Wednesday, 1st February 2023

ಸೂರ್ಯ ಮುಳುಗುವ ನಾಡಿನಲ್ಲಿ …

ಅಲೆಮಾರಿಯ ಡೈರಿ

mehandale100@gmail.com

ಬಹುಶಃ ಭಾರತದ ಅಲೆಮಾರಿತನಕ್ಕೂ, ವಿದೇಶಗಳಲ್ಲಿನ ಅಲೆಮಾರಿತನಕ್ಕೂ ಭಯಾನಕ ವ್ಯತ್ಯಾಸಗಳಿವೆ ಎನ್ನುವ ಅನುಭವ  ಮೊದಲು ಬಂದಿದ್ದು ನಾನು ನೇಪಾಳಕ್ಕೆ ಅಧಿಕೃತವಾಗಿ ಏರ್‌ಪೋರ್ಟ್ ಮೂಲಕ ಪ್ರವೇಶಿಸಿzಗ. ಅದರಲ್ಲೂ ಇಮಿಗ್ರೇಶನ್ನು, ನಿಮ್ಮ ಹಣ ಕಾಸಿನ ಬದಲಾವಣೆ, ಪೇಪರ್‌ಗಳು, ಅಕಸ್ಮಾತ ನೀವು ಯಾವುದಾದರೂ ಇಲಾಖೆಯ ವ್ಯಕ್ತಿಯಾಗಿದ್ದರೆ ಮರೆಯದೆ ನಿಮ್ಮ ಜನ್ಮ ಜಾಲಾಡುವ ಪರಿ ಇದೆಯಲ್ಲ ಅದೆಲ್ಲ ಬರೆದರೆ ಇನ್ನೊಂದು ಕಥೆಯಾದೀತು.

ಕಾರಣ ಸ್ವಾತಂತ್ರ್ಯ ಎಂದರೇನೆಂದು ನಿಮಗೆ ಅರ್ಥವಾಗ ಬೇಕಾದರೆ ಹೀಗೊಮ್ಮೆ ವಿದೇಶ ಪ್ರವಾಸದ ಅನುಭವವಾಗ ಬೇಕು. ಅದರಲ್ಲೂ ಭಾರತದುದ್ದಕ್ಕೂ ನಿಮಗೆ ಬೇಕೆಂದಲ್ಲಿ, ಎಲ್ಲಿಂದ ಎಲ್ಲಿಗೂ ಉಟ್ಟ ಬಟ್ಟೆ ಬಿಡಿ, ಸುತ್ತಿಕೊಂಡ ಲುಂಗಿಜಾರುತ್ತಿದ್ದರೂ, ಕಟ್ಟಿದ ಲಾಡಿಯ ಬರ್ಮುಡಾ ಉದುರುತ್ತಿದ್ದರೂ ಪುಸಕ್ಕನೆ ಹೊರಟು ಅಲ್ಲಿ ತಲುಪಿ ನಿಮಗೆ ಇಷ್ಟದ ಟೀ ಅಂಗಡಿ ಸೇರಿಕೊಂಡು ಬೆಳಗಿನ ನಾಸ್ಟಾ ಮಾಡುತ್ತ ಕೂರಬಹುದು. ಅಕಸ್ಮಾತ ಇದು ಸಂಜೆಯ ಹೊತ್ತಿಗಾದರೆ ಹೆಂಡದ ಅಂಗಡಿ ಆಯ್ಕೆ ಮಾಡಿಕೊಂಡು ಸಣ್ಣ ಪವ್ವಾ ಹೊಡೆಯಬಹುದು.

