Friday, 6th December 2019

ಸ್ವಾಮೀಜಿ ವಿರುದ್ಧ ಏಕವಚನ ಪ್ರಯೋಗ; ಮಾಧುಸ್ವಾಮಿಗೆ ಸಿಎಂ ಕ್ಲಾಸ್

* ಚುನಾವಣಾ ಸಮಯದಲ್ಲಿ ಈ ರೀತಿಯ ವಿವಾದ ಸರಿಯಲ್ಲ
* ಕೂಡಲೇ ಈ ಬಗ್ಗೆೆ ಸ್ಪಷ್ಟನೆ ನೀಡುವಂತೆ ಬಿಎಸ್‌ವೈ ಸೂಚನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಸಚಿವ ಮಾಧುಸ್ವಾಾಮಿ ಅವರು ಹಾಲುಮತ ಶ್ರೀಗಳಿಗೆ ಅಗೌರವ ತೋರಿದ್ದಾಾರೆ ಎನ್ನುವ ವಿವಾದ ದೊಡ್ಡದಾಗುತ್ತಿಿದ್ದಂತೆ, ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಮಾಧುಸ್ವಾಾಮಿ ಅವರಿಗೆ ಕ್ಲಾಾಸ್ ತೆಗೆದುಕೊಂಡಿದ್ದಾಾರೆ ಎನ್ನಲಾಗಿದೆ.
ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮಾಧುಸ್ವಾಾಮಿ ಅವರು, ಕುರುಬ ಸಮುದಾಯದ ಪ್ರಭಾವಿ ಸ್ವಾಾಮೀಜಿ, ಹೊಸದುರ್ಗ ಮಠದ ಈಶ್ವರಾನಂದಪುರಿ ಶ್ರೀಗಳಿಗೆ ಏಕವಚನದಲ್ಲಿ ಮಾತನಾಡಿದ್ದಾಾರೆ ಎನ್ನುವುದು ಭಾರಿ ವಿರೋಧಕ್ಕೆೆ ಕಾರಣವಾಗಿತ್ತು. ಉಪಚುನಾವಣೆ ಹೊಸ್ತಿಿಲಲ್ಲಿ ಈ ರೀತಿಯ ವಿವಾದದಿಂದ ಕುರುಬ ಸಮುದಾಯ ಹೆಚ್ಚಿಿರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆೆ ಹೊಡೆತ ಬೀಳಲಿದೆ ಎನ್ನುವುದು ಸ್ಪಷ್ಟವಾಗುತ್ತಿಿದ್ದಂತೆ, ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಮಾಧುಸ್ವಾಾಮಿ ಅವರಿಗೆ ಈ ವಿಚಾರಕ್ಕೆೆ ಸಂಬಂಧಿಸಿದಂತೆ ತರಾಟೆಗೆ ತಗೆದುಕೊಂಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಮಂಗಳವಾರ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಮಾಧುಸ್ವಾಾಮಿ ಅವರೊಂದಿಗೆ ಚರ್ಚಿಸಿದ್ದು, ಚುನಾವಣಾ ಹೊಸ್ತಿಿಲಲ್ಲಿ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆೆ ಹೊಡೆತಬೀಳಲಿದೆ. ಕೂಡಲೇ ಈ ಬಗ್ಗೆೆ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಿದ್ದಾಾರೆ ಎನ್ನಲಾಗಿದೆ. ಆದರೆ, ಶ್ರೀಗಳಿಗೆ ಅವಮಾನಿಸುವ ಉದ್ದೇಶದಿಂದ ಏಕವಚನ ಬಳಸಿಲ್ಲ. ಭಾಷಣ ಮಾಡುವಾಗ ಈ ರೀತಿಯಾಗಿರಬಹುದು. ಯಾವುದೇ ತಪ್ಪಿಿಲ್ಲ ಎನ್ನುವ ಸ್ಪಷ್ಟೀಕರಣವನ್ನು ಮಾಧುಸ್ವಾಾಮಿ ಅವರು ಯಡಿಯೂರಪ್ಪ ಅವರಿಗೆ ನೀಡಿದ್ದಾಾರೆ ಎಂದು ತಿಳಿದುಬಂದಿದೆ.

