Tuesday, 11th August 2020

ಹಸ್ಸಿ ದಾಖಲೆ ಮುರಿದ ಸ್ಮಿತ್…

ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಟೆಸ್‌ಟ್‌‌ಗೆ ಮರಳಿದ ಸ್ಟೀವನ್ ಸ್ಮಿತ್ ಇಂಗ್ಲೆೆಂಡ್ ವಿರುದ್ಧ ಎರಡನೇ ಟೆಸ್‌ಟ್‌ ಪಂದ್ಯದಲ್ಲಿ ವಿಶಿಷ್ಠ ದಾಖಲೆಯೊಂದನ್ನು ಬರೆದಿದ್ದಾರೆ. ಆದರೆ, ಜೊಫ್ರಾ ಆರ್ಚರ್ ಎಸೆತದಲ್ಲಿ ಕೊರಳು ಭಾಗಕ್ಕೆೆ ಚೆಂಡು ತಗುಲಿದ್ದ ಪರಿಣಾಮ ಸ್ಮಿತ್ ಅವರು ಎರಡನೇ ಟೆಸ್‌ಟ್‌‌ನ ಇನ್ನುಳಿದ ಭಾಗಕ್ಕೆೆ ಅಲಭ್ಯರಾಗಿದ್ದಾಾರೆ. ಇವರ ಬದಲಿಗೆ ಮಾರ್ನುಸ್ ಲಬುಸ್ಚಗನೆಗೆ ಅವಕಾಶ ನೀಡಲಾಗಿದೆ. ಎರಡನೇ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಸ್ಮಿಿತ್ 92 ರನ್ ಗಳಿಸಿ ವೃತ್ತಿಿ ಜೀವನದ 25ನೇ ಶತಕ ವಂಚಿತರಾದರು. ಆದರೂ, ಅವರು ಟೆಸ್‌ಟ್‌ ಕ್ರಿಿಕೆಟ್‌ನಲ್ಲಿ ವಿಶಿಷ್ಠ ಮೈಲಿಗಲ್ಲು ಸೃಷ್ಟಿಿಸಿದರು. ಆ್ಯಶಸ್ ಟೆಸ್‌ಟ್‌ ಸರಣಿಯಲ್ಲಿ ಸತತ ಏಳು ಅರ್ಧ ಶತಕ ಸಿಡಿಸಿದ ಆಸ್ಟ್ರೇಲಿಯಾ ಮೊದಲ ಬ್ಯಾಾಟ್‌ಸ್‌‌ಮನ್ ಎಂಬ ಸಾಧನೆ ಮಾಡಿದ್ದಾರೆ. ಈ ಹಿಂದೆ ಆರು ಅರ್ಧ ಶತಕ ಸಿಡಿಸಿದ್ದ ಮೈಕ್ ಹಸ್ಸಿಿ ದಾಖಲೆಯನ್ನು ಸ್ಮಿಿತ್ ಶನಿವಾರ ಮುರಿದರು. ಆ್ಯಶಸ್ ಟೆಸ್‌ಟ್‌ ಸರಣಿಯ ಕಳೆದ ಏಳು ಇನಿಂಗ್‌ಸ್‌‌ಗಳಲ್ಲಿ ಸ್ಟೀವನ್ ಸ್ಮಿಿತ್ ಅವರು ಒಂದು ದ್ವಿಿಶತಕ, ಎರಡು ಶತಕ ಹಾಗೂ ಮೂರು ಅರ್ಧ ಶತಕ ಸಿಡಿಸಿದ್ದಾರೆ.

Leave a Reply

Your email address will not be published. Required fields are marked *