Thursday, 28th March 2024

ಪಂಚಮಸಾಲಿಗೆ ಸಿಎಂ ಭಾಗ್ಯ ಸಿಗಲಿ

ವಿಶ್ವವಾಣಿ ಕ್ಲಬ್‌’ಹೌಸ್‌ – ಸಂವಾದ ೨

ವಿಶ್ವವಾಣಿಯ ‘ಕ್ಲಬ್‌ಹೌಸ್’ನಲ್ಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ವಾತಂತ್ರ್ಯಾ ನಂತರ ವೀರಶೈವ ಸಮು ದಾಯದ ಎಂಟು ನಾಯಕರು ಸಿಎಂ

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಲಿಂಗಾಯತ ಸಮುದಾಯದಿಂದ ಎಂಟು ಜನ ಸಿಎಂಗಳಾಗಿದ್ದಾರೆ. ಆದರೆ, ಈವರೆಗೆ
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಸಿಕ್ಕಿಲ್ಲ. ಈಗ ಅದು ಈಡೇರಲಿ ಎಂಬುದು ನಮ್ಮ ಬಯಕೆ ಎಂದು
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ವಿಶ್ವವಾಣಿಯ ‘ಕ್ಲಬ್‌ಹೌಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಿಎಂ ಯಡಿಯೂರಪ್ಪ ಅವರು ಇತ್ತೀಚಿಗೆ ದೆಹಲಿಗೆ
ಪ್ರಯಾಣಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ, ಹೈಕಮಾಂಡ್ ಹೇಳಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದರು. ವೀರಶೈವ
ಸಮುದಾಯದವರೇ ಮತ್ತೊಮ್ಮೆ ಸಿಎಂ ಆಗಬೇಕೆಂಬುದು ಅವರ ಹಿನ್ನೆಲೆ. ಈಗಾಗಲೇ ಸ್ವಾತಂತ್ರ್ಯಾ ನಂತರ ವೀರಶೈವ ಸಮು
ದಾಯದ ಎಂಟು ನಾಯಕರು ಸಿಎಂ ಆಗಿದ್ದಾರೆ. ಈ ಬಾರಿಯಾದರೂ ಪಂಚಮಸಾಲಿಗೆ ನೀಡಲು ಆಗ್ರಹಿಸಿದ್ದೇನೆ. ಯಾರಾಗ
ಬೇಕು ಎಂಬುದನ್ನು ಈಗಾಗಲೇ ಸೂಚಿಸಿದ್ದೇವೆ. ಅದರಂತೆ ಆದರೆ ಒಳ್ಳೆಯದು. ಪಕ್ಷದ ಸಿದ್ಧಾಂತದಂತೆ ನಡೆದರೆ ಅದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ನರೇಂದ್ರ ಮೋದಿ ಅವರು ವಂಶಪಾರಂಪರ್ಯ ಆಡಳಿತಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ ಬಿಜೆಪಿಯಲ್ಲಿ ಅದು ನಡೆಯುತ್ತಿದೆ. ನಾನು ವಿರೋಧಿಸುವುದು ಇಂತಹ ಸಂಗತಿಗಳನ್ನು. ಎಲ್ಲ ಪಕ್ಷಗಳು ಅದರದ್ದೇ ಆದ ಸಿದ್ಧಾಂತಗಳನ್ನು ಒಳಗೊಂಡಿವೆ. ಆದರೆ, ಅದನ್ನು ಜಾರಿಗೆ ತರುವಲ್ಲಿ ನಾಯಕರು ವಿಫಲವಾಗಿದ್ದಾರೆ. ನಾಯಕತ್ವದಲ್ಲಿ ಪಾರದರ್ಶಕತೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.

ಹಳ್ಳಿಹಕ್ಕಿಗೆ ಹೀಗೇ ಹಾಡಬೇಕೆಂದಿಲ್ಲ. ಅದು ಶಾಸ್ತ್ರೀಯ ಸಂಗೀತ ಹೇಳಲ್ಲ. ಸ್ವಚ್ಛಂದವಾಗಿ ಹಾಡುತ್ತದೆ. ನಾನು ಏನು
ಹೇಳುತ್ತಿದ್ದೇನೊ ಅದನ್ನು ಸಮಾಧಾನವಾಗಿ ಕೇಳಿಸಿಕೊಳ್ಳಲ್ಲ. ಏನು ಹೇಳುತ್ತಿದ್ದೆ ಎನ್ನುವುದು ಅರ್ಥ ಮಾಡಿಕೊಳ್ಳುವುದು
ಮುಖ್ಯ. ನಾನು ನನ್ನ ಜೀವನದಲ್ಲಿ ಏನಾದರೂ ನುಡಿದಾಗ ಅದರಲ್ಲಿ ಲಾಭ, ನಷ್ಟ ಲೆಕ್ಕ ಇರುವುದಿಲ್ಲ. ನಾನು ಏನು ಹೇಳಬೇಕೊ
ಅದನ್ನು ಹೇಳುವುದು ಖಚಿತ ಎಂದು ತಿಳಿಸಿದರು.

