Saturday, 4th April 2020

ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ…

ಡಾ. ವಿಜಯಕುಮಾರ್ ಹರಬಿಶೆಟ್ಟರ್
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ 8 ಲಕ್ಷ ಜನರು ಆತ್ಮಹತ್ಯೆೆಯಿಂದ ಸಾಯುತ್ತಿದ್ದಾರೆ. ಬಹಳಷ್ಟು ಮಟ್ಟಿಗೆ ಆತ್ಮಹತ್ಯೆೆಗಳನ್ನು ತಡೆಗಟ್ಟಬಹುದು. ಇದರ ಅರಿವಿಗಾಗಿ ಪ್ರತಿ ವರ್ಷ ‘ಸೆಪ್ಟೆೆಂಬರ್ 10 ರಂದು ಆತ್ಮಹತ್ಯೆೆ ತಡೆ ದಿನ’ ಎಂದು ಗುರುತಿಸಲಾಗಿದೆ. ಹೆಚ್ಚುತ್ತಿಿರುವ ಆತ್ಮಹತ್ಯೆೆಗಳಿಂದ ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಅಕ್ಟೋೋಬರ್ 10 ರಂದು ಸಹ ಆತ್ಮಹತ್ಯೆೆ ತಡೆಯ ಅರಿವಿಗಾಗಿ ಮೀಸಲಿಡಲಾಗಿದೆ.

ಯುವ ಜನರಲ್ಲಿ ಆಗುವ ಸಾವುಗಳ ಕಾರಣಗಳಲ್ಲಿ ಆತ್ಮಹತ್ಯೆೆಯಿಂದಾಗಿ ಆಗುವ ಸಾವು ಎರಡನೇ ಸ್ಥಾಾನದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿಯ 2015ರ ಸಾಲಿನ ಸಮೀಕ್ಷೆಯ ಪ್ರಕಾರ ಆ ವರ್ಷದಲ್ಲಿ ಭಾರತದಲ್ಲಿ ಸುಮಾರು 1 ಲಕ್ಷ 35 ಸಾವಿರ ಸಾವುಗಳು ಆತ್ಮಹತ್ಯೆೆಯಿಂದಾಗಿ ಎಂದು ದಾಖಲಾಗಿವೆ. ಇದರಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಎಂದು ತಿಳಿದು ಬಂದಿದೆ. 2005 ರಿಂದ 2015 ರವರೆಗೆ ಸಮೀಕ್ಷೆಯ ಪ್ರಕಾರ ಒಂದೆರಡು ವರ್ಷಗಳನ್ನು ಹೊರತುಪಡಿಸಿದರೆ, ಕ್ರಮೇಣವಾಗಿ ಸಂಖ್ಯೆೆ ಹೇರುತ್ತಿಿದೆ ಎಂದು ತಿಳಿಯುತ್ತದೆ. ಹದಿ ಹರೆಯದವರಲ್ಲಿ ಹಾಗೂ ಯುವಜನರಲ್ಲಿ ಅದರ ಸಂಖ್ಯೆೆಯು ಹೆಚ್ಚುತ್ತಿಿದೆ. ಇದಲ್ಲದೆ, ರೈತರಲ್ಲಿ ಮತ್ತು ಹಿರಿಯ ನಾಗರಿಕರಲ್ಲಿಯೂ ಕೂಡ ಆತ್ಮಹತ್ಯೆೆಗಳ ಸಂಖ್ಯೆೆ ಹೆಚ್ಚುತ್ತಿಿದೆ. ಇನ್ನೊೊಂದು ಮುಖ್ಯವಾದ ಸಂಗತಿ ಎಂದರೆ, ಬಹಳಷ್ಟು ಮಂದಿ ಆತ್ಮಹತ್ಯೆೆಗೆ ಪ್ರಯತ್ನವನ್ನು ಹಾಗೂ ಅವುಗಳ ಬಗ್ಗೆೆ ಅನೇಕ ಬಾರಿ ಯೋಚನೆಗಳನ್ನು ಕೂಡ ಮಾಡಿರುತ್ತಾಾರೆ ಎಂದು ಅರಿವು ಮೂಡಬೇಕು.

