Friday, 27th May 2022

ಶಸ್ತ್ರಚಿಕಿತ್ಸೆಗೆ ಒಳಗಾದ ಟೀಂ ಇಂಡಿಯಾ ವೇಗಿ ಟಿ.ನಟರಾಜನ್

ಮುಂಬೈ: ಟೀಂ ಇಂಡಿಯಾದ ಯಾರ್ಕರ್‌ ಸ್ಪೆಶಲಿಸ್ಟ್‌ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್ ಮಂಗಳವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ಬಾರಿಯ ಐಪಿಎಲ್ ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ನಟರಾಜನ್ ಹೈದರಾಬಾದ್ ತಂಡದ ಪರ ಕಣಕ್ಕಿಳಿ ದಿದ್ದರು. ಆದರೆ ಮೊಣಕಾಲಿನ ಗಾಯಕ್ಕೆ ಒಳಗಾಗಿ ಕೂಟದಿಂದಲೇ ಹೊರಬಿದ್ದಿದ್ದರು. ಕಳೆದ ಬಾರಿಯ ಐಪಿಎಲ್ ನಲ್ಲಿ ಮಿಂಚಿದ್ದ ನಟರಾಜನ್ ಟೀಂ ಇಂಡಿಯಾಗೆ ಪ್ರವೇಶ ಪಡೆದಿದ್ದರು. ಆಸೀಸ್ ಸರಣಿಯಲ್ಲಿ ಮೂರು ಮಾದರಿ ಯಲ್ಲೂ ಪದಾರ್ಪಣೆ ಮಾಡಿದ್ದರು.