Tuesday, 30th May 2023

ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ರಶ್ಮಿಕಾ, ತಮನ್ನಾ ನೃತ್ಯದ ಮೆರುಗು..!

ಅಹಮದಾಬಾದ್​: ಇಂಡಿಯನ್​ ಪ್ರೀಮಿಯರ್​ ಲೀಗ್ (16ನೇ ಆವೃತ್ತಿ) ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ನೃತ್ಯದ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ ಎಂದು ವರದಿಯಾಗಿದೆ.

ಕರೋನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಉದ್ಘಾಟನಾ ಸಮಾರಂಭ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ನಡೆಯುತ್ತಿದೆ.

ಈ ಉದ್ಘಾಟನಾ ಸಮಾರಂಭ ಭಾರತದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾ.31 ರಂದು ನಡೆಯಲಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯ ನೃತ್ಯ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮತ್ತು ಎಂ.ಎಸ್. ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾ ಮುಖಿಯಾಗಲಿವೆ. ಈಗಾಗಲೇ ಎಲ್ಲ ತಂಡಗಳು ಅಭ್ಯಾಸ ಆರಂಭಿಸಿದೆ.

ಈ ಬಾರಿಯ ಐಪಿಎಲ್​ನಲ್ಲಿ ನೂತನ ನಿಯಮೊಂದನ್ನು ಜಾರಿಗೆ ತರಲು ಐಪಿಎಲ್​ ಆಡಳಿತ ಮಂಡಳಿ ಮುಂದಾಗಿದೆ. ಸಾಮಾನ್ಯವಾಗಿ ಟಾಸ್​ಗೂ ಮುನ್ನ ಅಂತಿಮ 11ರ ಆಡುವ ಬಳಗವನ್ನು ತಂಡಗಳು ಪ್ರಕಟಿಸಬೇಕಿತ್ತು. ಆದರೆ ಇದೀಗ ಟಾಸ್ ನಂತರವೂ ತಂಡವನ್ನು ಪ್ರಕಟಿಸುವ ಅವಕಾಶ ನೀಡಲಾಗಿದೆ.
error: Content is protected !!