ಅಷ್ಟಕ್ಕೂ ಒಂದು ಪವ್ವ ಎರಡು ಕ್ವಾರ್ಟರು ಇದೆಲ್ಲಯ ಹೊತ್ತಿಗೇ ಯಾಕೆ ಆಯ್ಕೆ ಮಾಡಿ ಕೊಳ್ಳುತ್ತಾರೆ, ಗಂಡಿರಲಿ ಹೆಣ್ಣಿರಲಿ  ಡಿನ ಗಮ್ಮತ್ತಿಗೆ ಸಂಜೆಯಾಗುವು  ಕಾಯುವ ಔಚಿತ್ಯ ವೇನೋ ನನಗೆ ಅರ್ಥವಾಗಿಲ್ಲ. ಬಹುಶಃ ಚೆನ್ನಾಗಿ ಮೂಗಿನವರೆಗೆ ಏರಿಸಿ ಬಿದ್ಕೊಂಡು ಬಿಡಬಹುದೆನ್ನುವುದು ಒಂದೆಡೆಯಾದರೆ ಸಂಜೆಯ ಇಳಿಗತ್ತಲಿನಿಂದ ಮರುದಿನ ಬೆಳಗಿನ ಜಾವದ  ರ್ಗತ್ತಲವರೆಗೂ ವು ಕದ್ದು ಅಥವಾ   ಕುಡಿಯುವುದು ಗೊತ್ತಾಗುವುದಿಲ್ಲ ಎನ್ನುವ ಒಳ  ಹುಸಿ ನಂಬುಗೆಯೂ ಇರಬುಹುದು.

ಅದರಲ್ಲೂ ಗುಂಡು ಎಂದರೆ ಗಂಡಸರ ವ್ಯವಹಾರ ಎನ್ನುವುದನ್ನು ಬಹಿರಂಗವಾಗಿ ಅಲ್ಲಗೆಳೆದು, ನಾವು ಸಮಾನರು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಕೊರೊನಾ ಕಾಲದ ದುರ್ಲಭತೆ. ಆಗ ಸರತಿಯಲ್ಲಿ ಸಮಾನವಾಗಿ ತಾಸುಗಟ್ಟಲೇ ಎಣ್ಣೆಗೆ ಹೆಂಗಸರೂ ನಿಂತಿದ್ದು ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು ಬಿಡಿ. ಏನೇ ಇರಲಿ. ಹಾಗೆ ನಾವುಕನ್ಯಕುಮಾರಿಯಿಂದ ಕಾಶ್ಮೀರದವರೆಗೂ ಇತ್ತ ಬಂಗಾಳದ ತುದಿಯ ಚಿಕನ್‌ನೆಕ್‌ನಿಂದ

ಅತ್ತಲಿನ ದ್ವಾರಕೆಯವರೆಗೂ ಚಲಿಸುತ್ತೇವಲ್ಲ ಯಾವ ಆಂಗಲ್‌ನ ಲ್ಲೂ ‘ಎಲ್ಲಿಗೋಯ್ತಿ ದಿಯೋ’ ಎನ್ನುವ ದೊಣ್ಣೆ ನಾಯಕ ನಿಲ್ಲವೇ ಇಲ್ಲ. ನಮ್ಮ ನೆಲ, ನಮ್ಮ ಜಲ, ನಮ್ಮ ತೀರ್ಥ ಅಷ್ಟೇ. ಆದರೆ ಇದು ವಿದೇಶದ ಯಾವ ನೆಲದಲ್ಲೂ ದಕ್ಕದ ಅನುಭೂತಿ. ಆ ಮಟ್ಟಿಗೆ ನಾನು ಭಾರತದ ಪುಣ್ಯ ಭೂಮಿಗೆ ಶರಣು. ಆವತ್ತು ನಾನು ನೇಪಾಳದಲ್ಲಿ ಇಳಿದಾಗಲೂ ಅನಾಮತ್ತು   ರಾತ್ರಿಯ  ಒಂಬತ್ತಾಗುತ್ತಿದ್ದರೆ, ನೇರವಾಗಿ ನೇಪಾಳದ ಹೃದಯ ಭಾಗವನ್ನು ತಲುಪಿ ಎಂದಿನಂತೆ ಎಷ್ಟೇ ಹೊತ್ತಾದರೂ ಆಯಾ ಹೊಸ ಊರಿನಲ್ಲಿ ಕಾಲಾಡಿಸಿ ಬರುವ ಉಮೇದಿನಲ್ಲಿ ಹೊರಬಿದ್ದವನಿಗೆ ಅಲ್ಲೂ ಇದೇ ರಾತ್ರಿಯ ಮೋಜು ಎದುರಾ ದದ್ದು ಮತ್ತು ನಿನ್ನೆ ಹಿತ್ರೂ – ಲಂಡನ್ ಏರ್‌ಪೋರ್ಟ್‌ಲ್ಲಿ  ಮಿಗ್ರೇಶನ್ನಿಗೆ ಉzನು ಉದ್ದದ ಕ್ಯೂ ನಿಂತು ಹೊರಬಿದ್ದಾಗ ಕಳೆದು ಹೋದ ಸಹನೆ ಮತ್ತು ಕುಸಿದು ಬೀಳುವಂತಾಗಿದ್ದ ಶಕ್ತಿ ಯನ್ನು ಮರುಗಳಿಸಲು, ಹಾ ನಮಗೂ ಈ ಕತ್ತಲ ಸಹವಾಸ ದಲ್ಲಿ ನೇಪಾಳಿ ತೀರ್ಥವನ್ನು ಭೈರವೇಶ್ವರನ ನೆಪದಲ್ಲಿ ತೆಗೆದುಕೊಂಡು ಬಿಡೋಣ ಎಂದು ಅನ್ನಿಸಿದ್ದರಲ್ಲಿ ಸಂಶಯವಿಲ್ಲ.

