Friday, 15th November 2019

ಕುದಿ ಕಾಶ್ಮೀರಕ್ಕೆ ನೆಮ್ಮದಿಯ ಸಿಂಚನ!

ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೊಬ್ಬರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿಯನ್ನು ಅಸಿಂಧುಗೊಳಿಸಿರುವ ಕೇಂದ್ರ ಸರಕಾರದ ನಡೆ, ಕಾಶ್ಮೀರಿ ಜನತೆಗೆ ವಿಶ್ವಾಸದ್ರೋಹವೆಸಗಿದಂತಾಗಿದೆ. ಕಾಶ್ಮೀರ ರಾಜ್ಯವನ್ನು ವಿಭಜಿಸಿರುವುದು ತಮ್ಮ ದೇಹದ ಭಾಗಗಳನ್ನು ತುಂಡರಿಸಿ ಇರಿಸಿದಂತಾಗಿದೆ. ಇಷ್ಟು ಮಾತ್ರವಲ್ಲ, ತಮ್ಮನ್ನು ಕೇಂದ್ರ ಸರಕಾರ ಗ್ರಹಬಂಧನದಲ್ಲಿರಿಸಿರುವದಾಗಿ ಆರೋಪಿಸಿ, ಕಂಬನಿ ಮಿಡಿಯುತ್ತಾಾ, ಕಾಶ್ಮೀರಿ ಜನತೆಗಾಗಿ ತಮ್ಮ ಹೋರಾಟವನ್ನು ತಾವು ಜೀವಿಸಿರುವವರೆಗೆ ಮುಂದುವರಿಸುವದಾಗಿ ಘೋಷಿಸಿದ್ದಾಾರೆ. ಕಣಿವೆ ರಾಜ್ಯದ ಹಿತಚಿಂತಕರು ತಾವೆಂದು ಬಿಂಬಿಸಿಕೊಳ್ಳುತ್ತಿಿರುವ ಇಂಥ ರಾಜಕೀಯ ನಾಯಕರ ಚಿಂತನೆಗಳು-ಘೋಷಣೆಗಳು […]

ಮುಂದೆ ಓದಿ