Tuesday, 11th August 2020

ಕೊಹ್ಲಿಗೆ ವಿಶೇಷ ದಿನ…

ಕ್ರಿಕೆಟ್‌ನಲ್ಲಿ ಹಲವು ಮೈಲಿಗಲ್ಲು ಸ್ಥಾಪಿಸಿರುವ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿಿ ಅವರು 2008 ರಂದು ಆಗಸ್‌ಟ್‌ 18 ರಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆೆ ಪದಾರ್ಪಣೆ ಮಾಡಿದ್ದರು. ರನ್ ಮಿಷನ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆೆ 11 ವರ್ಷಗಳ ಸಂಭ್ರಮ. 2008ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿದ್ದರು. 2009ರಲ್ಲಿ ಮೊದಲ ವೃತ್ತಿ ಜೀವನದ ಶತಕ ಸಿಡಿಸಿದ್ದರು. ಏಕದಿನ ಕ್ರಿಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಾಟ್‌ಸ್‌‌ಮನ್‌ಗಳಲ್ಲಿ ಕೊಹ್ಲಿಿ (43) ಎರಡನೇ ಸ್ಥಾಾನದಲ್ಲಿದ್ದಾರೆ. ಮೊದಲನೇ ಸ್ಥಾಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ. 10 ವರ್ಷಗಳ ಕ್ರಿಿಕೆಟ್ ಪಯಣ ಯಶಸ್ವಿಯಾಗಿ ಮುಗಿಸಿರುವ ಟೀಮ್ ಇಂಡಿಯಾ ನಾಯಕನಿಗೆ ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳಿಂದ ಶ್ಲಾಾಘನೆಗಳ ಮಹಾಪೂರ ಹರಿದು ಬಂದಿದೆ. 30ರ ಪ್ರಾಾಯದ ವಿರಾಟ್ 239 ಏಕದಿನ ಪಂದ್ಯಗಳಿಂದ 11,520 ರನ್, 77 ಟೆಸ್‌ಟ್‌ ಪಂದ್ಯಗಳಿಂದ 6,613 ರನ್ ಹಾಗೂ 70 ಟಿ-20 ಪಂದ್ಯಗಳಿಂದ 2,369 ರನ್ ಗಳಿಸಿದ್ದಾರೆ. 2010ರಲ್ಲಿ ಕೊಹ್ಲಿಿ ಟೆಸ್‌ಟ್‌ ಹಾಗೂ ಟಿ-20 ಕ್ರಿಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

Leave a Reply

Your email address will not be published. Required fields are marked *