ಬೆಂಗಳೂರು: ಏಳು ವರ್ಷದ ಬಾಲಕಿಯೊಬ್ಬಳು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಶೇಷ ರೀತಿಯಲ್ಲಿ ಮನವಿ ಸಲ್ಲಿಸಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡನೇ ತರಗತಿ ಓದುತ್ತಿರುವ ಏಳು ವರ್ಷದ ಎಲ್.ಧವನಿ ಯ ಸಾಮಾಜಿಕ ಕಳಕಳಿಗಾಗಿ ಮೆಚ್ಚುಗೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ದಾಳೆ. ಬೆಂಗಳೂರಲ್ಲಿ ರಸ್ತೆಗಳೆ ಸರಿಯಿಲ್ಲ. ಅದರಿಂದ ಸುಮಾರು ಜನ ಸಾವಿಗೀಡಾಗುತ್ತಿದ್ದಾರೆ. ಅವರು ಸತ್ತರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ. ನೀವೆ ಹೇಳಿ ತಾತ ಎಂದು ಸಿಎಂ ಅವರಲ್ಲಿ ಧವನಿ […]