Friday, 4th December 2020

ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಕಿದ್ವಾಯಿ ಸಂಸ್ಥೆಯ ಹಿರಿಮೆ

* ಬಾಲಕೃಷ್ಣ ಎನ್.

ಆರೋಗ್ಯ ಶುಶ್ರೂಷೆಗೆ ವೈದ್ಯಕೀಯ ಉತ್ಕೃಷ್ಟತೆ ಮತ್ತು ರೋಗಿ ಕೇಂದ್ರೀಕೃತ ಮಾರ್ಗದ ಮೇಲೆ ಒತ್ತು ನೀಡುವ ತಮ್ಮ ಯೋಜನೆಗೆ ತಕ್ಕಂತೆ, ಸರಕಾರಿ ಸ್ವಾಾಮ್ಯದ ಬೆಂಗಳೂರಿನ ಕಿದ್ವಾಾಯಿ ಸ್ಮಾಾರಕ ಗಂಥಿ ಸಂಸ್ಥೆೆ ಅತ್ಯಾಾಧುನಿಕ ಮತ್ತು ಉನ್ನತ ತಂತ್ರಜ್ಞಾನಗಳು ಅಳವಡಿಸಲಾಗಿದೆ. ಖಾಸಗಿ ಆಸ್ಪತ್ರೆೆಗಳಲ್ಲಿ ಲಭ್ಯವಾಗುವ ಎಲ್ಲ ಚಿಕಿತ್ಸಾಾ ಸೌಲಭ್ಯ ಹೊಂದಿರುವ ವಿಶ್ವದರ್ಜೆಯ ಸಂಸ್ಥೆೆ ಇದಾಗಿದೆ.

ಇಲ್ಲಿ ಹೊಂದಿರುವ ವೈದ್ಯಕೀಯ ತಂತ್ರಜ್ಞಾಾನ ವಿದೇಶಿಯ ಹಾಗೂ ನೂತನವಾಗಿದೆ. ಎಲೆಕ್ಟಾಾ ವರ್ಸಾ ಎಚ್‌ಡಿ ಲಿನ್ಯಾಾಕ್ ಮೆಷಿನ್ ಎಂದು ಕರೆಯಲಾಗುವ ಈ ಯಂತ್ರ ಕ್ಯಾಾನ್ಸರ್ ಚಿಕಿತ್ಸೆೆಯಲ್ಲಿ ಬಳಕೆಯಾಗುತ್ತದೆ. ನಾಲ್ಕು ಯಂತ್ರಗಳನ್ನು ಅಳವಡಿಸಲು ಸುಮಾರು 72 ಕೋಟಿ ಖರ್ಚು ಮಾಡಲಾಗಿದೆ. ಇದಲ್ಲದೆ, 2 ಸಿಟಿ ಸಿಮ್ಯಲೇಟರ್ ಸಹ ಇಲ್ಲಿರುವುದು ರೋಗಿಗಳ ಪಾಲಿಗೆ ಸಂತಸದ ವಿಷಯವಾಗಿದೆ. ಆಧುನಿಕ ತಂತ್ರಜ್ಞಾಾನಗಳನ್ನು ಹೊಂದುವಲ್ಲಿ ದೇಶದಲ್ಲಿಯೇ ಮೊದಲ ಸ್ಥಾಾನ ಕಿದ್ವಾಾಯಿ ಪಡೆದುಕೊಂಡಿದೆ. 12.9 ಕೋಟಿ ವೆಚ್ಚದಲ್ಲಿ ಲೇಸರ್ ತಂತ್ರಜ್ಞಾಾನ ಖರೀದಿಸಲಾಗಿದೆ. ಇದುವರೆಗೂ 3 ಸಾವಿರಕ್ಕೂ ಹೆಚ್ಚು ಸಾವಿರ ರೇಡಿಯೋ ಥೇರಪಿ ಚಿಕಿತ್ಸೆೆ ನೀಡಲಾಗಿದೆ.

