Monday, 8th March 2021

ನಿರ್ಭಯಾ ಹಂತಕರು ದೇಶದ ತಾಳ್ಮೆ ಪರೀಕ್ಷಿಸುತ್ತಿದ್ದಾರೆ: ಕೇಂದ್ರ

ನಿರ್ಭಯಾ ಹಂತಕರ ಪ್ರಕರಣವು ದೇಶದ ತಾಳ್ಮೆಯನ್ನೇ ಪರೀಕ್ಷೆ ಮಾಡುತ್ತಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದ್ದು, ಅತ್ಯಾಚಾರಿಗಳ ಮರಣದಂಡವನ್ನು ಮುಂದೂಡುವ ಕೋರ್ಟ್‌ನ ಆದೇಶಕ್ಕೆ ಸ್ಟೇ ತರಲು ಕೋರಿದೆ. ಹೈದರಾಬಾದ್‌ ಪಶುವೈದ್ಯೆಯ ಅತ್ಯಾಚಾರಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಉದಾಹರಣೆಯನ್ನು ಮುಂದಿಟ್ಟ ಸಾಲಿಸಿಟರ್‌ ಜನರಲ್ ತುಶಾರ್‌ ಮೆಹ್ತಾ, “ಕ್ರಮಿನಲ್ ಪ್ರಕರಣದಲ್ಲಿ ನ್ಯಾಯ ಸಿಗುವ ವಿಚಾರವಾಗಿ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಮೇಲ್ಕಂಡ ನಿದರ್ಶನಗಳು ತೋರುತ್ತಿವೆ,” ಎಂದಿದ್ದಾರೆ. ಅತ್ಯಾಚಾರಿಗಳು & ಕೊಲೆಗಡುಕರಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್‌ ಠಾಕೂರ್‌ ಹಾಗೂ […]

ಮುಂದೆ ಓದಿ