಪರ ಜಿಲ್ಲಾಧಿ ಕಾರಿ ಬಾಲಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಾಜಿ ಸೈನಿಕರಿಗೆ ವೀರಸೌಧದ ಜವಾಬ್ದಾರಿ ನೀಡಬೇಕು, ಮತ್ತು ನಗರದಲ್ಲಿ ಸೈನಿಕ ಪಾರ್ಕ್ ಹಾಗೂ ಸರ್ಕಲ್ ಒಂದಕ್ಕೆ ಸೈನಿಕ ಸರ್ಕಲ್ ಎಂದು ಹೆಸರು ಹೆಸರಿಡುವ ಬಗ್ಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಮಹೇಶ್ವರಪ್ಪ, ಕಾರ್ಯದರ್ಶಿ ಸತ್ಯನಾರಾಯಣ, ಶಿವಕುಮಾರ್ ಕೆವಿವಿ ಮೂರ್ತಿ, ರಾಯಲ್ ಹನುಮಂತರೆಡ್ಡಿ, ವೆಂಕಟೇಶ್ ಬಸವರಾಜ್ ಮತ್ತು ದುರ್ಗಾವಾಹಿನಿಯ ಸಹ ಸಂಯೋಜಕರಾದ ಕಾವ್ಯ ಚೇತನ್, ಕಾರ್ಯಕರ್ತರಾದ ಸರಸ್ವತಿ ,ರೇಖಾ ಶೀಲ, ಶ್ವೇತ , ಪ್ರಭಾವತಿ, ಭಾಗವಹಿಸಿ ದ್ದರು.

ವೆಂಕಟೇಶ್ ಬಸವರಾಜ್ ಮತ್ತು ದುರ್ಗಾ ವಾಹಿನಿಯ ಸಹ ಸಂಯೋಜಕರು ಕಾವ್ಯಚೇತನ, ಕಾರ್ಯಕರ್ತರಾದ ಸರಸ್ವತಿ , ರೇಖಾ ಶೀಲಾ, ಶ್ವೇತ, ಪ್ರಭಾವತಿ ಭಾಗವಹಿಸಿದ್ದರು.