ಕಾರಣಗಳು:
ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿಯ ಸಮೀಕ್ಷೆಯ ಪ್ರಕಾರ ಕಾಯಿಲೆಯಿಂದಾಗಿ. ಅದರಲ್ಲೂ ಮಾನಸಿಕ ಕಾಯಿಲೆಯಿಂದಾಗಿ, ಕೌಟುಂಬಿಕ ಸಮಸ್ಯೆೆ, ವೈವಾಹಿಕ ಜೀವನದ ಸಮಸ್ಯೆೆ, ನಿರುದ್ಯೋೋಗ, ಹಾಗೂ ಸಾಲಭಾದೆ ಈ ರೀತಿ ಹೆಚ್ಚಾಾಗಿ ಸಾಮಾಜಿಕ ಸಮಸ್ಯೆೆಗಳಿಂದ ಆತ್ಮಹತ್ಯೆೆಗಳು ನಡೆದಿವೆ ಎಂದು ತಿಳಿದುಬಂದಿದೆ. ಶಾಲಾ-ಕಾಲೇಜು ಮಕ್ಕಳಲ್ಲಿ ಪರೀಕ್ಷೆಯಲ್ಲಿ ವಿಫಲರಾದರೆಂದು ಹಾಗೂ ರೈತರಲ್ಲಿ ಸಾಲಬಾಧೆಯೆಂದು ಕೂಡ ವರದಿಯಾಗಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ 2015-16 ರ ಪ್ರಕಾರ ಪ್ರತಿ 6ನೇಯ ಭಾರತೀಯ ಪ್ರಜೆಗೆ ಮಾನಸಿಕ ಆರೋಗ್ಯದ ಸೇವೆಯ ಅಗತ್ಯವಿದೆ. ಕರ್ನಾಟಕದಲ್ಲಿ ಶೇ.8 ರಷ್ಟು ಮಂದಿಗೆ ಮಾನಸಿಕ ಅನಾರೋಗ್ಯವಿದೆ. ನಗರಗಳಲ್ಲಿ ವಾಸವಾಗಿರುವವರಲ್ಲಿ ಹಾಗೂ ಕಡಿಮೆ ಆದಾಯ ಪಡೆಯುವವರಲ್ಲಿ, ಮಾನಸಿಕ ಅನಾರೋಗ್ಯ ಹೆಚ್ಚಿಿದೆ ಎಂದು ತಿಳಿದುಬಂದಿದೆ. ಮಾನಸಿಕ ಅನಾರೋಗ್ಯ ಇರುವ ಸುಮಾರು ಶೇ.80 ರಷ್ಟು ಮಂದಿಗೆ ಮಾನಸಿಕ ಆರೋಗ್ಯ ಚಿಕಿತ್ಸೆೆ ಹಾಗೂ ಸೇವೆ ದೊರೆಯುತ್ತಿಿಲ್ಲ, ಎಂದು ಕೂಡ ಸಮೀಕ್ಷೆಯಲ್ಲಿ ವರದಿಯಾಗಿದೆ. ಇವುಗಳಲ್ಲಿ ಮುಖ್ಯವಾಗಿ ಖಿನ್ನತೆಯ ಕಾಯಿಲೆ ಹಾಗೂ ಮದ್ಯ-ಮಾದಕ ವಸ್ತುಗಳ ಅಭ್ಯಾಾಸವಿರುವ ವ್ಯಕ್ತಿಿಗಳಲ್ಲಿ ಆತ್ಮಹತ್ಯೆೆಗಳು ಹೆಚ್ಚಿಿವೆ.

ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿಿತಿಯಿಂದಾಗಿ ಕೂಡ ಅತಿ ಹೆಚ್ಚು ಆತ್ಮಹತ್ಯೆೆಗಳು ಆಗಿವೆ. ಇವುಗಳು ಮನುಷ್ಯನ ಮಾನಸಿಕ ಒತ್ತಡಳನ್ನು ಹೆಚ್ಚು ಮಾಡುತ್ತವೆ. ಎಲ್ಲರೂ ಒಂದಲ್ಲ ಒಂದು ರೀತಿಯ ಮಾನಸಿಕ ಒತ್ತಡವನ್ನು ಅನುಭವಿಸುತ್ತಿಿರುತ್ತಾಾರೆ. ಮಾನಸಿಕ ಒತ್ತಡ ದೀರ್ಘಕಾಲದಾಗಿದ್ದರೆ, ಆದರಿಂದ ದೇಹ ಸಂಬಂಧಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಅನುವು ಮಾಡಿಕೊಡಬಹುದಲ್ಲದೆ ಕಾಣದೇ ಇರುವ, ಅರಿವು ಮೂಡದ ಬಹುಮುಖ್ಯವಾದ ಮನಸ್ಸಿಿನ ಕಾಯಿಲೆ ಅದರಲ್ಲೂ ಖಿನ್ನತೆ ಮತ್ತು ಹೆಚ್ಚಿಿನ ಒತ್ತಡದಿಂದ ಆತ್ಮಹತ್ಯೆೆಯಂತಹ ಯೋಚನೆಗಳು ಹೆಚ್ಚಾಾಗಬಹುದು.