ನಿನ್ನೆ ಯೋಜಿಸಿದಂತೆ ಮುಂಬಯಿಯಿಂದ ಹೊರಟು ಪೋಲೆಂಡ್ ತಲುಪಿದಾಗಲೇ ಈ ಅನುಭವಕ್ಕೆ ಬಂದದ್ದು ಹೌದು. ಕಾರಣ ಎಲ್ಲೂ ಕಾಲಿಡಲೂ ಪಾಲಿಸಬೇಕಾದ ನಿಯಮಗಳಿವೆಯಲ್ಲ ಅದು ಭಾರತದಲ್ಲಿ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಮತ್ತು ಹಕ್ಕಿನ ಬಗ್ಗೆ ಒಂದು ಮನವರಿಕೆಗೆ ನಮ್ಮನ್ನು ದಬ್ಬುತ್ತದೆ. ನಮ್ಮ ಅಲೆಮಾರಿತನದ ಸ್ವಾತಂತ್ರ್ಯ ಕಿತ್ತು ಕೊಂಡಂತೆ ಅನಿಸುತ್ತೆ. ಅದರಲ್ಲೂ ಭಾಷೆ ಮತ್ತು ಸನ್ನೆಯೂ ಅರಿವಾಗದ ನೆಲಕ್ಕೆ ಕಾಲಿಟ್ಟರೆ ಅವರು ನಿಮ್ಮನ್ನು ಪ್ರಾಣಿಗಳಂತೆ ನೋಡುತ್ತಿದ್ದಾರೋ, ಅವರಿಗೇ ನೀವೇ ಪ್ರಾಣಿಯಾಗಿಸಿ ಕಾಣಿಸಿಕೊಳ್ಳುತ್ತಿದ್ದಿರೋ ಕೆಲವೊಮ್ಮೆ ಅರಿವಿಗೆ ಬರುವ ಮೊದಲೇ ಸಮಯ ಸರಿದಿರುತ್ತದೆ. ಅಲ್ಲಲ್ಲಿ ‘ಬೆಬ್ಬೆ ಬೆಬ್ಬೆ’ ಎಂದು ಸರಿದು ಹೋಗುವಾಗ ಅನ್ನಿಸದಿರುವ ಈ ಫೀಲಿಂಗ್‌ಗಳೆಲ್ಲ ಬರುವುದೇ ನಿರುಮ್ಮಳವಾಗಿ ಅಂಡೂರಿಕೊಂಡು ಕೂತಾಗ.