ವಿಕಿರಣ ಚಿಕಿತ್ಸೆೆಯ ಯಂತ್ರವಾದ ಎಲೆಕ್ಟಾಾ ವರ್ಸಾ ಎಚ್‌ಡಿ ಲೀನಿಯರ್ ಆಕ್ಸೆೆಲರೇಟರ್(ಲಿನ್ಯಾಾಕ್)ರನ್ನು ಕಿದ್ವಾಾಯಿಯಲ್ಲಿ ಅನಾವರಣಗೊಳಿಸಲಾಗಿದೆ.ಅತ್ಯಾಾಧುನಿಕ ಸೌಲಭ್ಯಗಳಿಂದ ಸಜ್ಜಾಾಗಿರುವ ಮತ್ತು ಬಹುವಿಭಾಗೀಯ ವೈದ್ಯರ ಸಮಿತಿ ಹೊಂದಿದೆ. ಕ್ಯಾಾನ್ಸರ್ ನಿರ್ವಹಣೆಯ ಸ್ತಂಭಗಳಲ್ಲಿ ವಿಕಿರಣ ಚಿಕಿತ್ಸೆೆ ಒಂದಾಗಿದ್ದು, ಇದು ಎಕ್ಸಸ್ಟ್ರನಲ್ ಬೀಮ್ ಚಿಕಿತ್ಸೆೆಯನ್ನು ಒಳಗೊಂಡಿರುತ್ತದೆ. ಈ ಚಿಕಿತ್ಸೆೆ ಅಯೋನೈಸಿಂಗ್ ವಿಕಿರಣ ಬಳಸುತ್ತದೆಯಲ್ಲದೆ, ಇದು ಕ್ಯಾಾನ್ಸರ್ ಚಿಕಿತ್ಸೆೆಯ ಭಾಗವಾಗಿದ್ದು, ಕ್ಯಾಾನ್ಸರ್‌ಕಾರಕ ಮಾಲಿಗ್ನೆೆಂಟ್ ಜೀವಕೋಶಗಳನ್ನು ನಿಯಂತ್ರಿಿಸಲು ಅಥವ ಕೊಲ್ಲಲು ಬಳಕೆಯಾಗುತ್ತದೆ. ಈ ಪ್ರಕ್ರಿಿಯೆಯನ್ನು ಸಾಮಾನ್ಯವಾಗಿ ಲೀನಿಯರ್ ಆಕ್ಸಲರೇಟರ್(ಲಿನಾಕ್) ಪೂರೈಸುತ್ತದೆ.

ಲಿನ್ಯಾಾಕ್ ಸಾಂಪ್ರದಾಯಿಕ ವಿಕಿರಣ ಚಿಕಿತ್ಸೆೆಯನ್ನು ವಿತರಿಸುವಲ್ಲಿ ತನ್ನ ವೈವಿಧ್ಯತೆಗೆ ಹೆಸರಾಗಿದೆ. ಹಲವಾರು ಸೂಚನೆಗಳು ಮತ್ತು ಚಿಕಿತ್ಸಾಾ ತಂತ್ರಗಳನ್ನು ಇದು ಒಳಗೊಂಡಿದೆ. ಅತ್ಯಂತ ಸವಾಲಿನ ಸ್ಟಿಿರಿಯೊಟ್ಯಾಾಕ್ಟಿಿಕ್ ಚಿಕಿತ್ಸೆೆಗಳಿಗೆ ವಿನ್ಯಾಾಸಗೊಳಿಸಲಾಗಿದ್ದು, ಇದು ಗರಿಷ್ಠಮಟ್ಟದ ವೈದ್ಯಕೀಯ ಸಡಿಲತೆ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಕ್ಕೆೆ ಅವಕಾಶ ಮಾಡಿಕೊಡುತ್ತದೆ. ಜತೆಗೆ ಹೆಚ್ಚಿಿನ ರೋಗಿಗಳಿಗೆ ಇದರಿಂದ ಚಿಕಿತ್ಸೆೆ ನೀಡಬಹುದಲ್ಲದೆ, ಪ್ರತಿ ರೋಗಿಗೆ ವಿಕಿರಣ ಚಿಕಿತ್ಸೆೆಯ ಸಂಖ್ಯೆೆ ಕಡಿಮೆಯಾಗಲು ನೆರವಾಗುತ್ತದೆ. ಒಂದೇ ಕೇಂದ್ರದಲ್ಲಿ 500ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆೆ ನೀಡಬಹುದಾಗಿದೆ. ಇನ್ನೂ ಈ ಸಂಸ್ಥೆೆಯಲ್ಲಿ ಆರು ರೇಡಿಯೋಥೆರಪಿ ತಂತ್ರಜ್ಞಾಾನಗಳಿದ್ದು ದಿನಕ್ಕೆೆ ಸಾವಿರಕ್ಕೂ ಹೆಚ್ಚು ಮಂದಿಗೆ ಈ ಚಿಕಿತ್ಸೆೆ ನೀಡಬಹುದಾಗಿದೆ. ವಿ ಮ್ಯಾಾಟಿಕ್ ಐಜಿಆರ್‌ಟಿ ಟ್ಯುಮರ್ ಮಾತ್ರ ಪತ್ತೆೆ ಹಚ್ಚಿಿ ರೇಡಿಯೋ ಥೆರಪಿ ಕೊಡಲಾಗುತ್ತದೆ. ಟ್ಯುಮರ್ ಇರುವ ಜಾಗಕ್ಕೆೆ ಮಾತ್ರ ಲೇಸರ್ ಬಿಡುವ ಮೂಲಕ ಚಿಕಿತ್ಸೆೆ ನಡೆಸಲಾಗುತ್ತದೆ.

