Tuesday, 17th September 2019

ಯಡಿಯೂರಪ್ಪಗೆ ಗೊತ್ತಿಲ್ಲದೆ ಅರೆಸ್ಟ್ ಮಾಡ್ತಾರಾ.? ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..

ಯಡಿಯೂರಪ್ಪಗೆ ಗೊತ್ತಿಲ್ಲದೆ ಅರೆಸ್ಟ್ ಮಾಡ್ತಾರಾ.?
ಯಡಿಯೂರಪ್ಪಗೆ ಗೊತ್ತಿದೆ ಅರೆಸ್ಟ್ ಆಗಿದೆ.
ಯಡಿಯೂರಪ್ಪ ರಾಜಕೀಯವಾಗಿ ನನಗೆ ಗೊತ್ತಿಲ್ಲ ಎಂದು ಸುಮ್ಮನೆ ಹೇಳುತ್ತಿದ್ದಾರೆ ಅಷ್ಟೆ.
ಅವರ ಪಕ್ಷವೆ ಬಂಧಿಸಿರುವ ಕಾರಣ ಅವರಿಗೆ ಮಾಹಿತಿ ಇದ್ದೆ ಇದೆ.
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ.
ನಾಲ್ಕು ದಿನ ವಿಚಾರಣೆ ಮಾಡಿ ಉತ್ತರ ಪಡೆಯದವರು.
ಈಗ ಬಂಧಿಸಿ ಹೇಗೆ ಉತ್ತರ ಪಡೆಯುತ್ತಾರೆ.
ಕಾಂಗ್ರೆಸ್ ಶಕ್ತಿಯನ್ನು ಕುಗ್ಗಿಸುವ ಉದ್ದೇಶದಿಂದಲೆ ಈ ಬಂಧನವಾಗಿದೆ.
ಚಿದಂಬರಂ ಹಾಗೂ ಡಿಕೆಶಿ ಕೇಸ್‌ಗಳು ಬೇರೆ ಬೇರೆ.
ಆದರೆ ಅವರಿಬ್ಬರ ಬಂಧನದ ಉದ್ದೇಶ ಮಾತ್ರ ರಾಜಕೀಯ ಪ್ರೇರಿತ.
ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ರಾಜ್ಯಾಂದ್ಯಂತ ಪ್ರತಿಭಟನೆ ಮಾಡಲಿದೆ.
ಗುಜರಾತ್ ಶಾಸಕರನ್ನ ನೀವು ಹಿಡಿದಿಟ್ಟುಕೊಂಡಿದ್ದು ಏಕೆ ಎಂದು ಇಡಿ ಡಿಕೆಶಿಯವರನ್ನು ಪ್ರಶ್ನೆ ಮಾಡಿದೆ.
ಇದರ ಅರ್ಥ ಇದು ರಾಜಕೀಯ ದುರುದ್ದೇಶ ಎಂಬುದು ಸ್ಪಷ್ಟ.
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

Leave a Reply

Your email address will not be published. Required fields are marked *