Sunday, 27th September 2020

ಪೊಲೀಸರಿಗೆ ಇಲ್ಲಿಯೇ ಸೂಕ್ತ ತರಬೇತಿ ನೀಡಿ.

ನಮ್ಮ ರಾಜ್ಯ ಆಧುನಿಕ ತಂತ್ರಜ್ಞಾಾನದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಬೀಗುತ್ತಿರುವಾಗಲೇ, ಪೊಲೀಸರಿಗೆ ವಿದೇಶದಲ್ಲಿ ತಂತ್ರಜ್ಞಾಾನ ತರಬೇತಿ ನೀಡಲು ಗೃಹ ಸಚಿವ ಬಸವರಾಜ ಬೊಮ್ಮಾಾಯಿ ನಿರ್ಧರಿಸಿರುವುದು ವಿಪರ್ಯಾಾಸ! ಅಪರಾಧ ತನಿಖೆ, ಟ್ರಾಾಫಿಕ್ ನಿಯಂತ್ರಣ, ನೀಡಲು ಠಾಣೆಗೆ ಬರುವವರೊಡನೆ ಯಾವ ರೀತಿ ಸ್ಪಂದಿಸಬೇಕು, ಪೊಲೀಸ್ ಠಾಣೆ ಹೇಗೆ ಜನಸ್ನೇಹಿ ಆಗಿರಬೇಕೆಂಬುದನ್ನು ಅರಿಯಲು ವಿದೇಶಕ್ಕೆೆ ಹೋಗಬೇಕು! ನಮ್ಮಲ್ಲೇ ತರಬೇತಿ ನೀಡುವವರು ಇಲ್ಲವೆ? ಅಥವಾ ವಿದೇಶದಿಂದ ಅಂಥವರನ್ನು ಕರೆಯಿಸಿ ತರಬೇತಿ ನೀಡಬಹುದಲ್ಲವೇ? ವಿದೇಶದಲ್ಲಿ ಕುಳಿತು ಇಲ್ಲಿಯ ವಾಸ್ತವದ ಅರಿವು ಮೂಡಿಸಲು ಸಾಧ್ಯವೇ ಇಲ್ಲ. ಅಲ್ಲಿನ ನಾಗರಿಕರ ನಡೆವಳಿಕೆ, ಪೊಲೀಸರ ನಡಾವಳಿ ತೀರಾ ಭಿನ್ನ. ಅಲ್ಲಿ ಕಲಿತದ್ದು, ಇಲ್ಲಿ ನಿಷ್ಪ್ರಯೋಜಕ. ಹೀಗಾಗಿ ಒಂದು ನಿರ್ದಿಷ್ಟ ಹಾಗೂ ಶಾಶ್ವತ ಪರಿಹಾರ ಅವಶ್ಯವಿರುವ ತಂತ್ರಜ್ಞಾಾನವನ್ನು ಇಲ್ಲೇ ಅಭಿವೃದ್ಧಿಿಪಡಿಸಿ, ಅಳವಡಿಸಿಕೊಳ್ಳಬೇಕು. ಒಂದು ಮಾತನ್ನಂತೂ ಒಪ್ಪಿಿಕೊಳ್ಳಲೇಬೇಕು. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾಾನಕ್ಕಿಿಂತ, ಪ್ರಾಾಮಾಣಿಕತೆ ಹೆಚ್ಚು ಕೆಲಸಕ್ಕೆೆ ಬಂದೀತು. ಪಡೆಯುವ ತರಬೇತಿ, ಅನುಭವ ವಾಸ್ತವದಲ್ಲಿ ಜಾರಿ ಮಾಡಲಾಗದಿದ್ದರೆ ಅದರಿಂದೇನು ಪ್ರಯೋಜನ? ಈ ಹಿಂದೆ ಕುಮಾರಸ್ವಾಾಮಿಯವರು ಮುಖ್ಯಮಂತ್ರಿಿಯಾಗಿದ್ದಾಾಗ, ರೈತರ ತಂಡವೊಂದನ್ನು ಇಸ್ರೇಲಿಗೆ ಕಳುಹಿಸಲಾಗಿತ್ತು. ಆದರೆ ಮುಂದೇನಾಯಿತು ಎಂಬುದು ತಿಳಿದಿರುವುದೇ. ತರಬೇತಿ ಹೆಸರಲ್ಲಿ ಕೆಲ ಇಲಾಖೆ ಸಿಬ್ಬಂದಿಯನ್ನು ವಿದೇಶಕ್ಕೆೆ ಕಳುಹಿಸುವುದು ಯಾವ ಪ್ರಯೋಜನಕ್ಕೂ ಬಾರದು. ಜಾಣತನವಿರುವುದು ಅವುಗಳನ್ನು ಸ್ವತಃ ನಾವೇ

ಶಂಕರನಾರಾಯಣ ಭಟ್, ಮಾಡಗೇರಿ (ಉತ್ತರ ಕನ್ನಡ)

Leave a Reply

Your email address will not be published. Required fields are marked *