Wednesday, 24th April 2024

ಅಬ್ಬರಿಸಿದ ಮ್ಯಾಕ್ಸ್, ಎಬಿಡಿ: ಕೋಲ್ಕತ್ತಾದ ನಾಲ್ಕು ವಿಕೆಟ್ ಪತನ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಅಬ್ಬರಿಸಿದರು.

ಇತ್ತೀಚಿನ ವರದಿ ಪ್ರಕಾರ, ಭಾರೀ ಮೊತ್ತಕ್ಕೆ ಸೂಕ್ತ ಪ್ರತಿರೋಧ ತೋರದ ಕೋಲ್ಕತ್ತಾ ತಂಡ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇದಕ್ಕೂ ಮೊದಲು, ಕೆಕೆಆರ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿ ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾ ದರು. ಆರಂಭದಲ್ಲೇ ಆರ್‌ಸಿಬಿ ತಂಡಕ್ಕೆ ಆಘಾತ ಎರುದಾಗಿತ್ತು. 9 ರನ್ ಗಳಿಸುವಷ್ಟರಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ವಿಕೆಟ್ ನಷ್ಟವಾಗಿತ್ತು. ಈ ಹಂತದಲ್ಲಿ ದೇವದತ್ತ ಪಡಿಕ್ಕಲ್ ಜೊತೆಗೂಡಿದ ಮ್ಯಾಕ್ಸ್‌ವೆಲ್ 86 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು.

ಮ್ಯಾಕ್ಸ್‌ವೆಲ್ 28 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಸಾಧನೆ ಮಾಡಿ, ಅಮೋಘ ಫಾರ್ಮ್ ಮುಂದುವರಿಸಿದರು. ಈ ಮೂಲಕ ಗರಿಷ್ಠ ರನ್ ಬೇಟೆಯಲ್ಲಿ ಆರಂಜ್ ಕ್ಯಾಪ್ ಗಿಟ್ಟಿಸಿದರು. ದೇವದತ್ತ ವಿಕೆಟ್ ಪತನದ ಬಳಿಕ ಎಬಿ ಡಿ ವಿಲಿಯರ್ಸ್ ಅವರೊಂದಿಗೆ ಸೇರಿದ ಮ್ಯಾಕ್ಸ್‌ವೆಲ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಮೈದಾನದ ಎಲ್ಲ ದಿಕ್ಕಿಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು.

49 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 78 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಎಬಿ ಡಿ ವಿಲಿಯರ್ಸ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ 34 ಎಸೆತಗಳಲ್ಲಿ 76 ರನ್ ಗಳಿಸಿ ಅಜೇಯರಾಗುಳಿದರು. ಕಾಕತಾಳೀಯ ವೆಂಬಂತೆ ವಿಲಿಯರ್ಸ್ ಹಾಗೂ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್‌ನಲ್ಲಿ ತಲಾ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸಿಡಿದಿ ದ್ದವು.

 

Leave a Reply

Your email address will not be published. Required fields are marked *

error: Content is protected !!