ಇದರ ಅರಿವು ಬಹಳಷ್ಟು ಜನರಿಗೆ ಇಲ್ಲ, ಸಾಮಾಜಿಕ ಅಂದರೆ ಬಹಳಷ್ಟು ಮಂದಿಗೆ ವೈವಾಹಿಕ ಜೀವನ ತೊಂದರೆ ಹಾಗೂ ಕೌಟುಂಬಿಕ, ದುಡ್ಡಿಿನ ಸಮಸ್ಯೆೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಯದೇ ಇರುವುದು. ಹೀಗೆ ಅನೇಕ ಕಾರಣಗಳು ಆತ್ಮಹತ್ಯೆೆಗೆ ಮುಖ್ಯ ಅಂಶಗಳಾಗಿವೆ.

ಪರಿಹಾರ ಮತ್ತು ಸಲಹೆಗಳು:
ಮನಸ್ಸಿಿನಲ್ಲಿ ಬಹಳ ದಿನಗಳ ಕಾಲ ಒತ್ತಡ ಇದ್ದರೆ ಅದರ ಬಗ್ಗೆೆ ಸಂಬಂಧಪಟ್ಟವರ, ಗುರುಹಿರಿಯರ, ಒಳ್ಳೆೆ ಸ್ನೇಹಿತರೊಡನೆ ಚರ್ಚೆ ಮಾಡಿ ಅದಷ್ಟು ಬೇಗ ಪರಿಹಾರ ಕಂಡುಹಿಡಿದುಕೊಳ್ಳುವುದು ಬಹಳ ಮುಖ್ಯ. ಕೆಲವೊಮ್ಮೆೆ ವೈವಾಹಿಕ ಜೀವನದಲ್ಲಿ ಒಬ್ಬರಿಗೆ ಅಥವಾ ಇಬ್ಬರಿಗೂ ಅತಿಯಾದ ಮನಸ್ಸಿಿನ ಒತ್ತಡದಿಂದ ಖಿನ್ನತೆ ಇರಬಹುದು. ಇದಕ್ಕಾಾಗಿ ಹತ್ತಿಿರದ ಮನೋವೈದ್ಯರ ಬಳಿ ಹೋಗಿ ಚರ್ಚೆ ಮಾಡಿದರೆ, ಕೇವಲ ಆಪ್ತ ಸಮಾಲೋಚನೆಗಳಿಂದಲೇ ಪರಿಹಾರ ಪ್ರಾಾರಂಭವಾಗುವುದು. ಈ ರೀತಿ ಮನೋವೈದ್ಯರನ್ನು ಕಾಣಲು ತಡಮಾಡಬಾರದು.

ಅರಿವಿನ ವರ್ತನೆಯ ಆಪ್ತ ಸಮಾಲೋಚನೆಯ ಒಂದು ರೀತಿಯ ಉತ್ತಮ ಚಿಕಿತ್ಸೆೆ ಇದರಲ್ಲಿ, ಮುಖ್ಯವಾಗಿ ತಮ್ಮ ಮನಸ್ಸಿಿನಲ್ಲಿ ಬರುತ್ತಿಿರುವ ನಕರಾತ್ಮಕ, ನಿರಾಶಾವಾದದ ಯೋಚನೆಗಳನ್ನು ಅರಿತುಕೊಂಡು ಇದನ್ನು ಬೇರೆ ದೃಷ್ಟಿಿಕೋನದಿಂದ ಯೋಚಿಸಬಹುದಾ? ಎಂದು ಯೋಚನೆಗಳನ್ನೇ ಮಾರ್ಪಡು ಮಾಡಿಕೊಳ್ಳುವುದೇ, ಈ ಚಿಕಿತ್ಸೆೆಯ ಮುಖ್ಯ ಉದ್ದೇಶ. ಈ ರೀತಿ ಮಾಡಿದಾಗ ತಮ್ಮ ಭಾವನೆಗಳ ಮತ್ತು ನಡವಳಿಕೆಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹೀಗೆ ಬಹುಕಾಲದ ಒತ್ತಡದಿಂದ ಪರಿಹಾರವು ಕಂಡುಕೊಳ್ಳಬಹುದು.