ಅದಕ್ಕೂ ಮೊದಲೂ ಏನೋ ಸ್ವರ್ಗಕ್ಕೆ ನಮಗೆ ಪಾಸು ಕೊಟ್ಟಂತೆ ಭಾರತೀಯ ಎಜೆಂಟರು ಅಥವಾ ಪ್ರಾಂಚೈಸಿಗಳು ಆಡುವ ಆಟವಿದೆಯಲ್ಲ ಅಪ್ಪಟ ದಂಧೆ. ಸರಿ ಸುಮಾರಾಗಿ ಮಿನಿಮಮ್ ಹಣದಲ್ಲಿ ಬರಬಹುದಾದ ವಿಸಾಕ್ಕೆ ಬೇರಾವ ಕಾರಣವೂ ಇಲ್ಲದೆ, ನಿಮ್ಮನ್ನು ಮೊದಲು ಆರೆಂಟು ವಾರಕಾಲ ಕೊಳೆ ಹಾಕಿ ನಿಮ್ಮ ಸಹನೆಯ ಲಿಮಿಟ್ಟನ್ನು ಪರಿಕ್ಷೀಸಿ, ನೀವೂ ಅದರಲ್ಲಿ ಉತ್ತಿರ್ಣರಾಗುವಂತೆ ಮಾಡುತ್ತಾರಲ್ಲ ಎಲ್ಲೂ ಉರಿದುಬಿಡುತ್ತದೆ. ಅದಕ್ಕೂ ಮೊದಲೇ ಹಾಗಾಗದಂತೆ ಇಂತಿಷ್ಟು ಕೊಟ್ಟು ವ್ಯವಹಾರ ಮುಗಿಸಿಕೊಳ್ಳಿ ಎಂದು ಪರೋಕ್ಷ ಆ-ರೂ ಬರುತ್ತದೆ. ಉದಾ: ಸಾಮಾನ್ಯ ವಿಸಾಗೆ ಹತ್ತುಸಾವಿರ ರು. ಎಂದಿದ್ದರೆ ಈ ಪರೋಕ್ಷ ಆಫರ್‌ನ ವಿಸಾಕ್ಕೆ ಸೀದಾ ಲಕ್ಷದ ಆಸುಪಾಸು. ಅಲ್ಲಿಗೆ ನನ್ನ ಪ್ರವಾಸದ ಬಜೆಟ್ಟಿನ ಅಷ್ಟೇ ಹಣ ವಿಸಾಕ್ಕೆ ಸುರಿಯ ಬೇಕಾಗುತ್ತದೆ. ಅದನ್ನೆ ಪ್ರಿಯಾರಿಟಿ ವಿಸಾ ಹೆಸರಲ್ಲಿ ನಿಮಗೆ ತಗಲಿಸುತ್ತಾರೆ.

ವಿಚಿತ್ರವೆಂದರೆ ಸಾಮಾನ್ಯ ವಿಸಾಕ್ಕೂ ಈ ಪ್ರಿಯಾರಿಟಿ ವಿಸಾಕ್ಕೂ ನೀವು ಸಲ್ಲಿಸಬೇಕಾದ, ನಾನು ನಾನೇ, ನಾನು ಬದುಕಿದ್ದೇನೆ, ನನಗೆ ರೋಗ ರುಜಿನಗಳಿಲ್ಲ, ಇದ್ದರೆ ಅದನ್ನೆಲ್ಲ ಎದುರಿಸುವಲ್ಲಿ ಸಮರ್ಥನಿದ್ದೇನೆ, ನಾನು ಸತ್ತರೆ ಏನು ಮಾಡಬೇಕು, ಅದಕ್ಕಾಗಿ ಬಳಸುವ ಇನ್ಶೂರೆನ್ಸ್ ಪಾಲಿಸಿ ಎಂಬಿತ್ಯಾದಿ ಮಣ್ಣು ಮಸಿ ಪೇಪರ್ ಗಳನ್ನೆಲ್ಲ ಇಲ್ಲೂ ಕೊಡಲೇಬೇಕು. ಎರಡರ ವ್ಯತ್ಯಾಸ ಇಷ್ಟೇ.
ಹಣ ಮಾತಾಡುತ್ತದೆ. (ನೆಪಕ್ಕೊಂದು ದಕ್ಕಿದ ವಿದೇಶ ಪ್ರವಾಸದ ಅವಕಾಶವನ್ನು ಬಳಸಿಕೊಳ್ಳುವವರು ಸರಕ್ಕನೆ ಇಂಥ
ಪ್ರಿಯಾರಿಟಿ ವಿಸಾಗೆ ಹಣ ಚೆಲ್ಲಿ, ಅದೆಲ್ಲ ಇನ್ಯಾರ ಕೈಯಿಂದ ಪೀಕಿಸಿ, ಮುಲಾಜಿಗೆ ಬೀಳುವವ ಸಿಕ್ಕರೆ ಅವನಿಂದ ಖರ್ಚು ಮಾಡಿಸುತ್ತ, ಹಾಗೆ ಖರ್ಚು ಮಾಡುವವರನ್ನೇ ಇರಿಸಿಕೊಂಡೂ ಇರುತ್ತಾರೆ.

