ರತ್ನಗಿರಿ: ಅಣೆಕಟ್ಟು ಕುಸಿದು 11 ಮಂದಿ ಸಾವು, 21 ಮಂದಿ ಕಾಣೆ

ರತ್ನಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಇಲ್ಲಿನ ತಿವಾರೆ ಅಣೆಕಟ್ಟು ಕುಸಿದು ಐವರು ವೃದ್ಧರು ಮತ್ತು ಇಬ್ಬರು ಹದಿಹರೆಯದವರು ಸೇರಿದಂತೆ 11 ಜನ ಮೃತಪಟ್ಟಿದ್ದು, ಬುಧವಾರ ಮೃತರ ಶವಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ. ಮಂಗಳವಾರ ತಡರಾತ್ರಿ ದುರ್ಘಟನೆ ಸಂಭವಿಸಿದ್ದು, ಬಾರೀ ಮಳೆಯಿಂದಾಗಿ ಚಿಪ್ಲುನ್ ತಹಸಿಲ್ ತಿವಾರೆ ಅಣೆಕಟ್ಟು ಗೋಡೆ ಕುಸಿದಿದೆ. ಬಲಿಯಾದವರೆಲ್ಲರೂ ಅಣೆಕಟ್ಟು ಗೋಡೆಯ ಪಕ್ಕದಲ್ಲಿದ್ದ ಭೇಂದೇವಾಡಿ ಕುಗ್ರಾಮದವರು ಎಂದು ವಿಪತ್ತು ನಿರ್ವಹಣಾ ಅಧಿಕಾರಿ ಅಜಯ್ ಸೂರ್ಯವಂಶಿ ತಿಳಿಸಿದ್ದಾರೆ. ದಾದರ್, ಅಕ್ಲೆ, ರಿಕ್ಟೋಲಿ, […]

ಮುಂದೆ ಓದಿ