ಇಪ್ಪತ್ತನೆ ಶತಮಾನದ ಆದಿಯಲ್ಲಿ, ಸರಿಯಾಗಿ ಹೇಳಬೇಕೆಂದರೆ 1919ರಲ್ಲಿ, ಕನ್ನಡ ರಂಗಭೂಮಿಯು ಒಂದು ಹೊಸ ದಿಕ್ಕಿಗೆ ಹೊರಳಿಕೊಂಡಿತು. ಕಾವ್ಯಜಗತ್ತಿನಲ್ಲಿ ಅರುಣೋದಯ, ನವೋದಯ ಇತ್ಯಾದಿ ಕಾಲಘಟ್ಟಗಳನ್ನು ಗುರುತಿಸುವಂತೆ ನಾಟಕಕ್ಷೇತ್ರದಲ್ಲಿ ಗುರುತಿಸುವ ಪರಿಪಾಠ ಅದೇಕೋ ಇದ್ದಂತೆ ಕಾಣುವುದಿಲ್ಲ. ಆದರೆ ಕನ್ನಡ ನಾಟಕ ತನ್ನ ಹಳೆವೇಷಗಳನ್ನೆಲ್ಲ ಕಳಚಿ, ಕಿರೀಟ-ಕತ್ತಿಗಳನ್ನು ಪಕ್ಕಕ್ಕಿಟ್ಟು ಹೊಸ ರೂಪ ಧರಿಸಿ ಮೈಚಳಿಬಿಟ್ಟು ರಂಗಕ್ಕೇರಿದ ವರ್ಷ ಯಾವುದು ಎಂದರೆ ಅದು ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದಿನ 1919. ಯಾಕೆಂದರೆ ಆ ವರ್ಷ ಬೆಂಗಳೂರಿನ ಎಡಿಎ ಸಂಸ್ಥೆ ಏರ್ಪಡಿಸಿದ್ದ ಶ್ರೀಕಂಠೀರವ […]