Wednesday, 24th April 2024

ಪಾತ್ರ ಸಾಬೀತಾದರೆ, ನನ್ನ ಆಸ್ತಿ ಸರ್ಕಾರಕ್ಕೆ: ಜಮೀರ್

ಡ್ರಗ್‌ಸ್‌ ಪ್ರಕರಣ

ಬೆಂಗಳೂರು: ನಟಿ ಸಂಜನಾರನ್ನು ನಾನು ಭೇಟಿಯಾಗಿಲ್ಲ ಎಂದು ಸ್ಪಷ್ಟ ಪಡಿಸಿರುವ ಶಾಸಕ ಜಮೀರ್ ಅಹಮದ್ ಖಾನ್, ಡ್ರಗ್ಸ್ ಪ್ರಕರಣದಲ್ಲಿ ನನ್ನ ಪಾತ್ರ ಇರುವುದನ್ನು ಸಾಬೀತು ಪಡಿಸಿದರೆ ಸರ್ಕಾರಕ್ಕೆ ನನ್ನ ಆಸ್ತಿ ಬರೆದುಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಶ್ರೀಲಂಕಾದ ಕ್ಯಾಸಿನೋದಲ್ಲಿ ಸಂಜನಾರನ್ನು ಭೇಟಿ ಮಾಡಿದ್ದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಶ್ರೀಲಂಕದಲ್ಲಿ ಬಿಡಿ ಬೆಂಗಳೂರಿನಲ್ಲೂ ಆಕೆಯನ್ನು ಮುಖಾಮುಖಿ ಭೇಟಿಯಾಗಿಲ್ಲ.

ಸಂಜನಾ ಈಗ ಎಲ್ಲಿದ್ದಾರೆ? ಪೊಲೀಸ್ ಕಸ್ಟಡಿಯಲ್ಲಿ ತಾನೇ? ತನಿಖೆ ಮಾಡಲಿ. ಸುಮ್ಮನೆ ಆರೋಪ ಮಾಡಿ ತೇಜೋವಧೆ ಮಾಡಬಾರದು. ಈಗ ರಾಜ್ಯದಲ್ಲಿ, ಕೇಂದ್ರದಲ್ಲಿ ಎರಡು ಕಡೆ ಬಿಜೆಪಿಯ ಸರ್ಕಾರವೇ ಇದೆ. ತನಿಖೆ ಮಾಡಲಿ. ಡ್ರಗ್ಸ ಪ್ರಕರಣದಲ್ಲಿ ನನ್ನ ಪಾತ್ರ ಇರುವ ಬಗ್ಗೆ ಸಾಬೀತು ಪಡಿಸಲಿ ಎಂದರು.

ಸರ್ಕಾರ ತನಿಖೆ ಮಾಡಲಿ. ತನಿಖೆಗೆ 200 ಪರ್ಸೆಂಟ್ ಸಹಕಾರ ನೀಡುತ್ತೇನೆ. ಸುಳ್ಳು ಆರೋಪಗಳ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಆರೋಪಿ ಫಾಜಿಲ್ ನಾಲ್ಕು ವರ್ಷದ ಹಿಂದೆ ನನಗೆ ಪರಿಚಯ. ಆದರೆ ಈಗ ಇಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!