Tuesday, 7th July 2020

ತಪ್ಪುಗಳನ್ನು ಮೆಟ್ಟಿ ನಿಲ್ಲುತ್ತೇವೆ: ರೋಹಿತ್ ಶರ್ಮಾ

ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧ 31 ರನ್ ಗಳ ಸೋಲು ಕಂಡ ಬಳಿಕ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಇಂಗ್ಲೆಂಡ್ ಬೌಲರ್ ಗಳಿಂದ ಕಲಿಯುವುದಿದೆ ಎಂದಿದ್ದಾರೆ.

ಭರ್ಜರಿ ಫಾರ್ಮ್ ನಲ್ಲಿರುವ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪ್ರಸಕ್ತ ವಿಶ್ವಕಪ್ ನಲ್ಲಿ ಮೂರನೇ ಶತಕ ಬಾರಿಸಿದರು. ಇಂಗ್ಲೆಂಡ್ ವಿರುದ್ಧ 102 ರನ್ ಸಿಡಿಸಿದ ರೋಹಿತ್, ಟೀಮ್ ಇಂಡಿಯಾಕ್ಕೆ ಆಧಾರವಾದರು. ಭಾರತವನ್ನು ಮಣಿಸಿದ ಇಂಗ್ಲೆಂಡ್, ವಿಶ್ವಕಪ್ ನಲ್ಲಿ ಸೆಮಿಫೈನಲ್ಸ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್, ‘ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಪ್ರದರ್ಶನ ನೀಡಿದೆ. ಎದುರಾಳಿ ತಂಡಕ್ಕೆ ಮೂರು ಉತ್ತಮ ಜೊತೆಯಾಟಗಳು ನೆರವಾದವು. ಆದರೆ, ನಮ್ಮ ತಂಡದ ಪರ ಒಂದೇ ಒಂದು ದೊಡ್ಡ ಮೊತ್ತದ ಜೊತೆಯಾಟ ಮೂಡಿ ಬಂದಿತು. ಇಂಗ್ಲೆಂಡ್ ಬೌಲರ್ ಗಳು ಶಾರ್ಟ್ ಎಸೆತ ಹಾಗೂ ಸ್ಲೋ ಎಸೆತಗಳನ್ನು ಪ್ರಯೋಗಿಸಿದರು. ಇದರ ಪರಿಣಾಮ ಬ್ಯಾಟ್ಸ್ ಮನ್ ಗಳು ವಿಕೆಟ್ ಕೈ ಚೆಲ್ಲಿದರು’ ಎಂದು ತಿಳಿಸಿದ್ದಾರೆ.
ಆರಂಭಿಕ 10 ಓವರ್ ಗಳಲ್ಲಿ ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡುವಲ್ಲಿ ಭಾರತ ತಂಡ ಎಡವಿದೆ. ಎದುರಾಳಿ ತಂಡ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *