Thursday, 28th September 2023

ಶಾಲೆಗೆ ಕೀರ್ತಿ ತಂದ ಸೌ|| ಎ.ಜಿ.ಗಾಂಧಿ

ಇಂಡಿ: ಪಟ್ಟಣದ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯಡಿಯಲ್ಲಿರುವ ಸೌ|| ಎ.ಜಿ.ಗಾಂಧಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ.ಶ್ರೇಯಾ ಅವಟಿ ೬೨೫ ಅಂಕಗಳಿಗೆ ೬೧೧ ಅಂಕಗಳನ್ನು ಪಡೆದು ೯೭.೭೬% ಪ್ರತಿಶತ ಅಂಕಗಳೊ0ದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ, ಶಾಲೆಗೆ ಕೀರ್ತಿ ತಂದಿದ್ದಾಳೆ0ದು ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಕುಲಕರ್ಣಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಓದಿರುವ ವಿದ್ಯಾರ್ಥಿನಿಯರಲ್ಲಿ ೫೪ ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ಹಾಗೂ ೨೧ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಹಾಗೂ ಇದಕ್ಕೆ ಪೂರಕವಾಗಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮುಖ್ಯೋಪಾಧ್ಯಾಯರನ್ನು ಹಾಗೂ ಸಿಬ್ಬಂದಿಯವರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ|| ದೀಪಕ ದೋಶಿ, ಉಪಾಧ್ಯಕ್ಷರಾದ ನೀಲಕಂಠಗೌಡ ಪಾಟೀಲ, ಗೌರವ ಕಾರ್ಯದರ್ಶಿಗಳಾದ ಪ್ರಭಾಕರ ಬಗಲಿ, ಸಹ ಕಾರ್ಯದರ್ಶಿಗಳಾದ ಸಿದ್ದಣ್ಣ ತಾಂಬೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಅಭಿನಂದಿಸಿದ್ದಾರೆ.

error: Content is protected !!