500ಕ್ಕೂ ಹೆಚ್ಚು ಬಡ ರೋಗಿಗಳಿಗೆ ಯಶಸ್ವಿಿ ರೊಬಾಟಿಕ್ ಉಚಿತ ಶಸ್ತ್ರಚಿಕಿತ್ಸೆೆ ನಡೆಸುವ ಮೂಲಕ ಕ್ರಾಾಂತಿ ಮಾಡಿದೆ. ಖಾಸಗಿ ಆಸ್ಪತ್ರೆೆಯಲ್ಲಿ 3ರಿಂದ 10 ಲಕ್ಷ ರು. ವೆಚ್ಚ ತಗುಲುವ ಅತ್ಯಂತ ಸಂಕೀರ್ಣ, ಕ್ಲಿಿಷ್ಟಕರವಾದ ರೊಬೊಟಿಕ್ ಶಸ್ತ್ರಚಿಕಿತ್ಸೆೆ ಬಡವರ ಪಾಲಿಗೆ ಕೈಗೆಟುಕದ ನಕ್ಷತ್ರವಾಗಿತ್ತು. ಇದನ್ನು ಮನಗಂಡ ಕಿದ್ವಾಾಯಿ ಸಂಸ್ಥೆೆ 2016ರಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ರೊಬಾಟಿಕ್ ಯಂತ್ರ ಖರೀದಿಸಿ, ಶಸ್ತ್ರಚಿಕಿತ್ಸೆೆ ಆರಂಭಿಸಿತ್ತು. ಈವರೆಗೆ 600 ಬಡ ರೊಗಿಗಳು ಉಚಿತವಾಗಿ ಈ ಸೌಲಭ್ಯ ಪಡೆದಿದ್ದಾರೆ. ಎಪಿಎಲ್ ಕಾರ್ಡುದಾರರು ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆೆ ಮಾಡಿಸಿಕೊಳ್ಳುತ್ತಿಿದ್ದಾರೆ.

ರೊಬೊಟಿಕ್ ಸರ್ಜರಿಗಾಗಿ ಕಿದ್ವಾಾಯಿಯಲ್ಲಿ ಪರಿಣಿತ ವೈದ್ಯರ ತಂಡವಿದೆ. ಎ್ಸೃ್ಐ ಮಾನ್ಯತೆಯ ರೊಬೊಟಿಕ್ ತಂತ್ರಜ್ಞಾನ ಹೊಂದಿರುವ ಕ್ಯಾಾನ್ಸರ್ ಆಸ್ಪತ್ರೆೆ ಎಂಬ ಹಿರಿಮೆಯೂ ಇದಕ್ಕಿಿದೆ. ಕೈಗಳಿಂದ ನಡೆಸುವ ಶಸ್ತ್ರಚಿಕಿತ್ಸೆೆಯಿಂದ ಸಾಮಾನ್ಯವಾಗಿ ಗಾಯ ದೊಡ್ಡದಾಗುವುದರ ಜತೆಗೆ ಅಧಿಕ ರಕ್ತಸ್ರಾಾವವಾಗುವ ಸಾಧ್ಯತೆ ಇರುತ್ತದೆ. ಆದರೆ, ರೊಬಾಟಿಕ್ ಸರ್ಜರಿಯಲ್ಲಿ ಇದಕ್ಕೆೆ ಅವಕಾಶ ಇರುವುದಿಲ್ಲ. ಅಷ್ಟೆೆ ಅಲ್ಲ, ರೊಗಿ ನಿರೀಕ್ಷೆಗೂ ಮಿರಿ ಬೇಗ ಗುಣಮುಖನಾಗಲು ಸಾಧ್ಯ. ವಿವಿಧ ರೀತಿಯ ಕ್ಯಾಾನ್ಸರ್‌ಗಳಿಗೂ ರೊಬೊಟೆಕ್ ಸರ್ಜರಿ ಮಾಡಲಾಗುತ್ತದೆ ಎಂದು ಕಿದ್ವಾಾಯಿ ಆಸ್ಪತ್ರೆೆ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದ್ದಾರೆ.

