ಬೆಂಗಳೂರು: ಯಶವಂತಪುರ ಉಪವಿಭಾಗದಿಂದ ಕಾಣೆಯಾಗಿದ್ದ ಏಳು ವಿದ್ಯಾರ್ಥಿಗಳ ಪೈಕಿ ಮೂವರು ಪತ್ತೆ ಯಾಗಿದ್ದು, ಉಳಿದ ನಾಲ್ವರಿಗಾಗಿ ಪೊಲೀಸರ ಶೋಧ ಮುಂದುವರೆದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಜಿಬಿ ಲೇಔಟ್‍ನ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನ ಮೂರನೆ ವರ್ಷದ ಬಿಸಿಎ ವಿದ್ಯಾರ್ಥಿನಿ ಅಮೃತ ವರ್ಷಿಣಿ (21), ರಾಯನ್ ಸಿದ್ಧಾರ್ಥ್ (12), ಚಿಂತನ್ (12) ಮತ್ತು ಭೂಮಿ (12) ಪೋಷಕರಿಗೆ ತಿಳಿಸದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ನಾಲ್ವರ ಪತ್ತೆಗಾಗಿ ಪೊಲೀಸರು ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಒಂದು ತಂಡ ಮೈಸೂರು, ಮತ್ತೊಂದು […]