ಏನಿದು ವಿವಾದ?:
ಇತ್ತೀಚಿಗೆ ಹುಳಿಯಾರು ಪಟ್ಟಣದಲ್ಲಿ ಕನಕದಾಸ ವೃತ್ತದಲ್ಲಿದ್ದ ಕನಕದಾಸರ ಭಾವಚಿತ್ರವನ್ನು ತೆರವುಗೊಳಿಸಲಾಗಿತ್ತು. ಈ ವಿವಾದ ಕಾವು ಪಡೆದುಕೊಂಡು, ಪರಿಸ್ಥಿಿತಿ ಉದ್ವಿಿಗ್ನಗೊಂಡಿತ್ತು. ಈ ವೇಳೆ ಸಂಧಾನ ನಡೆಸುವಾಗ ಸಚಿವ ಮಾಧುಸ್ವಾಾಮಿ ಅವರು ಈಶ್ವರಾನಂದಪುರಿ ಶ್ರೀಗಳಿಗೆ ಏಕವಚನದಲ್ಲಿ ಮಾತನಾಡಿದ್ದಾಾರೆ ಎನ್ನುವುದು ವಿವಾದವಾಗಿದೆ.
ಸಂಧಾನದ ವೇಳೆ, ಕನಕದಾಸರ ಹೆಸರು ಇಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಈಶ್ವರಾನಂದಪುರಿ ಶ್ರೀಗಳು ಎಚ್ಚರಿಕೆ ನೀಡುತ್ತಿಿದ್ದಂತೆ ಕೋಪಗೊಂಡ ಮಾಧುಸ್ವಾಾಮಿ, ‘ನೀನು ಏನು ಧಮ್ಕಿಿ ಹಾಕ್ತಿಿಯೇನೋ’ ಎಂದು ಹೇಳಿದ್ದರು. ಈ ರೀತಿ ಮಾತನಾಡಿರುವ ವಿಡಿಯೊ ವೈರಲ್ ಆಗುತ್ತಿಿದ್ದಂತೆ ಮಾಧುಸ್ವಾಾಮಿ ವಿರುದ್ಧ ಸಮುದಾಯದವರು ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಈ ವಿಚಾರಕ್ಕೆೆ ಸಂಬಂಧಿಸಿದಂತೆ ಹಾಲುಮತ ಸಮುದಾಯದವರು ಮಾಧುಸ್ವಾಾಮಿ ವಿರುದ್ಧ ಮುನಿಸಿಕೊಂಡಿದ್ದು, ಕೂಡಲೇ ಅವರು ಕ್ಷಮೆಯಾಚಿಸಬೇಕು ಅಥವಾ ಸಚಿವ ಸ್ಥಾಾನಕ್ಕೆೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ ಮಾಧುಸ್ವಾಾಮಿ ಅವರು ತಾವು ಯಾವುದೇ ತಪ್ಪುು ಮಾಡಿಲ್ಲ ಎಂದಿದ್ದಕ್ಕೆೆ ವಿವಾದ ಮತ್ತಷ್ಟು ಕಾವು ಪಡೆದಿತ್ತು. ಇದೇ ವಿಚಾರಕ್ಕೆೆ ಸಂಬಂಧಿಸಿದಂತೆ ಹಾಲುಮತ ಸಮುದಾಯದವರು ಮಂಗಳವಾರ ರಾಜ್ಯಾಾದ್ಯಂತ ಮುಷ್ಕರಕ್ಕೆೆ ಕರೆ ನೀಡಿದ್ದರು. ಜಿಲ್ಲಾಾಧಿಕಾರಿಗಳಿಗೆ ಮಾಧುಸ್ವಾಾಮಿ ವಿರುದ್ಧ ದೂರು ನೀಡುವುದರೊಂದಿಗೆ ಇದೇ ವಿಚಾರಕ್ಕೆೆ ಸಂಬಂಧಿಸಿದಂತೆ ರಾಜ್ಯಪಾಲ ವಿ.ಆರ್.ವಾಲಾ ಅವರಿಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು.

Leave a Reply

Your email address will not be published. Required fields are marked *