Saturday, 20th April 2024

ಅಮೋಘ ಅಟ ಪ್ರದರ್ಶಿಸಿ ಸೋತ ಮಾರ್ಗನ್‌ ಪಡೆ

ಪುಣೆ: ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅಮೋಘ ಸಾಧನೆಯಿಂದಾಗಿ ಇಂಗ್ಲೆಂಡ್ ವಿರುದ್ದ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ 66 ರನ್ ಗಳಿಂದ ಭರ್ಜರಿ‌ ಜಯ ದಾಖಲಿಸಿ ಏಕದಿನ ಸರಣಿಯಲ್ಲೂ‌ ಶುಭಾರಂಭ ಮಾಡಿದೆ.

ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ವಿರುದ್ದ ಪದಾರ್ಪಣೆ ಮಾಡಿದ ಕರ್ನಾಟಕದ ಪ್ರಸಿದ್ದ್ ಕೃಷ್ಣ ನಾಲ್ಕು ವಿಕೆಟ್ ಕಬಳಿಸಿ ಮೊದಲ ಪಂದ್ಯದಲ್ಲೇ ಉತ್ತಮ‌ ಸಾಧನೆ ಮಾಡಿದ್ದಾರೆ.

318 ರನ್ ಗಳ ಸವಾಲಿನ ಗುರಿಯನ್ನು ಬೆನ್ನಹತ್ತಿದ್ದ ಇಂಗ್ಲೆಂಡ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಳಿಳಿಯಿತು. ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ಜೇಸನ್ ರಾಯ್ ಮತ್ತು ಜಾನಿ ಬೈರ್ ಸ್ಟೊ ಭಾರತದ ಬೌಲಿಂಗ್ ದಾಳಿಗೆ ಸಮರ್ಥ ಉತ್ತರ ನೀಡಿದರು.‌ ಮೊದಲ ವಿಕೆಟ್ ಗೆ 135 ರನ್ ಸೇರಿಸಿದರು. ಬೈರ್ ಸ್ಟೋ 6 ಬೌಂಡರಿ ಹಾಗೂ ಏಳು ಸಿಕ್ದರ್ ಗಳ ನೆರವಿನಿಂದ 94 ರನ್ ಬಾರಿಸಿ ಔಟಾದರು. ಜೇಸನ್ ರಾಯ್ 46 ರನ್ ಗಳಿಸಿದರು.

ಈ ಜೋಡಿಯನ್ನು ಪ್ರಸಿದ್ದ್ ಮುರಿದರು. ಇಬರಿಬ್ಬರನ್ನು ಬಿಟ್ಟರೆ ಉಳಿದ ಆಟಗಾರರು ಉತ್ತಮ ಜತೆಯಾಟವಾಡಲು ವಿಫಲ ರಾದರು. ಮೊಯಿನ್ ಅಲಿ 30 ರನ್ ಗಳಿಸಿದ್ದನ್ನು ಬಿಟ್ಟರೆ ನಾಯಕ ಮೊರ್ಗನ್ ಸೇರಿದಂತೆ ನಂತರ ಬಂದ ಆಟಗಾರರು ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾಗಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

ಯಾವುದೇ ವಿಕೆಟ್‌ ನಷ್ಟವಿಲ್ಲದೆ 135 ರನ್ ಗಳಿಸಿದ್ದ ಇಂಗ್ಲೆಂಡ್ 42.1 ಓವರ್ ಗಳಲ್ಲಿ 251 ರನ್ ಗಳಿಗೆ ಸರ್ವಪತನ ಕಂಡು ಸೋಲಿಗೆ ಶರಣಾಯಿತು. ಭಾರತದ ಪರ ಪ್ರಸಿದ್ದ ಕೃಷ್ಣ ನಾಲ್ಕು ಹಾಗೂ ಶಾರ್ದೂಲ್ ಠಾಕೂರ್ ಮೂರು ವಿಕೆಟ್‌ ಪಡೆದು ಯಶಸ್ವಿ ಬೌಲರ್ ಎನಿಸಿದರು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿತು.

ಬಿರುಸಿನ ಆಟವಾಡುತ್ತಿದ್ದ ಧವನ್ ಶತಕದ‌ ಅಂಚಿನಲ್ಲಿದ್ದಾಗ ಸ್ಟೋಕ್ಸ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ‌ಧವನ್ 106 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 98 ರನ್ ಗಳಿಸಿದರು. ಬಳಿಕ ಕೆ.ಎಲ್ .ರಾಹುಲ್ 62 ಹಾಗೂ ಕೃನಾಲ್ ಪಾಂಡ್ಯ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿ ಮುರಿಯದ ಆರನೇ ವಿಕೆಟ್ ಗೆ ಶತಕದ ಜತೆಯಾಟ ವಾಡಿ ತಂಡದ ಮೊತ್ತವನ್ನು 300 ರ ಗಡಿ ದಾಟಿಸಿದರು.

ಟಿ 20 ಕ್ರಿಕಟ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕೆ.ಎಲ್ 43 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ದರ್ ಬಾರಿಸಿ 62 ಹಾಗೂ ಹಾರ್ದಿಕ್ ಪಾಂಡ್ಯ 31 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 58 ರನ್ ಬಾರಿಸಿ ಇಬ್ಬರು ಅಜೇಯರಾಗುಳಿದರು.

98 ರನ್ ಬಾರಿಸಿದ ಶಿಖರ್ ಧವನ್ ಪಂದ್ಯ ಪುರುಷ ಪ್ರಶಸ್ರಿಗೆ ಪಾತ್ರರಾದರು.

Leave a Reply

Your email address will not be published. Required fields are marked *

error: Content is protected !!