ಒಟ್ರಾಶಿ ಹಾಗೆ ಸಿಕ್ಕುವ ಅವಕಾಶ ಮತ್ತು ಪುಕ್ಕಟೆ ದುಡ್ಡಿನಲ್ಲಿ ವಿದೇಶ ಪ್ರವಾಸ ಮಾಡುವವರ ಮಾತು ಬೇರೆ, ಅವರೆಲ್ಲ ದೊಡ್ಡ ಮನುಷ್ಯರು.) ಆದರೆ ನನ್ನಂಥ ಬಡ ಲೇಖಕ ಸ್ವತಃ ದುಡ್ಡು ನಂಬಿ ಅಲೆಮಾರಿಯಗುವುದಿದೆಯಲ್ಲ ಇದು ಜಗತ್ತಿನ ಅತಿ  ಬಾರಿ ಬಾಬತ್ತು. ಹಾಗಾಗಿ ಏನಾದರಾಗಾಲಿ ಮಾಮೂಲಿ ವೀಸಾಗಾಗಿ ಕಾಯುತ್ತ ಈ ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ
ನಡೆಯ ಲಿದ್ದ ರಾಜ್ಯೋತ್ಸವದ ಕಾರ್ಯಕ್ರಮವನ್ನೂ ನಾನು ತಪ್ಪಿಸಿಕೊಂಡು ಸುಮ್ಮನೆ ಪ್ರವಾಸಕ್ಕೆ ಹೊರಡುವಂತಾದದ್ದು
ಮರೆಯಲಾಗದ ಒಂದು ವಿಷಾದವೇ ನನಗೆ. ಹಾಗೆ ಸಾಮಾನ್ಯ ಪ್ರವಾಸಿಯಂತೆ ಕಾಯ್ದು, ಆಯ್ತು ನಿಮಗೆ ವೀಸಾ ಕೋಡ್ತೀನಿ ಎನ್ನಲೇ, ಹತ್ತಾರು ಪುಟದ ಸೈಟ್ ಕೇಳುವ ಅರ್ಜಿಯಂತೆ ಏನೆಲ್ಲ ಮಣ್ಣು ಮಸಿ ಲಿಸ್ಟ್ ಮಾಡಿ ತುಂಬಿಸಿಕೊಳ್ಳುತ್ತಾನಲ್ಲ, ಅದನ್ನೆಲ್ಲ ತೆಗೆದುಕೊಂಡು ಭಕ್ತಿ ಭಾವದಿಂದ ವಿಸಾ ಆಫೀಸ್ ಕದ ತಟ್ಟಿದರೆ ನಮ್ಮಂತೆ ನೂರಾರು ಪ್ಯಾದೆ ಮುಖದವು ಕಾಯುತ್ತ ನಿಂತಿರು ತ್ತಾರೆ.

ಒಳಗಿದ್ದವನು ಸಮಯಕ್ಕೆ ಸರಿಯಾಗಿ ಕರೆಸಿಕೊಂಡು ಸರಸರನೇ, ಎರಡು ನಿಮಿಷ ವೇಸ್ಟ್ ಮಾಡಿದರೆ ದಂಧೆಗೆ ಲಕ್ಷಾಂತರ ಲುಕ್ಸಾನು ಎಂಬಂತೆ, ಎಲ್ಲ ತೆಗೆದುಕೊಂಡು ಅದಿದೆಯಾ ಇದಿದೆಯಾ ಏನೂ ನೋಡದೆ, ಅದೆಲ್ಲ ತೆಗೆದುಕೊಂಡು ಸುಮ್ಮನೆ ದಬ್ಬಿ  ಕಳಿಸಿಬಿಡುತ್ತಾನೆ.

