ಚೆನ್ನೈ: ನಟಿ ಸಾಯಿ ಪಲ್ಲವಿ ಅವರು ಚಿತ್ರರಂಗದಲ್ಲಿ ಮಾಡಿರುವ ಸಾಧನೆ ದೊಡ್ಡದು. ಈಗಾಗಲೇ ಅವರು ಬಹುಭಾಷಾ ಕಲಾವಿದೆಯಾಗಿ ಮಿಂಚಿದ್ದಾರೆ. ಟಾಲಿವುಡ್, ಕಾಲಿವುಡ್, ಮಲಯಾಳಂ ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ಅವರು ಜೋಡಿಯಾಗಿ ನಟಿಸಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಸಖತ್ ಕಾಳಜಿ ವಹಿಸುತ್ತಾರೆ. ಅತಿಯಾದ ಗ್ಲಾಮರ್ ಎಂದರೆ ಅವರಿಗೆ ಅಲರ್ಜಿ. ನಟನೆಯ ಮೂಲಕವೇ ಅವರು ಜನರ ಮನ ಗೆದ್ದಿದ್ದಾರೆ. ಈಗ ಅವರ ಸಹೋದರಿ ಪೂಜಾ ಕಣ್ಣನ್ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಚಿತ್ತಿರ ಚೆವ್ವಾನಂ’ ರಿಲೀಸ್ಗೆ ಸಿದ್ಧವಾಗಿದೆ. ಅಕ್ಕ […]