ರೋಬೋಟಿಕ್ ಸರ್ಜರಿ ಹೇಗೆ?
ಇಲ್ಲಿ ದೇಹದ ನಿಗದಿತ ಭಾಗವನ್ನು ಕತ್ತರಿಸಿ ಶಸ್ತ್ರಚಿಕಿತ್ಸೆೆ ಅಗತ್ಯವಿರುವ ಭಾಗವನ್ನು ಸ್ಪಷ್ಟವಾಗಿ ತೋರುವಂತೆ 3ಡಿ ಕ್ಯಾಾಮೆರಾ ಹೊಂದಿರುವ ತೆಳು ಟ್ಯೂಬನ್ನು(ಎಂಡೋಸ್ಕೋೋಪ್) ದೇಹದೊಳಗೆ ತೂರಿಸುತ್ತಾಾರೆ. ಬಳಿಕ ವೈದ್ಯರು ಕುಳಿತಲ್ಲೇ ಕಂಪ್ಯೂೂಟರ್ ಮೂಲಕ ರೋಬೋಟನ್ನು ನಿಯಂತ್ರಿಿಸುತ್ತಾಾರೆ. ಚಿಕ್ಕ ಚಿಕ್ಕ ವೈದ್ಯಕೀಯ ಸಲಕರಣೆಗಳನ್ನು ಹಿಡಿದ ರೋಬೋಟ್ಗಳು ಶಸ್ತ್ರಚಿಕಿತ್ಸೆೆ ನಡೆಸುತ್ತವೆ. ವೈದ್ಯರ ಕೈ ಚಲನೆಯನ್ನು ರೋಬೋಟ್ ಅನುಕರಿಸುತ್ತದೆ.

