ಸಿಂಧನೂರು: ಕುಷ್ಟಗಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯುತ್ತಿರುವ ವೇಳೆ ಪೊಲೀಸ್ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಪ್ರಸಂಗ ಜರುಗಿತು.
ನೂಕುನುಗ್ಗಲು ಮಾಡುತ್ತಿದ್ದ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಲು ಹೋದ ಪೊಲೀಸರ ಮೇಲೆ ಮಾತಿನ ಚಕಮಕಿ ಸಾರ್ವಜನಿ ಕರು ನಡೆಸಿದ್ದಾರೆ. ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ ಸಿಪಿಐ, ಚಂದ್ರಶೇಖರ್ ರಿಗೂ ಸಾರ್ವಜನಿಕರು ಮಾತನಾಡಲು ಮುಂದಾ ದಾಗ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.
ಗ್ರಾಮೀಣ ಪಿಎಸ್ಐ ರಾಘವೇಂದ್ರ ಮಾತನಾಡಿ ಕೆಟೃ ತರ ವರ್ತನೆ ಮಾಡುವುದು ಸರಿಯಲ್ಲ. ಎಲ್ಲರೂ ಸಮಾಧಾನದಿಂದ ವರ್ತನೆ ಮಾಡಬೇಕು. ಇಲ್ಲವಾದರೆ, ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದರು.
ನಗರ ಠಾಣಾ ಪಿಎಸ್ಐ ವಿಜಯ್ ಕೃಷ್ಣ ಮಾತನಾಡಿ ಸಾರ್ವಜನಿಕರು ಕೋಪದಿಂದ ಪೊಲೀಸ್ ಇಲಾಖೆಯೊಂದಿಗೆ ವರ್ತಿಸು ವುದು ಸರಿಯಲ್ಲ. ಸಮಾಧಾನದಿಂದ ನಿಮ್ಮ ವರ್ತನೆ ಇರಬೇಕು ಎಂದರು ಕೆಲವರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದು ಕೊಂಡು ಹೋದ ಘಟನೆ ಜರುಗಿತು.