ಇಲ್ಲಿ ಎಲ್ಲ ಫಾರ್ಮಾಲೀಟೀಸ್ ನಾವೇ ಆನ್‌ಲೈನ್ ಮಾಡಿದ್ದರೆ, ವೀಸಾ ಪ್ರಾಂಚೈಸಿ ಏಜೆನ್ಸಿ ನಿಮ್ಮ ಕಡೆಗೆ ತಿರುಗಿಯೂ ನೋಡುವುದಿಲ್ಲ. ಕಾರಣ ಇ-ಪ್ರಾಸೆಸ್ಸಿನಲ್ಲಿ ಅವರಿಗೇನೂ ದಕ್ಕುವುದಿಲ್ಲ. ಇವತ್ತು ಮೊಬೈಲ್‌ನಿಂದ ಸ್ಕಾನ್ ಮಾಡುವುದಿಲ್ಲವೇ ಹಾಗೆ ಮಾಡಿ ಮರು ಭರ್ತಿ ಮಾಡುವುದಕ್ಕೆ ಅನಾಮತ್ತಾಗಿ ಎರಡು ಸಾವಿರ ಪೀಕುವ ದಂಧೆ ದಿನಕ್ಕೆ ಬರುವ ನೂರಾರು ಜನರದ್ದು ಎಷ್ಟಾಗುತ್ತದೆ? ಅದೆಲ್ಲ ನೀವೆ ಮಾಡಿಕೊಳ್ಳುತ್ತೇನೆ ಎಂದರೆ ಕಣ್ಣುರಿ ಆಗದಿರುತ್ಯೆ..? ಆದರೆ ಇಂಥದ್ದರಲ್ಲ ನಾನು ಜಿದ್ದಿನವ.

ಯಾವ ಎಕ್ಸ್‌ಟ್ರಾ ಫೀಸೂ ಕೊಡದೇ ಎಲ್ಲ ಪೂರೈಸಿಕೊಂಡೇ ಹೊರಟಿz. ಅಕಸ್ಮಾತ್ ನಿಮ್ಮ ಪೇಪರ್ ಸ್ಕಾನ್ ಮಾಡಿ ಲೋಡ್ ಮಾಡಿದ್ದು ಸರಿ ಇಲ್ಲದಿದ್ದರೆ ಅಥವಾ ಸಣ್ಣ ವ್ಯತ್ಯಾಸಕ್ಕೆ ಕೂಡಾ ಸರಕ್ಕನೆ ನಿಮ್ಮನ್ನು ರಿಜೆಕ್ಟ್ ಮಾಡಿ ಬಿಸಾಕಲು ಅವಕಾಶ ಇರುತ್ತದೆ. ಅದಾಗಬಾರದೆನ್ನುವ ಧಾವಂತದಲ್ಲಿ ನೀವಿದ್ದರೆ ಸಾವಿರಾರು ಪೀಕಲು ಸಲೀಸು. ಹೀಗೆ ಮಾತ್ರವಲ್ಲ ನೀವು ನೀವೇ ಎನ್ನುವುದರ ಜತೆಗೆ ನಿಮ್ಮವರಾರು ಆ ಸಾಮ್ರಾಜ್ಯದಲ್ಲಿ ಇದ್ದಾರೆ ಗುರು ಎಂದು ವಿಚಾರಿಸಿಕೊಂಡು ಅವರ ಪರ್ಮಿಟ್ ಕಾರ್ಡು, ಅವರ ಇನ್ವಿಟೇಷನ್ನು, ನೀನು ಖರ್ಚಿಗೆ ಅರ್ಹ ನಿದ್ದಿಯೋ ಇಲ್ಲವೋ ಎಂದು ಒಂದೈದು ಲಕ್ಷದ ಬ್ಯಾಲೆನ್ಸ್ ಶೀಟು, ಅದೂ ಇತ್ಲಾಗಿಂದು ಇದ್ದರೆ ಕಿತ್ತಾಕುವ ಸಂಭವವೂ ಪಕ್ಕಾ, ಅದಾದ ಮೇಲೆ ಇಂಥದ್ದೇ ಫೋಟೊ ಬೇಕೆಂದೂ, ನಾವು ಸ್ಟುಡಿಯೋ ಅಲೆದು ತೆಗೆದುಕೊಂಡು ಹೋದರೂ ಅದನ್ನು ತೆಗೆದುಕೊಳ್ಳದೆ ಅ ಕ್ಲಿಕ್ಕಿಸಿಕೊಳ್ಳುತ್ತಾರೆ.

