Saturday, 4th July 2020

ನೇಕಾರರನ್ನು ನೇಪತ್ಯಕ್ಕೆ ಸರಿಸಿದ ರಾಜ್ಯ ಸರಕಾರ

ಸರಕಾರದ ಆದೇಶ ತಂದ ಫಜೀತಿ ಬೀದಿಗೆ ಬಿತ್ತು ನೇಕಾರರ ಬದುಕು ಬಿಎಸ್‌ವೈ-ಅಶೋಕ ನಡುವಿನ ತಿಕ್ಕಾಟದಿಂದ ನೇಕಾರರಿಗೆ ಬರೆ

ರಾಘವೇಂದ್ರ ಕಲಾದಗಿ ಬಾಗಲಕೋಟೆ
ಒಂದೇ ವರ್ಷದಲ್ಲಿ ಮೂರು ಬಾರಿ ಪ್ರವಾಹಕ್ಕೆೆ ತುತ್ತಾಾಗಿರುವ ಉತ್ತರ ಕರ್ನಾಟಕದ ಜನತೆ ಬೀದಿಗೆ ಬಿದ್ದಿದ್ದು, ನೇಕಾರರ ಬದುಕಂತೂ ಅಕ್ಷರಶಃ ದಿಕ್ಕೆೆಟ್ಟು ಹೋಗಿದೆ. ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರಕಾರದ ಆದೇಶವೊಂದು ನೇಕಾರರ ಬದುಕಿಗೆ ಕೊಳ್ಳಿಿ ಇಟ್ಟಿಿದೆ. ಕಂದಾಯ ಸಚಿವ ಆರ್.ಅಶೋಕ ಮತ್ತು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ನಡುವಿನ ಶೀತಲ ಸಮರದಿಂದ ಬಡ ನೇಕಾರ ಮೇಲೆ ಗದಾಪ್ರಹಾರ ನಡೆದಿದೆ ಎಂದು ನೇಕಾರ ಸಂಘಟನೆಗಳು ಆಕ್ರೋೋಶ ವ್ಯಕ್ತಪಡಿಸಿವೆ.
ಹೌದು..! ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ಈ ಮೊದಲು ಬಾಗಲಕೋಟೆ, ಬೆಳಗಾವಿ ಜಿಲ್ಲೆೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರತಿ ಮಗ್ಗಕ್ಕೆೆ (ಪಾವರ್‌ಲೂಮ್) 25 ಸಾವಿರ ರು. ಪರಿಹಾರ ಘೋಷಿಸಿ ಆದೇಶ ಹೊರಡಿಸಿದ್ದರು. ಆದರೆ ಅದಕ್ಕೆೆ ಕಂದಾಯ ಇಲಾಖೆ ಬ್ರೇಕ್ ಹಾಕಿದ್ದು, ಎಷ್ಟೇ ಕೈಮಗ್ಗಗಳು ನಾಶವಾಗಿದ್ದರೂ ಒಂದು ಕುಟುಂಬಕ್ಕೆೆ 25 ಸಾವಿರ ರು. ಮಾತ್ರ ಪರಿಹಾರ ಎಂದು ಘೋಷಿಸಿದೆ. ಕಟ್ಟಾಾ ಬಿಜೆಪಿ ಬೆಂಬಲಿಗರಾಗಿದ್ದ ನೇಕಾರ ಸಮುದಾಯಕ್ಕೆೆ ರಾಜ್ಯ ಸರಕಾರದ ಆದೇಶ ಮರ್ಮಾಘಾತ ನೀಡಿದ್ದು, ಈ ಹಠಾತ್ ಆದೇಶ ತಿದ್ದುಪಡಿ ಏಕೆ ಎಂಬ ಪ್ರಶ್ನೆೆ ಹುಟ್ಟು ಹಾಕಿದೆ.

ಪ್ರತಿಪಕ್ಷದ ನಾಯಕರೂ ಮೌನ:
ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ್ ಬಾಗಲಕೋಟೆ ಜಿಲ್ಲೆೆಯ ಪ್ರತಿನಿಧಿಗಳೇ ಆದರೂ ನೇಕಾರರ ಸಮಸ್ಯೆೆ ಕುರಿತು ರಾಜ್ಯ ಸರಕಾರದ ಗಮನ ಸೆಳೆದಿಲ್ಲ. ಸರಕಾರದ ತಪ್ಪುು ನಿರ್ಧಾರಗಳನ್ನು ಎತ್ತಿಿ ತೋರಿಸಿ ಪ್ರಜೆಗಳಿಗೆ ನ್ಯಾಾಯ ಒದಗಿಸಬೇಕಾದ ಪ್ರತಿಪಕ್ಷಗಳೂ ಮೌನಕ್ಕೆೆ ಶರಣಾಗಿರುವ ಹಿಂದೆ ರಾಜ್ಯಕೀಯ ಷಡ್ಯಂತ್ರವಿರುವ ಶಂಕೆ ವ್ಯಕ್ತವಾಗಿದ್ದು, ನೇಕಾರರಿಗೆ ಯಾರ ಬೆಂಬಲವೂ ಇಲ್ಲದಂತಾಗಿದೆ.

