Tuesday, 11th August 2020

ಎರಡನೇ ಸ್ಥಾನಕ್ಕೆ ಜಿಗಿದ ಸ್ಟೀವ್ ಸ್ಮಿತ್

ಐಸಿಸಿ ರ್ಯಾಂಕಿಂಗ್: ಅಗ್ರ ಶ್ರೇಯಾಂಕ ಉಳಿಸಿಕೊಂಡ ಕೊಹ್ಲಿ ಕರುಣರತ್ನೆಗೆ ಬಂಫರ್

ಪ್ರಸ್ತುತ ನಡೆಯುತ್ತಿರುವ ಆ್ಯಶಸ್ ಟೆಸ್‌ಟ್‌ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡದ ಹಿರಿಯ ಬ್ಯಾಟ್‌ಸ್‌‌ಮನ್ ಸ್ಟೀವನ್ ಸ್ಮಿತ್ ಅವರು ಸೋಮವಾರ ಬಿಡುಗಡೆಯಾದ ಐಸಿಸಿ ಟೆಸ್‌ಟ್‌ ರ್ಯಾಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆೆ ಜಿಗಿದ್ದಾಾರೆ. ಆದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಐದು ಪಂದ್ಯಗಳ ಆ್ಯಶಸ್ ಟೆಸ್‌ಟ್‌ ಸರಣಿಯ ಮೊದಲ ಸ್ಟೀವನ್ ಸ್ಮಿಿತ್ ಅವರು ಎರಡೂ ಇನಿಂಗ್‌ಸ್‌‌ಗಳಲ್ಲಿ ಶತಕ ಸಿಡಿಸಿದ್ದರು. ಅಲ್ಲದೇ, ದಿ ಲಾರ್ಡ್‌ಸ್‌ ಅಂಗಳದಲ್ಲಿ ಭಾನುವಾರ ಎರಡನೇ ಪಂದ್ಯ ಡ್ರಾಾ ಆಗಿತ್ತು. ಈ ಪಂದ್ಯದಲ್ಲಿ ಮೊದಲ ಇನಿಂಗ್‌ಸ್‌ ಸ್ಮಿಿತ್ 92 ರನ್ ದಾಖಲಿಸಿದ್ದರು. ಕೇವಲ ಎಂಟು ರನ್ ಅಂತರದಲ್ಲಿ ಶತಕ ವಂಚಿತರಾಗಿದ್ದರು. ಒಟ್ಟಾಾರೆ, ಸ್ಟೀವನ್ ಸ್ಮಿಿತ್ 913 ಅಂಕಗಳೊಂದಿಗೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್(887) ಅವರನ್ನು ಹಿಂದಿಕ್ಕಿಿ ಎರಡನೇ ಸ್ಥಾಾನ ಅಲಂಕರಿಸಿದರು.

ಭಾರತ ತಂಡದ ನಾಯಕ ವಿರಾಟ್ 922 ಅಂಕಗಳೊಂದಿಗೆ ಅಗ್ರ ಸ್ಥಾಾನದಲ್ಲಿದ್ದಾಾರೆ. ಕೊಹ್ಲಿಿ ಹಾಗೂ ಸ್ಮಿಿತ್‌ಗೆ ಕೇವಲ ಒಂಬತ್ತು ಅಂಕಗಳು ಮಾತ್ರ ಅಂತರವಿದೆ. ಟೀಮ್ ಇಂಡಿಯಾದ ಮತ್ತೊೊಬ್ಬ ಬ್ಯಾಾಟ್‌ಸ್‌‌ಮನ್ ಚೇತೇಶ್ವರ ಪೂಜಾರ(881) ನಾಲ್ಕನೇ ಸ್ಥಾಾನದಲ್ಲಿ ಉಳಿದಿದ್ದಾಾರೆ.
ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್‌ಟ್‌ ಪಂದ್ಯದ ದ್ವಿಿತೀಯ ಇನಿಂಗ್‌ಸ್‌ ನಲ್ಲಿ ಶತಕ ಸಿಡಿಸಿ ಶ್ರೀಲಂಕಾ ಗೆಲುವಿಗೆ ಕಾರಣರಾಗಿದ್ದ ನಾಯಕ ದಿಮುತ್ ಕರುಣರತ್ನೆೆ ನಾಲ್ಕು ಸ್ಥಾಾನಗಳಲ್ಲಿ ಏರಿಕೆ ಕಂಡು ಎಂಟನೇ ರ್ಯಾಾಂಕಿಂಗ್ ಪಡೆದಿದ್ದಾಾರೆ. ದಕ್ಷಿಿಣ ಆಫ್ರಿಿಕಾ ಐಡೆನ್ ಮಕ್ರಾಾಮ್(719) ಅವರು ಸ್ಥಾಾನ ಹಾಗೂ ಇಂಗ್ಲೆೆಂಡ್ ನಾಯಕ ಜೋ ರೂಟ್ ಒಂಬತ್ತನೇ ಸ್ಥಾಾನಕ್ಕೆೆ ಕುಸಿದ್ದಾಾರೆ.

ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಾಟ್ ಕಮಿನ್‌ಸ್‌ (914) ಅಗ್ರ ಸ್ಥಾಾನ ಉಳಿಸಿಕೊಂಡರು. ರವೀಂದ್ರ ಜಡೇಜಾ ಆರರಿಂದ ಐದನೇ ಸ್ಥಾಾನಕ್ಕೆೆ ಹಾಗೂ ರವಿಚಂದ್ರ ಅಶ್ವಿಿನ್ ಅವರು 10ನೇ ಸ್ಥಾಾನದಲ್ಲೇ ಉಳಿದಿದ್ದಾಾರೆ. ಆಲ್‌ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮೂರನೇ ಸ್ಥಾಾನ ಕಾಯ್ದುಕೊಂಡಿದ್ದಾಾರೆ. ವೆಸ್‌ಟ್‌ ಇಂಡೀಸ್ ತಂಡದ ನಾಯಕ ಜೇಸನ ಹೋಲ್ಡರ್ ಅಗ್ರ ಸ್ಥಾಾನದಲ್ಲಿದ್ದರೆ, ಎರಡನೇ ಶ್ರೇಯಾಂಕದಲ್ಲಿ ಬಾಂಗ್ಲಾಾದೇಶದ ಅಲ್ ಹಸನ್ ಇದ್ದಾಾರೆ.
ತಂಡದ ಶ್ರೇಯಾಂಕದಲ್ಲಿ ಭಾರತ(113) ಅಗ್ರ ಸ್ಥಾಾನದಲ್ಲಿದೆ. ಒಂದು ವೇಳೆ ವೆಸ್‌ಟ್‌ ಇಂಡೀಸ್ ವಿರುದ್ಧ 0-1 ಅಂತರದಲ್ಲಿ ಸೋಲು ಒಪ್ಪಿಿಕೊಂಡರೆ ಕೊಹ್ಲಿಿ ಪಡೆ ಅಗ್ರ ಸ್ಥಾಾನ ಕಳೆದುಕೊಳ್ಳಲಿದೆ. ನ್ಯೂಜಿಲೆಂಡ್(111) ಎರಡನೇ ಹಾಗೂ ದಕ್ಷಿಿಣ ಆಫ್ರಿಿಕಾ(108) ಮೂರನೇ ಸ್ಥಾಾನದಲ್ಲಿದೆ.

Leave a Reply

Your email address will not be published. Required fields are marked *