Tuesday, 15th October 2019

ಸುತ್ತೂರು ಮಠಕ್ಕೆ ಬಿಎಸ್‌ವೈ ಭೇಟಿ, ಬನ್ನಿವೃಕ್ಷಕ್ಕೆ ಪೂಜೆ

ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠಕ್ಕೆೆ ಭೇಟಿ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುತ್ತೂರು ಶ್ರೀಗಳು ಫಲತಾಂಬೂಲ, ಸ್ಮರಣಿಕೆ ನೀಡಿ ಆಶೀರ್ವಾದಿಸಿದರು.

ಮೈಸೂರು: ನಾಡಹಬ್ಬ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಸುತ್ತೂರು ಮಠಕ್ಕೆೆ ಭೇಟಿ ನೀಡಿದ್ದರು. ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠಕ್ಕೆೆ ಭೇಟಿ ನೀಡಿದ ಅವರು, ಮಠದ ಆವರಣದಲ್ಲಿನ ಬನ್ನಿಿ ವೃಕ್ಷ ಮತ್ತು ಚಾಮುಂಡೇಶ್ವರಿ ದೇವಸ್ಥಾಾನಕ್ಕೆೆ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ಶಿವರಾತ್ರಿಿದೇಶಿಕೇಂದ್ರ ಸ್ವಾಾಮೀಜಿ ಅವರಿಂದ ಆಶೀರ್ವಾದ ಪಡೆದರು. ಈ ವೇಳೆ ಮಠದಿಂದ ಶಾಲು ಹೊದಿಸಿ, ಫಲತಾಂಬೂಲ, ಸ್ಮರಣಿಕೆ ನೀಡಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೌರವಿಸಲಾಯಿತು. ಬಳಿಕ ಸುತ್ತೂರುಶ್ರೀ-ಯಡಿಯೂರಪ್ಪ ಅವರು ಅನೌಪಚಾರಿಕವಾಗಿ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಮಠದ ಆವರಣಕ್ಕೆೆ ಯಡಿಯೂರಪ್ಪ ಪ್ರವೇಶ ಮಾಡುತ್ತಿಿದ್ದಂತೆ ಕೊಂಬುಕಹಳೆ ಊದಿ ಜಾನಪದ ಕಲಾತಂಡಗಳ ಕಲಾವಿದರ ನೃತ್ಯದ ಝಲಕ್‌ನೊಂದಿಗೆ ಬರಮಾಡಿಕೊಳ್ಳಲಾಯಿತು.

ಗಣ್ಯರ ದಂಡು: ಸುತ್ತೂರುಮಠಕ್ಕೆೆ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅಬ್ಕಾಾರಿ ಸಚಿವ ಆರ್.ನಾಗೇಶ್, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ,ಸಿ.ಎಸ್.ನಿರಂಜನಕುಮಾರ್, ಜಿ.ಟಿ.ದೇವೇಗೌಡ, ಅನಿಲ್‌ಚಿಕ್ಕಮಾದು, ಮೇಯರ್ ಪುಷ್ಪಲತಾ ಜಗನ್ನಾಾಥ್, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಾಂ ಮೊದಲಾದವರು ಭೇಟಿ ನೀಡಿ ಪ್ರಸಾದ ಸೇವಿಸಿದರು.

Leave a Reply

Your email address will not be published. Required fields are marked *