Friday, 24th September 2021

ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥಾಪಕ ಸುಚೇತಾ ಕೃಪಲಾನಿ ಸ್ಮರಣೆ

ಹರಪನಹಳ್ಳಿ: ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಂಸ್ಥಾಪಕರಾದ ಸುಚೇತ ಕೃಪಲಾನಿ ಅವರು ಭಾರತದ ಪ್ರಮುಖ ಸ್ವಾತಂತ್ರ‍್ಯ ಹೋರಾಟಗಾರ್ತಿ ಮತ್ತು ರಾಜಕಾರಣಿ. ಉತ್ತರ ಪ್ರದೇಶ ಸರಕಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದ ಅವರು ದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸ್ಮರಿಸಿದ್ದಾರೆ.

ಸೆ.೧೫ರಂದು ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಿ, ಸಜ್ಜನ ರಾಜಕಾರಣಿಯಾಗಿದ್ದ  ಸುಚೇತಾ ಕೃಪಲಾನಿ ಮರೆಯಲಾಗದ ಸಾಧಕಿಯಾಗಿದ್ದಾರೆ. ಬ್ರಿಟಿಷರ ವಿರುದ್ಧ ಚಲೇಜಾವ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿ ಸಿದುದಷ್ಟೇ ಅಲ್ಲ, ದೇಶದ ವಿಭಜನೆಯ ಸಮಯದಲ್ಲಿ ನೋಕಹಾಲಿಯ ದಂಗೆಗಳಲ್ಲಿ ಗಾಂಧೀಜಿಯ ಜೊತೆಗೂಡಿ ನಿರಾಶ್ರಿತರಿಗೆ ಆಶ್ರಯ, ಆಸರೆ ನೀಡಿದರು. ಗಾಂಧೀಜಿಯವರ ಅಪ್ತರಾಗಿದ್ದ ಅವರು  ಸಂವಿಧಾನ ರಚನಾ ಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರಲ್ಲಿ ಒಬ್ಬರಾದ ಸುಚೇತಾ, ಸಂವಿಧಾನದ ರಚನೆಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

೧೫ ಆಗಸ್ಟ್ ೧೯೪೭ರಂದು ಮೊಟ್ಟ ಮೊದಲ ಬಾರಿಗೆ ‘ವಂದೇ ಮಾತರಂ’ ಗೀತೆಯನ್ನು ಘಟಕ ಸಭೆಯ ಅಧಿವೇಶನದಲ್ಲಿ ಹಾಡಿದ ಶ್ರೇಯಸ್ಸು ಸುಚೇತಾರಿಗೆ ಸಲ್ಲುತ್ತದೆ. ೧೯೫೨ರಲ್ಲಿ ನವದೆಹಲಿಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ನೆಹರು ಅವರ ಸಚಿವ ಸಂಪುಟದಲ್ಲಿ ಸಣ್ಣ ಕೈಗಾರಿಕಾ ಇಲಾಖೆಯ ರಾಜ್ಯ ಸಚಿವೆ ಯಾಗಿದ್ದರು. ವಿಶ್ವ ಸಂಸ್ಥೆಯ ಭಾರತಿಯ ನಿಯೋಗದ ಸದಸ್ಯೆಯಾಗಿ ಸಹ ಕಾರ್ಯ ನಿರ್ವಹಿಸಿದರು.

ಸುಚೇತಾ ಅವರು ನಾಲ್ಕು ಬಾರಿ ಲೋಕಸಭೆಯ ಸಂಸದೆಯಾಗಿ ಆಯ್ಕೆಗೊಂಡರು. ೧೯೭೧ರಲ್ಲಿ ಸಕ್ರಿಯ ರಾಜಕಾರಣದಿಂದ ದೂರವಾಗಿ, ಲೋಕ ಕಲ್ಯಾಣ ಸಮಿತಿಯ ಆರೋಗ್ಯ  ಕೇಂದ್ರದಲ್ಲಿ ಸೇವೆ ಸಲ್ಲಿಸಿದಲ್ಲದೆ, ತಾವು ಸಂಪಾದಿಸಿದ ಹಣವೆಲ್ಲವನ್ನು ರೋಗಿಗಳ ಉಪಚಾರಕ್ಕೆ ವಿನಿಯೋಗಿಸಿದರು. ಪುರುಷ ದನಿಗಳ ಮಧ್ಯೆ, ಮಹಿಳೆ ದನಿ ಎತ್ತಲೂ ಸಾಧ್ಯವಿಲ್ಲದ ಸಮಯದಲ್ಲಿ, ಪ್ರಜಾ ಪ್ರಭುತ್ವಕ್ಕೆ ಪುಷ್ಟಿ ತುಂಬಲು, ದೇಶ ಕಟ್ಟಲು ಶ್ರಮಿಸಿದ ಮಹಿಳೆಯರು ಅಸಮಾನ್ಯರೇ ಸರಿ. ಇಂಥವರ ಮಧ್ಯೆ ಸುಚೇತಾ ಕೃಪಲಾನಿಯವರ ಹೆಸರು ಅಗ್ರ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ದೇಶದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾಗಾ0ಧಿ ಅವರು ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸಿ ಹೊಸ ಶಕೆ ಆರಂಭಿಸಿದರು. ಅವರು ಹಾಕಿ ಕೊಟ್ಟ ಹಾದಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿ ಮತ್ತು ಪ್ರಿಯಾಂಕಾಗಾAಧಿ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ರಾಷ್ಟಿçÃಯ ಅಧ್ಯಕ್ಷರಾದ ನೆಟ್ಟಾ ಡಿ,ಸೋಜಾ ಮತ್ತು ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷ ಪುಷ್ಪಾ ಅಮರನಾಥ ನೇತೃತ್ವದಲ್ಲಿ ಮಹಿಳಾ ಘಟಕ ಸಶಕ್ತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *