ಬೆಳಗಾವಿ: ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ತಾಯಿ ಅಂತ್ಯಕ್ರಿಯೆಗೆ ದುಡ್ಡಿಲ್ಲದ ಪರಿಣಾಮ ತಾಯಿಯ ಅಂತ್ಯಕ್ರಿಯೆಗಾಗಿ ಮಕ್ಕಳು ಮೂರು ದಿನ ಕಾಯ್ದು ಕುಳಿತ ಮನಕಲುಕುವ ಘಟನೆ ಕುಂದಾನಗರಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳ ಹಿಂದೆ #(ಅ.16) ತಾಲೂಕಿನ ಗಣೇಶಪುರ ಗ್ರಾಮದ ನಿವಾಸಿ ಭಾರತಿ ಬಸ್ತವಾಡಕರ್ (50) ಬಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಮೃತ ಭಾರತಿ ಅವರ ಇಬ್ಬರು ಗಂಡು ಮಕ್ಕಳು ಹೋಟೆಲ್ನಲ್ಲಿ ಕೆಲಸ ಮಾಡಿ ಕೊಂಡಿದ್ದರು. ಆದರೆ ಕೊರೊನಾ ವೈರಸ್ ತಡೆಗೆ […]