1984ರಲ್ಲಿ ರಾಮಕೃಷ್ಣ ಹೆಗಡೆ ಅವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಕುರಿತು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಸ್ತಾಪಿ ಸಿದರು. ಆಗ ಅದನ್ನು ತನಿಖೆಗೆ ಒಳಪಡಿಸಿದ ರಾಮಕೃಷ್ಣ ಹೆಗಡೆ ಅವರು ಸತ್ಯಾಸತ್ಯತೆಯನ್ನು ರಾಜ್ಯದ ಜನತೆ ಮುಂದಿಟ್ಟರು. ಸಿಎಂ ಕುಟುಂಬದ ವಿರುದ್ಧ ಕಿಕ್‌ಬ್ಯಾಕ್ ಆರೋಪ ಮಾಡಿದ್ದೇನೆ.

ಭ್ರಷ್ಟಾಚಾರ ನಡೆದಿರುವ ಕುರಿತು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಜೆಡಿಎಸ್-ಕಾಂಗ್ರೆಸ್ ರಚಿಸಿದ್ದು ರಾಕ್ಷಸ
ಸರಕಾರ: ನನಗೆ ಯಾವುದೇ ಪಕ್ಷ ಹಾಗೂ ನಾಯಕರ ಮೇಲೆ ವೈಯುಕ್ತಿಕ ದ್ವೇಷವಿಲ್ಲ. ಜನತೆಗೆ ಉತ್ತಮ ಆಡಳಿತ ಬೇಕು ಎಂದು
ಅರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ರಾಕ್ಷಸ ಸರಕಾರ ಕೊನೆ ಗಾಣಿಸುವುದು ನನ್ನ ನಿಲುವಾಗಿತ್ತು. ಹಾಗೆಯೇ ಕುಟುಂಬ ರಾಜಕಾರಣ ಕೊನೆಗಾಣಿಸಲು ಬಿಜೆಪಿ ಪಕ್ಷಕ್ಕೆ ಬಂದು ಸರಕಾರ
ರಚಿಸಲಾಯಿತು.

ಪ್ರಧಾನಿ ಮೋದಿ ಕುರಿತು ಹಳ್ಳಿಹಕ್ಕಿ ಗುಣಗಾನ: ರಾಜ್ಯದಲ್ಲಿ 104 ಶಾಸಕರು, 25 ಮಂದಿ ಸಂಸದರಾಗಲು ಕಾರಣ ಪ್ರಧಾನಿ
ನರೇಂದ್ರ ಮೋದಿ ಅವರ ನಾಯಕತ್ವ. ಮೋದಿ ಅವರದ್ದು ಆಲೋಚನೆ ಜನಹಿತ. ಅವರು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಲು ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅವರು ತಂದಿರುವ ಯೋಜನೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆಡಳಿತ ನಡೆಸಿ
ದ ಪ್ರಧಾನಿಗಳ ಪೈಕಿ ಇವರೆ ಸರ್ವಧರ್ಮಗಳ ಸಮನ್ವಯಕ ಮೊದಲು, ಕೊನೆ ಮೋದಿ ಅವರು ಎಂದು ಗುಣಗಾನ ಮಾಡಿದರು.

ಸದ್ಯದಲ್ಲೇ ಬಾಂಬೆ ಡೇಸ್ ಪುಸ್ತಕ ಬಿಡುಗಡೆ
ಮೈತ್ರಿ ಸರಕಾರದ ಪತನದ ಕುರಿತು ಪುಸ್ತಕ ಬರೆಯಲಾಗಿದ್ದು, ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಇದಕ್ಕೆ ಯಾರ ಪಾತ್ರವೇನು? ಏನೆಲ್ಲಾ ಘಟನೆಗಳು ನಡೆದಿವೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ ಎಲ್ಲರ ಹೆಸರನ್ನು ಯಥಾವತ್ತಾಗಿ ಬರೆಯಲಾಗಿದೆ. ರಾಜಕಾರಣ ಮಾಡಿದ್ದೇನೆ. ಹೀಗಾಗಿ ಯಾವುದೇ ಹೆಸರು, ವಿಚಾರವನ್ನು ಮುಚ್ಚಿಡುವ ಮಾತೇ ಇಲ್ಲ ಎಂದು ಎಚ್.ವಿಶ್ವನಾಥ್ ತಿಳಿಸಿದರು.

***

ರೈತನ ಮಗ ಎಚ್.ಡಿ.ದೇವೇಗೌಡ ಅವರು ಕರ್ನಾಟಕದಿಂದ ಪ್ರಧಾನಿಯಾಗಿದ್ದು ನಮ್ಮ ಪುಣ್ಯ. ಹತ್ತು ತಿಂಗಳ ಅಧಿಕಾರಾವಧಿ ಯಲ್ಲಿ ಅವರು ತಂದ ಯೋಜನೆಗಳು ಆಡಳಿತ ಪಕ್ಷಗಳಿಗೆ ಮಾದರಿಯಾಗಿವೆ. ಅಸಾಧ್ಯವಾದುದ್ದನ್ನು ಸಾಧ್ಯ ಎಂದು ತೋರಿಸುವ ಗುಣ ಅವರದ್ದು.
-ಎಚ್.ವಿಶ್ವನಾಥ್ ವಿಧಾನಪರಿಷತ್ ಸದಸ್ಯ

Leave a Reply

Your email address will not be published. Required fields are marked *

error: Content is protected !!