ನೀವು ಇಲ್ಲಿ ಅವರು ಕೊಟ್ಟ ಸೈಜ್ ಚಾರ್ಟ್ ಹಿಡಿದು ಪ್ರಿಂಟಿಂಗ್ ಮಾಡಿಸುವಾಗ ಸರ್ಕಸ್ಸು ಮಾಡಿದ್ದೇ ಬಂತು. ಇದೆಲ್ಲ ಆದ ಮೇಲೂ ಯಾವ ಬ್ಯಾಗಿನಲ್ಲಿ ಏನಿರಬೇಕು, ಯಾವ ಬ್ಯಾಗೇಜ್ ಹೇಗಿರಬೇಕು. ಅದರ ಸೈಜು ಅದರ ತೂಕ ಅದಕ್ಕೆ ಎಂಥಾ ಚಾವಿ, ಕೈಯ್ಯಲ್ಲಿದ್ದ ಸಾಮಾನಿಗೆ ಎಷ್ಟು ತೂಕ ಇರಬೇಕು ಅದರ ಕತೆ ಏನು ಎಂಬೆಲ್ಲ ಮತ್ತೊಂದು ಎಪಿಸೋಡಿದೆಯಲ್ಲ ಅದು ಒಂದು ಅಂಕಣವನ್ನೇ ತಿನ್ನುವ ಬಾಬತ್ತು. ಸಧ್ಯಕ್ಕೆ ಆದತ್ಲಾಗಿರಲಿ.

ನೀವಿದನ್ನು ಓದುವ ಹೊತ್ತಿಗೆ ಭಾರತದವನಲ್ಲದಿದ್ದರೂ ನಮ್ಮನೆಯದೇ ಅಳಿಯ ಎಂಬಂತೆ ರಬ್ಬರ್ ಧಾರಾವಾಹಿ ಮಾಡಿ
ರಿಷಿ ಸುನೇಕರನ್ನು ತೋರಿಸಿದರಲ್ಲ, ಆ ಪ್ರಧಾನಿ ಅಕಸ್ಮಾತ ಕೈಗೆ ಸಿಕ್ಕರೆ ಇರಲಿ ಎಂದು ಸೆಂಟ್ರಲ್ ಲಂಡನ್ನಿನಲ್ಲಿ ಸುತ್ತುತ್ತಿರುತ್ತೇನೆ.
ಅವನಿಲ್ಲದಿದ್ದರೂ ಮೂಲ ಇಂಗ್ಲೆಂಡ್‌ನಲ್ಲಿ ನಿಂತು ತೆಗೆದುಕೊಳ್ಳಬಹುದಾದ ಸೆಲಿಗೆ ಮೋಸವಿಲ್ಲವೇ. ಹಾಗಾಗಿ ಬರುವ ವಾರ
ದಿಂದ ಹೊಸ ದೇಶದ ತಿರುಗಾಡೀಯ ಕತೆ ಹೇಳುತ್ತ ಅಲ್ಲಿವರೆಗೂ ಅಲೆಮಾರಿಯ ಡೈರಿಯಲ್ಲಿ ಓದುತ್ತಿರಿ ಲಂಡನ್ ಡೈರೀಸ್. ಕಾರಣ ಲಂಡನ್ನ ಊರಿನ ಒಂದೊಂದು ಆಫ್ ಬೀಟ್ ಮಾಹಿತಿ ಹೆಕ್ಕಿದರೆ ತಿರುಗಾಡಲು ತಿಂಗಳು ಸಾಲಲಿಕ್ಕಿಲ್ಲ.

ಆದರೂ ಇದ್ದುದರಲ್ಲಿ ಸಂದುಗೊಂದು ನುಸಿದು ಬರುವ ಉಮೇದಿಯಲ್ಲಿ ಇನ್ನಿಷ್ಟು ವಿಭಿನ್ನ ಕಥಾ ಸರಣಿ ಅಲೆಮಾರಿಯ ಓದುಗರಿಗೆ ದಕ್ಕೀತು ಎಂದು ಬ್ಯಾಪ್ ಪ್ಯಾಕ್ ಹೆಗಲಿಗೇರಿಸಿದ್ದೇನೆ.. ಮುಂದಿನ ವಾರ ಸೂರ್ಯ ಮುಳುಗದ ಸಾಮ್ರಾಜ್ಯದ
ಹೊಸ ಎಪಿಸೋಡಿನಿಂದಿಗೆ.. ಲಂಡನ್ ಡೈರೀಸ್…

error: Content is protected !!