ಏನಿದು ಡಾ ವಿಂಚಿ ಸರ್ಜಿಕಲ್ ಸಿಸ್ಟಮ್?
ಅಮೆರಿಕದ ಇನ್ಟಿಿಟ್ಯೂಟ್ ಸರ್ಜಿಕಲ್ ರಿಸರ್ಚ್ ಸಂಸ್ಥೆೆಯು ಡಾ ವಿಂಚಿ ಸರ್ಜಿಕಲ್ ಸಿಸ್ಟಮ್ ಎಂಬ ರೋಬೊಟಿಕ್ ಯಂತ್ರವನ್ನು ತಯಾರಿಸಿದೆ. ಡಾ ವಿಂಚಿ ಎ್ಸೃ್ಐ ಎಂಬುದು ಸುಧಾರಿತ ಆವೃತ್ತಿಿಯಾಗಿದೆ. ಈ ಯಂತ್ರವನ್ನು ಕಿದ್ವಾಾಯಿ ಸಂಸ್ಥೆೆಯಲ್ಲಿ ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಸರ್ಜನ್ ಕನ್ಸೋೋಲ್, ಪೇಷಂಟ್ ಕಾರ್ಟ್, ವಿಷನ್ ಕಾರ್ಟ್ ಎಂಬ ಮೂರು ವಿಭಾಗಗಳಿವೆ. ಷೇಷಂಟ್ ಕಾರ್ಟ್ ಯಂತ್ರಕ್ಕೆೆ ನಾಲ್ಕು ಕೈಗಳಿವೆ. ಈ ಯಂತ್ರವನ್ನು ಬಳಸಿ ರೋಗಿಗೆ ಶಸ್ತ್ರಚಿಕಿತ್ಸೆೆ ಮಾಡಲಾಗುತ್ತದೆ. ಆದರೆ, ಹೇಗೆ ಶಸ್ತ್ರಚಿಕಿತ್ಸೆೆ ಮಾಡಬೇಕು ಎಂಬ ಸೂಚನೆಗಳನ್ನು ಸರ್ಜನ್ ಕನ್ಸೋೋಲ್‌ನಲ್ಲಿ ಕುಳಿತ ವೈದ್ಯರು ನೀಡುತ್ತಾಾರೆ. ವೈದ್ಯರ ಸೂಚನೆ ಮೇರೆಗೆ ಪೇಷಂಟ್ ಕಾರ್ಟ್ ಯಂತ್ರವು ಕಾರ್ಯನಿರ್ವಹಿಸುತ್ತದೆ. ಶಸ್ತ್ರಚಿಕಿತ್ಸೆೆಯ ಪ್ರತಿಯೊಂದು ಮಾಹಿತಿಯೂ ವಿಷನ್ ಕಾರ್ಟ್‌ನಲ್ಲಿ ದಾಖಲಾಗುತ್ತದೆ. ಜತೆಗೆ ಎಲ್ಇಡಿ ಪರದೆಯಲ್ಲಿ ಪ್ರಸಾರಗೊಳ್ಳುತ್ತದೆ. ಪೇಷಂಟ್ ಕಾರ್ಟ್ ಯಂತ್ರವನ್ನು ರೋಗಿಯ ದೇಹದ ನಿರ್ದಿಷ್ಟ ಭಾಗದಲ್ಲಿ ಇಡಲಾಗುತ್ತದೆ. ಈ ಯಂತ್ರದಲ್ಲಿರುವ ಕೈಗಳ ಸಹಾಯದಿಂದ ಸಣ್ಣ ರಂಧ್ರಗಳನ್ನು ಕೊರೆಯಲಾಗುತ್ತದೆ. ಈ ರಂಧ್ರಗಳ ಮೂಲಕ ರೋಗಿಯ ದೇಹಕ್ಕೆೆ ಸ್ಟೀಲ್ ರಾಡ್‌ಗಳನ್ನು ಸೇರಿಸಿ ಅವುಗಳಸಹಾಯದಿಂದ ಶಸ್ತ್ರಚಿಕಿತ್ಸೆೆ ಮಾಡಲಾಗುತ್ತದೆ.

ಕಿದ್ವಾಾಯಿ ಸ್ಮಾಾರಕ ಗಂಥಿ ಸಂಸ್ಥೆೆಯು ಪಾಶ್ಚಿಿಮಾತ್ಯ ದೇಶಗಳಿಗೆ ಸರಿಸಮನಾಗಿ ಅತ್ಯಾಾಧುನಿಕ ಕ್ಯಾಾನ್ಸರ್ ಆರೈಕೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆಯನ್ನು ಒದಗಿಸುತ್ತಿಿದೆ. ಕ್ಯಾಾನ್ಸರ್ ಚಿಕಿತ್ಸೆೆಗಾಗಿ ಇತ್ತೀಚಿನ ಮತ್ತು ಆಧುನಿಕ ಸಲಕರಣೆಗಳನ್ನು ಕಿದ್ವಾಾಯಿ ಸಂಸ್ಥೆೆಯಲ್ಲಿ ಸಜ್ಜುಗೊಳಿಸುವ ಪ್ರಕ್ರಿಿಯೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಆ ಮೂಲಕ ಕ್ಯಾಾನ್ಸರ್ ನಿರ್ಮೂಲನೆಗಾಗಿ ಕಠಿಣ ಪ್ರಯತ್ನ ಮಾಡುತ್ತಿಿದ್ದೇವೆ.
ಡಾ.ಸಿ.ರಾಮಚಂದ್ರ, ಕಿದ್ವಾಯಿ ಸ್ಮಾಾರಕ ಗಂಥಿ ಸಂಸ್ಥೆೆ

Leave a Reply

Your email address will not be published. Required fields are marked *