Saturday, 23rd September 2023

ಯಶವಂತರಾಯಗೌಡ ಪಾಟೀಲರಿಗೆ ಪ್ರಥಮ ಹಂತದಲ್ಲಿಯೇ ಸಚಿವ ಸ್ಥಾನ ನೀಡಬೇಕು

ಇಂಡಿ: ಲಿಂಬೆ ನಾಡು ಇಂಡಿ ವಿಧಾನಸಭಾ ಮತಕ್ಷೇತ್ರ ನಂಜು0ಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲೂಕು ಕೇಂದ್ರ ವಾಗಿದ್ದು, ಸ್ವಾತ0ತ್ರ÷್ಯ ಬಂದಾಗಿನಿ0ದಲೂ ಈ ಕ್ಷೇತ್ರವನ್ನು ರಾಜಕೀಯವಾಗಿ ಕಡೆಗಣಿಸಲಾಗಿದೆ. ಈ ಬಾರಿ ಹ್ಯಾಟ್ರೀಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಪ್ರಥಮ ಹಂತದಲ್ಲಿಯೇ ಸಚಿವ ಸ್ಥಾನ ನೀಡಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ಮುಖಂಡ ಪ್ರಶಾಂತ ಕಾಳೆ ಪ್ರಕಟಣೆಯಲ್ಲಿ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.

ಇಂಡಿ ತಾಲೂಕನ್ನು ಜಿಲ್ಲೆ ಮಾಡುವ ಕನಸು ಕಂಡಿರುವ ,ನೀರಾವರಿ ಯೋಜನೆ ರೂಪಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಲು ಪಣ ತೊಟ್ಟಿರುವ ಅಭಿವೃದ್ದಿಪರ ಚಿಂತನೆ, ದಿನದಲಿತರು, ಬಡವರು, ಅಲ್ಪಸ0ಖ್ಯಾತರು, ಮಹಿಳೆಯರು, ರೈತರ ಪರ ಅಭಿವೃದ್ದಿಯ ಚಿಂತನೆಯನ್ನು ಹೊಂದಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗ ಸರ್ವ ವಿಧದಲ್ಲಿ ಅಭಿವೃದ್ದಿ ಹೊಂದಿ, ರಾಜಕೀಯವಾಗಿ ಸಚಿವ ಸ್ಥಾನದಿಂದ ವಂಚಿತಗೊ0ಡಿರುವ ಈ ಭಾಗಕ್ಕೆ ನ್ಯಾಯ ಕೊಡಬೇಕಾದರೆ ಯಶವಂತರಾಯ ಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಪ್ರಶಾಂತ ಕಾಳೆ, ಎಸ್.ಜೆ. ಮಾಡ್ಯಾಳ, ಮಲಕಪ್ಪ ತಾಂಬಾ, ಸಂತೋಷ ಪರಸೆನವರ, ಅರ್ಜುನ ಹೊಸಮನಿ, ದತ್ತು ಕೋಳಿ ಇತರರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

error: Content is protected !!