Friday, 19th August 2022

ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌’ಗೆ ಕೋವಿಡ್‌ ಪಾಸಿಟಿವ್‌

ನವದೆಹಲಿ: ಬಲಪಂಥೀಯರ ಮತ್ತು ಸಂಘಪರಿವಾರ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತುವ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ತಮಗೆ ಕೋವಿಡ್‌ ಪಾಸಿಟಿವ್‌ ಆದ ವಿಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಿದ್ದಾರೆ.

ಇದೀಗ ಟ್ವಿಟರ್‌ ನಾದ್ಯಂತ ಸ್ವರಾ ಭಾಸ್ಕರ್‌ ಟ್ರೋಲ್‌ ಗೊಳಗಾಗಿದ್ದು ಮಾತ್ರವಲ್ಲದೇ ಅವರಿಗೆ ಕೋವಿಡ್‌ ಸೋಂಕು ತಗಲಿರುವುದರ ಕುರಿತು ಸಂಭ್ರಮಾಚರಣೆ ನಡೆಸಲಾಗುತ್ತಿದೆ.

ಕೋವಿಡ್-‌೧೯ ಗೆ ಸ್ವರಾ ಭಾಸ್ಕರ್‌ ಎಂಬ ಅತೀದೊಡ್ಡ ವೈರಸ್‌ ತಗಲಿದೆ. ಕೋವಿಡ್‌ ಅನ್ನು ಕಾಪಾಡಬೇಕಾಗಿ ಪ್ರಧಾನಿಯಲ್ಲಿ ಮನವಿ ಮಾಡುತ್ತಿದ್ದೇವೆ” ಎಂದು ವ್ಯಕ್ತಿಯೋರ್ವ ಟ್ವೀಟ್‌ ಮಾಡಿದ್ದರೆ, ಇನ್ನು ಕೆಲವರು ಅಶ್ಲೀಲ ಚಿತ್ರಗಳನ್ನು ಮತ್ತು ಕಾಮೆಂಟ್‌ ಗಳನ್ನು ಹಾಕಿ ವಿಕೃತಿ ಮೆರೆದಿದ್ದಾರೆ.

ಇನ್ನು ಹಲವಾರು ಮಂದಿ ಅಭಿಮಾನಿಗಳು ಸ್ವರಾಭಾಸ್ಕರ್‌ ಹಾಗೂ ಅವರ ಕುಟುಂಬವು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.