ಹೋರಾಟಕ್ಕೆೆ ಸಿದ್ಧ:
‘ನೆರೆ ಪ್ರವಾಹದಲ್ಲಿ ಲಕ್ಷಾಾಂತರ ರುಪಾಯಿ ಮೌಲ್ಯದ ಮಗ್ಗದ ಸಲಕರಣೆಗಳು ನೀರುಪಾಲಾಗಿವೆ. ಸರಕಾರ ಕೊಡುವ 25 ಸಾವಿರ ರು. ಯಾವುದಕ್ಕೂ ಸಾಲುವುದಿಲ್ಲ. ನಿಸರ್ಗವೇ ನಮ್ಮ ಮೇಲೆ ಮುನಿಸಿಕೊಂಡ ಮೇಲೆ ಯಾವ ಸರಕಾರ ಕೊಟ್ಟದ್ದು ಏನಾಗಬೇಕು ಎಂದು ಸಮಾಧಾನಪಟ್ಟುಕೊಂಡು, ಸರಕಾರ ನಿಗದಿ ಮಾಡಿದ್ದ 25 ಸಾವಿರ ರು. ಪರಿಹಾರಕ್ಕೆೆ ಸಮ್ಮತಿ ಸೂಚಿಸಿದ್ದೇವು. ಈಗ ಅಧಿಕಾರಿಗಳು ಅದನ್ನೂ ನಮ್ಮಿಿಂದ ಕಿತ್ತುಕೊಳ್ಳುತ್ತಿಿದ್ದಾಾರೆ. ಇನ್ಮುಂದೆ ನಾವು ಸುಮ್ಮನಿರಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎನ್ನುತ್ತಾಾರೆ ಸಂತ್ರಸ್ತ ನೇಕಾರರ ಕುಟುಂಬದ ಸದಸ್ಯರು.

ನೇಕಾರಿಕೆಯನ್ನೇ ನಂಬಿಕೊಂಡ ಜನತೆ
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆೆಯಲ್ಲಿ ಕೃಷಿ ಬಿಟ್ಟರೆ ಅತ್ಯಂತ ದೊಡ್ಡ ಉದ್ಯೋೋಗ ನೇಕಾರಿಕೆ. ಇಲ್ಲಿ ಲಕ್ಷಕ್ಕೂ ಅಧಿಕ ನೇಕಾರರ ಕುಟುಂಬಗಳಿವೆ. ಇಲ್ಲಿನ ತೇರದಾಳ, ರಬಕವಿ,ಬನಹಟ್ಟಿಿ, ಹೊಸೂರು, ಮಹಾಲಿಂಗಪುರ, ಕಮತಗಿ, ಗೋವನಕೊಪ್ಪ ಸೇರಿದಂತೆ ಬೆಳಗಾವಿ ಜಿಲ್ಲೆೆಯ ರಾಮದುರ್ಗ, ಅಥಣಿ ತಾಲೂಕಿನಲ್ಲೂ ಅನೇಕ ಕುಟುಂಬಗಳು ನೇಕಾರಿಕೆಯನ್ನೇ ನಂಬಿ ಬದುಕುತ್ತಿಿದ್ದಾಾರೆ. ಜನರ ಬದುಕಿನ ಆದಾಯ ಮೂಲವಾಗಿದ್ದ ಕೈಮಗ್ಗಗಳು ನೆರೆ ಪ್ರವಾಹದಲ್ಲಿ ಕೊಚ್ಚಿಿಕೊಂಡು ಹೋಗಿದೆ.

ಇಬ್ಬರೂ ಡಿಸಿಎಂಗಳು ಮೌನ
ಬೆಳಗಾವಿ, ಬಾಗಲಕೋಟೆ ಜಿಲ್ಲೆೆಗಲ್ಲೇ ಇಬ್ಬರು ಉಪಮುಖ್ಯಮಂತ್ರಿಿಗಳಿದ್ದರೂ ನೇಕಾರರ ಪರ ಒಬ್ಬರೂ ಮಾತನಾಡುತ್ತಿಿಲ್ಲ. ಬಾಗಲಕೋಟೆ ಜಿಲ್ಲೆೆಯವರೇ ಆದ ಗೋವಿಂದ ಕಾರಜೋಳ ಮತ್ತು ಬೆಳಗಾವಿ ಜಿಲ್ಲೆೆಯವರಾದ ಲಕ್ಷ್ಮಣ ಸವದಿ ರಾಜ್ಯ ಸರಕಾರದ ಈ ಆದೇಶದ ಕುರಿತು ಚಕಾರವೆತ್ತದೆ ಮೌನಕ್ಕೆೆ ಶರಣಾಗಿದ್ದಾಾರೆ.

ಸಿಎಂಗೆ ಘೇರಾವ್
ಬೆಳಗಾವಿ, ಬಾಗಲಕೋಟೆ ಜಿಲ್ಲೆೆಗಳಲ್ಲಿ ಸಿಎಂ ಯಡಿಯೂರಪ್ಪ ಪ್ರವಾಸ ಮಾಡುವ ಸಂದರ್ಭದಲ್ಲಿ ನೇಕಾರರೆಲ್ಲರೂ ಸೇರಿ ಘೇರಾವ್ ಹಾಕಲಾಗುವದು. ರಾಜ್ಯ ಸರಕಾರದ ಅನ್ಯಾಾಯ ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆೆಗಳಲ್ಲಿ ನೇಕಾರರಿಂದ ಉಗ್ರ ಪ್ರತಿಭಟನೆ ಮಾಡಲಾಗುವದು.
ಅಶೋಕ ಚಂದರಗಿ
ನೇಕಾರ ಮುಖಂಡ ಬೆಳಗಾವಿ

Leave a Reply

Your email address will not be published. Required fields are marked *