ಇನ್ನೊೊಂದು ಮುಖ್ಯವಾದುದು ಎಂದರೆ ಸಮಸ್ಯೆೆಗಳನ್ನು ಪರಿಹರಿಸಿಕೊಳ್ಳುವ ವಿಧಾನದ ಕೌಶಲ, ಈ ಕೌಶಲಗಳನ್ನು ಎಲ್ಲರೂ ಕಲಿತ್ತಿಿರುತ್ತಾಾರೆಂದು ಅಂದುಕೊಳ್ಳಬಾರದು. ಪದೇಪದೆ ಆತ್ಮಹತ್ಯೆೆಗಳ ಯೋಚನೆಗಳನ್ನು ಹೊಂದಿರುವ ವ್ಯಕ್ತಿಿಯ ಮನಸ್ಸನ್ನು ಪರೀಕ್ಷಿಸಿದಾಗ ಈ ಕೌಶಲಗಳು ಇಲ್ಲದಿರುವುದು ಅಥವಾ ಕಡಿಮೆಯಿರುವುದು ತಿಳಿದುಬರುತ್ತದೆ ಹಾಗೂ ಇದಕ್ಕೆೆ ತರಬೇತಿ ನೀಡುವುದು ಒಂದು ರೀತಿಯ ಪರಿಹಾರ. ಖಿನ್ನತೆಗೆ ನಾನಾ ರೀತಿಯ ಔಷಧಗಳು ಹಾಗೂ ತೀವ್ರ ಸ್ವರೂಪದ ಖಿನ್ನತೆಗೆ ವಿದ್ಯುತ್ ಕಂಪನ ಚಿಕಿತ್ಸೆೆಯಿಂದಲೂ ಕೂಡ ಉತ್ತಮ ಚಿಕಿತ್ಸೆೆ ಲಭ್ಯವಿದೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೋವೈದ್ಯರಿದ್ದು, ಹಾಗೂ ಜಿಲ್ಲಾಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಜಿಲ್ಲೆೆಯಲ್ಲೂ ಮನೋವೈದ್ಯರ ತಂಡ ಅಂದರೆ ಮನೋಶಾಸ್ತ್ರಜ್ಞರು, ಸಮಾಜ ಕಾರ್ಯಕರ್ತರು ಹಾಗೂ ನರ್ಸ್‌ಗಳು ಇದ್ದಾಾರೆ. ಕೆಲವು ಸಹಾಯವಾಣಿಗಳು ಕೂಡ ಇವೆ. ಅತಿಯಾಗಿ ಇರುವ ಆತ್ಮಹತ್ಯೆೆ ಯೋಚನೆಗಳನ್ನು ತುರ್ತುಸ್ಥಿಿತಿ ಎಂದು ಪರಿಗಣಿಸಿ, 108 ಆಂಬ್ಯುಲೆನ್‌ಸ್‌ ಕೂಡ ಕರೆಯಬಹುದು. ಹಾಗೂ ಅದೆಷ್ಟು ಬೇಗ ಹತ್ತಿಿರದ ಮನೋವೈದ್ಯರನ್ನು ಕಾಣುವುದು.

ಆತ್ಮಹತ್ಯೆೆ ತಡೆಗೆ ಬೇಕಾದ ಕೆಲವು ಜೀವನಶೈಲಿಯ ಬದಲಾವಣೆಗಳು:
1. ಉತ್ತಮ ಹವ್ಯಾಸದಲ್ಲಿ ತೊಡಗಿರುವುದು.
2. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದು
3. ಒಂಟಿತನವನ್ನು ಕಡಿಮೆ ಮಾಡಿಕೊಳ್ಳುವುದು.
4. ವೃತ್ತಿಯಲ್ಲಿನ ಒತ್ತಡದ ಬಗ್ಗೆೆ ಅರಿವು ಇಟ್ಟುಕೊಳ್ಳುವುದು.
5. ಮಾನಸಿಕ ಒತ್ತಡದ ಆರಂಭಿಕ ಲಕ್ಷಣಗಳನ್ನು ಗುರುತಿಸಿಕೊಳ್ಳುವುದು.
6. ಬಹುಕಾಲದ ಸಮಸ್ಯೆೆಗಳಿಗೆ ಪರಿಹಾರ ಕಂಡುಕೊಳ್ಳುವುದು.
7. ಸಮಸ್ಯೆೆಗಳನ್ನು ಪರಿಹಾರಿಸುವ ಕೌಶಲಗಳನ್ನು ಹೆಚ್ಚಿಸಿಕೊಳ್ಳುವುದು.
8. ಚೇತರಿಕ ಸಮರ್ಥ್ಯ ಅಂದರೆ ‘ಬಿದ್ದರೆ ಎದ್ದು ನಿಲ್ಲುವ’ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು.
9. ತಮ್ಮ ಗುರಿಯು ತಮಗೆ ಅತಿಯಾದ ಒತ್ತಡ ನೀಡಿದರೆ ಅದರ ಅಗತ್ಯವನ್ನು ಪುನಃ ಪರಿಶೀಲಿಸಿಕೊಳ್ಳುವುದು.

Leave a Reply

Your email address will not be published. Required fields are marked *