Friday, 19th April 2024

ರಾಷ್ಟ್ರೀಯ ತಂಡಕ್ಕೆ ಮರಳಿದ ಪೇಸ್

ದೆಹಲಿ:
ಪಾಕಿಸ್ತಾಾನದ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆೆ ಎಂಟು ಸದಸ್ಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಒಂದು ವರ್ಷ ದೀರ್ಘ ಅವಧಿಯ ಬಳಿಕ ಲಿಯಾಂಡರ್ ಪೇಸ್ ಭಾರತದ ತಂಡಕ್ಕೆೆ ಮರಳಿದ್ದಾಾರೆ.
ಲಿಯಾಂಡರ್ ಪೇಸ್ ಜತೆಗೆ ಭಾರತದ ಅಗ್ರ ಆಟಗಾರರಾದ ಸುಮಿತ್ ನಗಾಲ್, ರಾಮ್‌ಕುಮಾರ್ ರಾಮನಾಥನ್, ಸಸಿಕುಮಾರ್ ಮುಕುಂದ್ ಹಾಗೂ ರೋಹನ್ ಭೋಪಣ್ಣ ಅವರು ಕೂಡ ತಂಡದಲ್ಲಿದ್ದಾಾರೆ. ಅಖಿಲ ಭಾರತೀಯ ಟೆನಿಸ್ ಅಸೋಸಿಯೇಷನ್ ಆಯ್ಕೆೆ ಸಮಿತಿ ಪ್ರಕಟಿಸಿರುವ ತಂಡದಲ್ಲಿ ಜೀವನ್, ಸಾಕೇತ್ ಮೈನೇನಿ ಹಾಗೂ ಸಿದ್ಧಾಾರ್ಥ್ ರಾವತ್ ಕೂಡ ಸ್ಥಾಾನ ಪಡೆದುಕೊಂಡಿದ್ದಾಾರೆ.
ಎಐಟಿಎ ಮನವಿಯ ಮೇರೆಗೆ ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟ, ಭಾರತ ಹಾಗೂ ಪಾಕಿಸ್ತಾಾನ ನಡುವಿನ ಪಂದ್ಯವನ್ನು ಇಸ್ಲಾಾಮಬಾದ್ ನಿಂದ ಸ್ಥಳಾಂತರ ಮಾಡಿದೆ. ಆದರೆ, ಪಾಕಿಸ್ತಾಾನ ಟೆನಿಸ್ ಒಕ್ಕೂಟ ಸ್ಥಳಾಂತರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿಕೊಂಡಿದೆ.
ವೈವಾಹಿಕ ಜೀವನಕ್ಕೆೆ ಕಾಲಿಡುತ್ತಿಿರುವ ಭಾರತದ ಅಗ್ರ ಕ್ರಮಾಂಕದ ಪ್ರಜ್ಞೇಶ್ ಗುಣೇಶ್ವರನ್ ಅವರು ಈ ಪಂದ್ಯಕ್ಕೆೆ ಅಲಭ್ಯರಾಗಿದ್ದಾಾರೆ. ಹಾಗಾಗಿ, ಸಿಂಗಲ್‌ಸ್‌ ಪಂದ್ಯಗಳನ್ನು ಸುಮಿತ್ ನಗಾಲ್ (127) ಹಾಗೂ ರಾಮ್‌ಕುಮಾರ್ ರಾಮನಾಥನ್(190) ಅವರು ಆಡಲಿದ್ದಾಾರೆ. ಸಿಂಗಲ್‌ಸ್‌ ವಿಭಾಗದ ಮೀಸಲು ಆಟಗಾರರಾಗಿ ಮುಕುಂದ್ ಹಾಗೂ ಮೈನೇನಿ ಇರಲಿದ್ದಾಾರೆ.
ಡಬಲ್‌ಸ್‌ ವಿಭಾಗದಲ್ಲಿ ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್ ಹಾಗೂ ಜೀವನ್ ಆಡಲಿದ್ದಾಾರೆ.
ಭಾರತ ಡೆವಿಸ್ ಕಪ್ ತಂಡ: ಸುಮಿತ್ ನಗಾಲ್, ರಾಮ್‌ಕುಮಾರ್ ರಾಮನಾಥನ್, ಸಸಿ ಕುಮಾರ್ ಮುಕುಂದ್, ಸಾಕೇತ್ ಮೈನೇನಿ, ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್, ಜೀವನ್, ಹಾಗೂ ಸಿದ್ಧಾಾರ್ಥ್ ರಾವತ್.

Leave a Reply

Your email address will not be published. Required fields are marked *

error: Content is protected !!