ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಎಲ್ಲಾ ಬಿಟ್ಟು ಭಂಗಿ ನೆಟ್ಟ ಎಂಬ ಗಾದೆಯಂತೆ ಲಾಕ್‌ಡೌನ್ ಕಾಲದಲ್ಲಿ ಊರಿಗೆ ಮುಂಚೆ ಬಾರ್‌ಗಳನ್ನು ತೆರೆದಾಗಲೇ ಕುಡುಕರು ಹೆಮ್ಮೆಪಟ್ಟುಕೊಂಡಿದ್ದರು. ಸರಕಾರದ ಬೊಕ್ಕಸ ತುಂಬಿಸುವವರೇ ನಾವುಗಳು. ನಮ್ಮಿಂದಲೇ ಸರಕಾರಕ್ಕೆ ಆದಾಯ ಎಂದು ನಿರೂಪಿಸಿದ್ದರು. ಏಕೆಂದರೆ ಕರೋನಾ ಕಂಟಕದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿ ಆರ್ಥಿಕ ಸ್ಥಿತಿ ನೆಲಕಚ್ಚಿದ ಸಂದರ್ಭ ದಲ್ಲಿ ಬಾರ್‌ಗಳನ್ನು ತೆರೆದಾಗ ದಿನದಿಂದ ದಿನಕ್ಕೆ ನೂರಾರು ಕೋಟಿಗಳ ವ್ಯಾಪಾರ ಲಾಭಗಳಾಗಿ ಹಾಳೂರಿಗೆ ಉಳಿದೊಬ್ಬನೇ ಗೌಡ ಎಂಬಂತೆ ಅಬಕಾರಿ […]